ಅಕ್ರಮವಾಗಿ ಶೆಡ್ಡಗಳನ್ನು ನಿರ್ಮಾಣ ಮಾಡಿಕೊಂಡಿದ್ದ ಬಡವರ ಮನೆಗಳ ನೇಲ ಸಮ..

ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಸೈದಾಪುರ ಸಮೀರವಾಡಿ ವ್ಯಾಪ್ತಿಯ ಘಟಪ್ರಭಾ ಎಡದಂಡೆ ಕಾಲುವೆಯ ಉಪ ಕಾಲುವೆ ಮೇಲೆ ಸುಮಾರು ಮೂವತ್ತು ವರ್ಷಗಳಿಂದ ವಾಸ ಮಾಡುತ್ತಿದ್ದ ನಿರ್ಗತಿಕರ ಮನೆ ಮತ್ತು ಅಂಗಡಿಗಳ ತೆರವು ಮಾಡಿದ ನೀರಾವರಿ ಇಲಾಖೆ ಅಧಿಕಾರಿಗಳು ಇಂದು ಬೆಳಗ್ಗೆ ತೆರವು ಕಾರ್ಯಾಚರಣೆ ನಡೆಸಿದ ನೀರಾವರಿ ಇಲಾಖೆ ಮತ್ತು ತಾಲ್ಲೂಕಾಡಳಿತ ಹಾಗೂ ಪೋಲಿಸ್ ಇಲಾಖೆ ಕಳೆದ ಎರಡು ತಿಂಗಳಿನಿಂದ ಕೋರ್ಟ್ ಆದೇಶದ ಪ್ರಕಾರ ಅಲ್ಲಿನ ನಿವಾಸಿಗಳಿಗೆ ನೋಟೀಸ್ ನೀಡಿ ಸ್ವ ಇಚ್ಛೆಯಿಂದ ತೆರವು ಗೋಳಿಸಿಕೊಳ್ಳಿ ಎಂದು ನೋಟಿಸ್ ನಿಡಿದ್ದರು ಸಹ ನಿವಾಸಿಗಳು ತೆರವು ಗೋಳಿಸದೆ ಇದ್ದಿದ್ದರಿಂದ ಇಂದು ತೆರವು ಗೋಳಿಸಿದ ಇಲಾಖೆ ಎರಡು ನೂರಕ್ಕೂ ಹೆಚ್ಚು ಅಧಿಕಾರಿಗಳ ಮತ್ತು ಸಿಬ್ಬಂದಿಗಳ ತಂಡ ಸ್ಥಳಕ್ಕೆ.

ದುರ್ಧೈವ ಸಂಗತಿ ಅಂದರೆ ಈ ನಿವಾಸಿಗಳಿಗೆ ಸ್ಥಳೀಯ ಸಂಸ್ಥೆಗಳಾಗಲಿ ಕಂದಾಯ ಇಲಾಖೆಯಾಗಲಿ ನಿರ್ದಿಷ್ಟ ಜಾಗ ನೀಡದೆ ಒಮ್ಮೆ ಏಕಾ ಏಕಿ ತೆರವು ಗೋಳಿಸಿದ್ದು ಬಡಕಟುಂಬಗಳು ಬೀದೆಗೆ ಬಿದ್ದು ದಿಕ್ಕು ತೊಚದೆ ರಸ್ತೆಗಳ ಮೇಲೆ ತಮ್ಮ ಸಾಮಗ್ರಿಗಳನ್ನು ಇಟ್ಟು ಕಣ್ಣಿರು ಹಾಕಿತ್ತಿರುವುದು ಎಂತವರ ಮನ ಕಲಕುವಂತೆ ಮಾಡಿದೆ ಕೆಲವರಂತು ಸರ್ಕಾರಕ್ಕೆ ಮತ್ತು ಶ್ರೀಮಂತರಿಗೆ ಸ್ಥಳ ಅವಕಾಶಕ್ಕೆ ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ.ಇದರ ಮದ್ಯ ವಯೋವೃದ್ದರಂತು ಸರ್ಕಾರಕ್ಕೆ ಹಿಡಿಶಾಪ ಹಾಕಿ ತಮ್ಮ ಅಳಲನ್ನು ತೊಡಿಕೊಳ್ಳುತ್ತಿದ್ದಾರೆ .

ವರದಿ.
ಬಸವರಾಜ ನಂದೆಪ್ಪನವರ ಸೈದಾಪುರ-ಸಮೀರವಾಡಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
