ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸದೆ ಖಾಸಗಿ ಆಸ್ಪತ್ರೆ ಕೆಲಸ ನಿರ್ವಹಣೆ – ಮಾಜಿ. ಸಂಸದ ಕೆ. ವಿರುಪಾಕ್ಷಪ್ಪ.
ಸಿಂಧನೂರು : ಡಾ.ಹನುಮಂತರೆಡ್ಡಿಯವರು ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸದೆ,ಹೆಚ್ಚು ಸಮಯ ಸರ್ಕಾರಿ ಆಸ್ಪತ್ರೆ ಎದುರುಗಡೆ ಇರುವ “ಮಲ್ಲಿಕಾರ್ಜುನ” ಆಸ್ಪತ್ರೆ (ಖಾಸಗಿ) ಯಲ್ಲಿ ಕೆಲಸ ನಿರ್ವಹಿಸುತ್ತಾರೆ ಎಂದು ಆರೋಪ ಮಾಡಿದರು.
ನಗರದ ತಮ್ಮ ನಿವಾಸದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದರು ಕೆ. ವಿರೂಪಾಕ್ಷಪ್ಪ ಅವರು ನಗರದ ಸರ್ಕಾರಿ ಆಸ್ಪತ್ರೆ ಸುಮಾರು 200 ಹಾಸಿಗೆ ಹೊಂದಿದ್ದು, ಅಧಿಕೃತ 12 ವೈದ್ಯರು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ಹಿರಿಯ ವೈದ್ಯಾಧಿಕಾರಿಗಳು ಇದ್ದರೂ ಪ್ರೋಬೆಸನರಿ ಅವಧಿ ಮುಗಿಯದ ಡಾ. ಹನುಮಂತರೆಡ್ಡಿ ಯವರು ಮುಖ್ಯ ವೈದ್ಯಾಧಿಕಾರಿಯಾಗಿ ವಹಿಸಿಕೊಂಡಿರುವುದು ಕಾನೂನು ಬಾಹಿರ ಎಂದು ಆರೋಪ ಮಾಡಿದರು.
ಜಿಲ್ಲಾ ಆರೋಗ್ಯಧಿಕಾರಿ ತಾಲೂಕಿನ ಶಾಸಕರು,ಡಾ. ಹನುಮಂತರೆಡ್ಡಿ ಈ ಮೂರು ಜನ ಬೇಜವಾಬ್ದಾರಿತನದಿಂದ ಅಥವಾ ದುರ್ವವ್ಯವಹಾರ ಮಾಡುವ ದೃಷ್ಟಿಯಿಂದ ಡಾ. ಹನುಮಂತರೆಡ್ಡಿಯವರಿಗೆ ಮುಖ್ಯವೈದ್ಯಾಧಿಕಾರಿ ಹುದ್ದೆ ವಹಿಸಿಕೊಡಲಾಗಿದೆಯೇ ಎಂದು ಅನುಮಾನ ವ್ಯಕ್ತಪಡಿಸಿದರು.
ಅದಲ್ಲದೆ ಕುಷ್ಟಗಿ ರಸ್ತೆಯಲ್ಲಿರುವ “ಕೇರ್” ಆಸ್ಪತ್ರೆಯಲ್ಲಿ ಇವರು ಪಾಲುದಾರರಾಗಿದ್ದು,ಸರ್ಕಾರಿ ವೇತನ ಪಡೆದು ಆಸ್ಪತ್ರೆಯ ಅವಧಿ ಸಮಯದಲ್ಲಿ ಹೆಚ್ಚು ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸದಲ್ಲದೆ, ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಮಲ್ಲಿಕಾರ್ಜುನ ಆಸ್ಪತ್ರೆ ಮತ್ತು ಕೇರ್ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಡುತ್ತಾರೆ,
ಈ ರೀತಿಯಾಗಿ ಅಧಿಕೃತ ಮುಖ್ಯ ಆರೋಗ್ಯ ಅಧಿಕಾರಿಯಾಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಬೇಕಾದ ಇವರು ಈ ರೀತಿ ಮಾಡುವದರಿಂದ ಇವರನ್ನು ನೋಡಿ ಇನ್ನೂಳಿದ ಕೆಲವು ವೈಧ್ಯಾಧಿಕಾರಿಗಳು ಕೂಡಾ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಾರೆ, ಡಾ.ಮಂಜುನಾಥ,ಡಾ. ನಾಗರಾಜ ಪ್ರಸೂತಿ ತಜ್ಞರಾಗಿದ್ದು, ಇವರು ಸಿಂಧನೂರಿನ “ಸ್ಪರ್ಶ ಆಸ್ಪತ್ರೆಯಲ್ಲಿ ಪಾಲುದಾರಿಕೆ ಯಲ್ಲಿ ಆಸ್ಪತ್ರೆ ಪಾರಂಭ ಮಾಡಿದ್ದು,ಸರ್ಕಾರಿ ಆಸ್ಪತ್ರೆಗೆ ಹೆರಿಗೆಗಾಗಿ ಬರುವ ಹೆಣ್ಣ ಮಕ್ಕಳನ್ನು ತಮ್ಮ ಆಸ್ಪತ್ರೆಗೆ ಕಳುಹಿಸದಲ್ಲದೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿದರೆ 20 ರಿಂದ 30 ಸಾವಿರ ರೂ ಬಿಲ್ ಮಾಡಿ ಜನರಿಗೆ ತೊಂದರೆ ಮಾಡುತ್ತಿದ್ದಾರೆ. ಅಲ್ಲದೆ ಸರಕಾರಿ ಇ.ಸಿ.ಜಿ ಮಶೀನನ್ನು ಮಲ್ಲಿಕಾರ್ಜುನ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಅದನ್ನು ಅಲ್ಲಿ ಉಪಯೋಗಿಸುತ್ತಿದ್ದಾರೆ. ಈಗಾಗಲೇ ಸರಕಾರಿ ಆಸ್ಪತ್ರೆಯಲ್ಲಿ ಹದಿನೈದು ಲಕ್ಷ ರೂಪಾಯಿ ದುರಪಯೋಗ ಆಗಿದೆಯೆಂದು ಖಚಿತ ಮಾಹಿತಿಯಿಂದ ತಿಳಿದು ಬಂದಿದೆ ಎಂದು ಹೇಳಿದರು. ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಲಾರದಂತಹ ಹಿರಿಯ ವೈದ್ಯಾಧಿಕಾರಿಗೆ ಮುಖ್ಯ ವೈದ್ಯಾಧಿಕಾರಿಯಾಗಿ ಜವಬ್ದಾರಿಯನ್ನು ವಹಿಸಿಕೊಡಬೇಕು. ಹಾಗಾಗಿ ಆದಷ್ಟು ತೀವ್ರ ತನಿಖೆ ಮಾಡಿಸಬೇಕು ತಪ್ಪಿಸ್ತರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ತಮ್ಮ ಸೇವೆಯ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ತೆಗೆದುಹಾಕಬೇಕು ಎಂದು ಸಚಿವರಗೆ ಮನವಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಿವನಗೌಡ ಗೋರೆಬಾಳ, ಹನುಮೇಶ ಸಾಲುಗುಂದಾ, ಇದ್ದರು….

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
