;

ದಂಡಾಧಿಕಾರಿಗಳ ಸಮ್ಮುಖದಲ್ಲಿ ಬಾಬು ಜಗಜೀವನರಾಮ್ ಹಾಗೂ ದೇವರ ದಾಸಿಮಯ್ಯ ಜಯಂತಿಯ ಪೂರ್ವಬಾವಿ ಸಭೆಯನ್ನು ಕರೆಯಲಾಗಿತ್ತು…!!!

ಸಿಂಧನೂರು:ಮಾ.31.ನಗರದ ತಹಶಿಲ್ ಕಾರ್ಯಾಲಯ ಸಭಾಂಗಣದಲ್ಲಿ ತಾಲೂಕ ದಂಡಾಧಿಕಾರಿ ಮಂಜುನಾಥ್ ಬೋಗಾವತಿ ರವರ ನೇತೃತ್ವದಲ್ಲಿ ಬಾಬು ಜಗಜೀವನರಾಮ್ ಹಾಗೂ ದೇವರ ದಾಸಿಮಯ್ಯ ಜಯಂತಿಯ ಪೂರ್ವಬಾವಿ ಸಭೆಯನ್ನು ಕರೆಯಲಾಗಿತ್ತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳೆದ 2 ವರ್ಷಗಳಿಂದ ಕೋವಿಡ್ ಸೊಂಕು ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯದಂತೆ ಸರಳವಾಗಿ
ಎಲ್ಲಾ ಮಹನೀಯರ ಜಯಂತಿಯನ್ನು ಆಚರಿಸಲಾಗಿತ್ತು ಕೋವಿಡ್ ಸೋಂಕು ಪ್ರಕರಣ ಇಳಿಮುಖವಾದ್ದರಿಂದ ಏ.5 ರಂದು ಹಸಿರು ಕ್ರಾಂತಿಯ ಹರಿಕಾರ ಡಾ.ಜಗಜೀವನ್ ರಾಮ ಜಯಂತಿಯ ಅಂಗವಾಗಿ
ನಗರದ ನಗರಸಭೆ ಕಚೇರಿ ಮುಂಭಾಗದಲ್ಲಿ ಬಾಬು ಜಗಜೀವನ ರಾಮ್ ಭಾವಚಿತ್ರ ವಿರುವ ವಾಹನಕ್ಕೆ ಶಾಸಕ ವೆಂಕಟರಾವ್ ನಾಡಗೌಡ ಚಾಲನೆ ನೀಡುವರು.

ನಗರ ಸಭೆಯಿಂದ ಪ್ರಾರಂಭವಾದ ಮೆರವಣಿಗೆ ಚನ್ನಮ್ಮ ವೃತ್ತ, ಕನಕದಾಸ ವೃತ್ತ , ವಾಲ್ಮೀಕಿ ವೃತ್ತ ,ಗಾಂಧಿ ವೃತ್ತ ದಿಂದ ಜಗಜೀವನರಾಮ್ ವೃತ್ತದ ವರೆಗೆ ಮೆರವಣಿಗೆ ಯೊಂದಿಗೆ ಜಗಜೀವನ್ ರಾಮ ರವರ ವೃತ್ತಕ್ಕೆ ಮಾಲಾರ್ಪಣೆ ಮಾಡಿ ನಂತರ ಶ್ರೀ ಶಕ್ತಿ ಭವನದ ವೇದಿಕೆಗೆ ಸೇರಿಕೊಳ್ಳಲಿದೆ. ವೇದಿಕೆಯಲ್ಲಿ ಸರ್ಕಾರದ ನಿಯಮವಳಿಗಳ ಪ್ರಕಾರ ವೇದಿಕೆಯನ್ನು ರೂಪಿಸಲಾಗುವದು, ಅವರ ಜೀವನ ಚರಿತ್ರೆಯ ವಿವರಿಸಲು ಉಪನ್ಯಾಸಕರನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.

