ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ.
ವನ್ಯಜೀವಿಗಳ ರಕ್ಷಣೆ ಕುರಿತು ಅರಣ್ಯ ಇಲಾಖೆಯಿಂದ ಧ್ವನಿವರ್ಧಕದಲ್ಲಿ ಪ್ರಚಾರ
ಕೂಡ್ಲಿಗಿ ಮತ್ತು ಗುಡೆಕೋಟೆ ವಲಯದ ಅರಣ್ಯ ಇಲಾಖೆ ವತಿಯಿಂದ ತಾಲ್ಲೂಕಿನ ನಾನಾ ಭಾಗದಲ್ಲಿ, ಅರಣ್ಯ ಇಲಾಖೆಯ ವಾಹನದ ಧ್ವನಿವರ್ಧಕದ ಮೂಲಕ, ಯುಗಾದಿಯ ಹಬ್ಬದ ಸಂದರ್ಭದಲ್ಲಿ ವನ್ಯಜೀವಿಗಳನ್ನು ಬೇಟೆಯಾಡುವುದು, ವನ್ಯಜೀವಿಗಳನ್ನು ಹಿಂಸಿಸುವುದು, ಕುರಿತು ವಾಹನದ ಧ್ವನಿವರ್ಧಕದ ಮೂಲಕ ಹಳ್ಳಿಹಳ್ಳಿಗಳಲ್ಲಿ ಪ್ರಚಾರಪಡಿಸಿದರು ವನ್ಯಜೀವಿಗಳನ್ನು ಹಿಂಸಿಸುವುದು ಮತ್ತು ಮೋಜು ಮಸ್ತಿಗಾಗಿ ಬೇಟೆಯಾಡುವುದು, ಕಾನೂನುಬಾಹಿರ, ಒಂದು ವೇಳೆ ಈ ರೀತಿ ಯಾರಾದರೂ ಮಾಡಿದರೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುವುದು, ಬೇಟೆಯಾಡುವುದು ಅಥವಾ ವನ್ಯಜೀವಿಗಳನ್ನು ಹಿಂಸಿಸುವುದನ್ನು ಕಂಡರೆ ಈ ಕೃತ್ಯಕ್ಕೆ ತಕ್ಕಂತೆ ದಂಡ ಹಾಗೂ ಕಾನೂನು ಪ್ರಕಾರ ಜೈಲು ಶಿಕ್ಷೆ ವಿಧಿಸಲಾಗುವುದು. ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಧ್ವನಿವರ್ಧಕದ ಮೂಲಕ ಹಳ್ಳಿಹಳ್ಳಿಗಳಲ್ಲಿ ಪ್ರಚಾರ ಪಡಿಸಿ, ಸಾರ್ವಜನಿಕರಲ್ಲಿ ಮನವಿ ಮಾಡಿ ಜಾಗೃತಿ ಮೂಡಿಸಿದರು. ಈ ಪ್ರಚಾರದಲ್ಲಿ ಕೂಡ್ಲಿಗಿ,ಗುಡೇಕೋಟೆ ಹಾಗೂ ಹೊಸಹಳ್ಳಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಸಾರ್ವಜನಿಕರು ಇತರರು ಇದ್ದರು…

ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