ಬಾಬು ಜಗಜೀವನ ರಾಮ್ ವೃತ್ತದಲ್ಲಿ ದಿನಾಲೂ ಕುಡಿದು ಬಾಟಲಿಗಳನ್ನು ಅಲ್ಲಿಯೇ ಬಿಸಾಡಿ ಹೋಗುತ್ತಾರೆ ಕಾಂಪೌಂಡ್ ನಿರ್ಮಾಣದ ಬಗ್ಗೆ ನಾಗರಾಜ್ ಹೆಡಿಗಿಬಾಳ ಪ್ರಸ್ಥಾಪಿಸಿದಾಗ, ಎಸ್ಸಿಪಿ ಟಿಎಸ್ಸಿಪಿ ಯೋಜನೆಯ ಅಡಿಯಲ್ಲಿ ಕಾಂಪೌಂಡ್ ನಿರ್ಮಾಣದ ಬಗ್ಗೆ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ನಿಮ್ಮೆಲ್ಲರ ಸಹಕಾರದಿಂದ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ನಗರಸಭೆಯ ಪೌರಾಯುಕ್ತ ಮಂಜುನಾಥ ಗುಂಡೂರು ಸಭೆಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಅಲ್ಲಮಪ್ರಭು ಮಾತನಾಡಿ ತಾಲೂಕಿನಲ್ಲಿ ಶೈಕ್ಷಣಿಕ ಸಂಸ್ಥೆ ,ಸರ್ಕಾರಿ ಕಚೇರಿಗಳಲ್ಲಿ ಜಯಂತಿ ಆಚರಣೆ ಮಾಡಬೇಕು ಎಂದು ಸಲಹೆ ನೀಡಿದರು. ಗುರುರಾಜ ಮುಕ್ಕುಂದ ಮಾತನಾಡಿ ಸಾಧಕರಿಗೆ ಹಾಗೂ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಿ ಸನ್ಮಾನಿಸಿ ಜಗ ಜೀವನ ರಾಮ್ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಏಪ್ರಿಲ್ 06 ರಂದು ದೇವರ ದಾಸಿಮಾಯ್ಯ ಜಯಂತಿಯ ಪೂರ್ವಬಾವಿಯಾಗಿ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷರು ಎಮ್. ಕಾಳಪ್ಪ,ಸಹ ಕಾರ್ಯದರ್ಶಿ ನೀಲಕಂಠಪ್ಪ ದೊಡ್ಡಮನಿ ,ಖಜಾಂಚಿ ಗೋಪಾಲ ಸಲಹೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಮಹಾಲಿಂಗಪ್ಪ ಇಂಗಳದಾಳ, ಪರಶಿಷ್ಟ ವರ್ಗದ ಅಧಿಕಾರಿ ಶಿವಮಾನಪ್ಪ,ಹಿಂದುಳಿದ ವರ್ಗದ ಅಧಿಕಾರಿ ಲಿಂಗಪ್ಪ , ಸಿಡಿಪಿಓಗಳಾದ ಸುದೀಪ್ ಕುಮಾರ,ಅಶೋಕ,ಅರಣ್ಯ ಸಾಮಾಜಿಕ ವಲಯ ಅಧಿಕಾರಿ ರುದ್ರಮುನಿ,ಕೃಷಿ ಇಲಾಖೆಯ ಅಧಿಕಾರಿ ಪ್ರಶಾಂತ ಮಾ.ಪಾ, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ,ಮಾದಿಗ ಸಮಾಜದ ಹಿರಿಯ ಮುಖಂಡರಾದ ಆರ್. ಅಂಬ್ರುಸ್, ನಾಗರಾಜ ಸಾಸಲಮರಿ,ಮೌಲಪ್ಪ ಮಾಡಶಿರವಾರ,ನಾಗರಾಜ ಹೆಡಿಗಿಬಾಳ,ಶರಣಬಸವ ಮಲ್ಲಾಪೂರು, ಸಂಗಮೇಶ ಮುಳ್ಳೂರು ಸೇರಿದಂತೆ ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *