ತಾಲೂಕು ಗಂಗಾಮತಸ್ಥ ಕ್ಷೇಮಾಭಿವೃದ್ಧಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ.
ಸಿಂಧನೂರು : ಗಂಗಾಮತಸ್ಥ ಕ್ಷೇಮಾಭಿವೃದ್ಧಿ ಸಂಘದಲ್ಲಿ ಯಾವುದೇ ಬಣಗಳು ಹಾಗೂ ಬಿನ್ನಭಿಪ್ರಾಯಗಳಿಲ್ಲದೆ ಸಮಾಜದ ಏಳಿಗೆಗೆ ಆನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶ್ರಮಿಸಲಿದೆ ಎಂದು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಾಮಣ್ಣ ಬೋವಿ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ನಡೆದ ಸರ್ವಾನುಮತದಿಂದ ಆಯ್ಕೆಯಾದ ಅಧ್ಯಕ್ಷರಿಗೆ ಹೂವಿನ ಹಾರ ಹಾಕಿ ಸನ್ಮಾನ ಸ್ವೀಕರಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಘದ ಬೈಲಾ ಪ್ರಕಾರ ಕೈ ಎತ್ತುವ ಮೂಲಕ ಸರ್ವಾನುಮತದಿಂದ ಆಡಳಿತ ಮಂಡಳಿಯವರು ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ತಾಲೂಕಿನ ಗಂಗಾಮತಸ್ಥ ಸಮಾಜದ ಕೆಲಸಗಳನ್ನು ಹಾಗೂ ಎಲ್ಲಾ ಸರ್ಕಾರದ ಸವಲತ್ತುಗಳ ವಿಷಯಗಳನ್ನು ಸರಕಾರಿ ಅಧಿಕಾರಿಗಳೊಂದಿಗೆ ಪತ್ರ ಬರೆದು ಸಮಾಲೋಚನೆ ಮಾಡಿ ಸಮಾಜದ ಬೆಳವಣಿಗೆಗೆ ನೂತನ ಆಡಳಿತ ಮಂಡಳಿ ಯಾವ ರೀತಿ ನಡೆಸಿಕೊಂಡು ಹೋಗಬೇಕು. ನಗರದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಉದ್ಯಾನವನ್ನು ನಿರ್ಮಾಣ ಮಾಡಲು ಕ್ರಮವಹಿಸಬೇಕೆಂದು ಸಭೆಯು ನೂತನ ಆಡಳಿತ ಮಂಡಳಿಗೆ ಜವಬ್ದಾರಿ ನೀಡುವುದರ ಮೂಲಕ ತಿರ್ಮಾನಿಸಲಾಗಿದೆ.
ನೂತನ ಆಡಳಿತ ಮಂಡಳಿಯಿಂದ ತಾಲೂಕು ಗಂಗಾಮತ ಸಮಾಜದ ಎಲ್ಲಾ ಮುಖಂಡರಿಗೆ ಸಮಾಜದ ಸೇವೆ ಮಾಡಲು ಆಯ್ಕೆ ಮಾಡಿರುವ ಸಂಘದ ಎಲ್ಲಾ ಸದಸ್ಯರಿಗೆ ಅಭಿನಂದನೆ ತಿಳಿಸಿ ಮಾತನಾಡಿದರು.
ತಾಲೂಕು ಗಂಗಾ ಮತಸ್ಥರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷರಾದ ಬಸಪ್ಪ ಕಲ್ಲೂರು ಆಕಾಲಿಕ ಮರಣದಿಂದ ತೆರವಾದ ಖಾಲಿಯಿರುವ ಅಧ್ಯಕ್ಷರ ಸ್ಥಾನ ಹಾಗೂ ನೂತನ ಆಡಳಿತ ಮಂಡಳಿಯನ್ನು ದಿ.27-02-2022 ರಂದು ನಗರದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಸಮುದಾಯ ಭವನದ ಕಾರ್ಯಾಲಯದ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಆಡಳಿತ ಮಂಡಳಿಯ ಬಗ್ಗೆ ಕೂಲಂಕುಷವಾಗಿ ಆಯ್ಕೆ ಮಾಡಲಾಗಿದೆ ಎಂದು ಪತ್ರಿಕಾಗೋಷ್ಠಿ ಮುಖಾಂತರ ನೂತನ ಕಾರ್ಯದರ್ಶಿ ರಾಮಣ್ಣ ಹಟ್ಟಿ ತಿಳಿಸಿದರು.
ನೂತನ ಪದಾಧಿಕಾರಿಗಳು : ಅಧ್ಯಕ್ಷರು- ರಾಮಣ್ಣ ಭೋವಿ ಜವಳಗೇರಾ, ಉಪಾಧ್ಯಕ್ಷ – ಹನುಮಂತಪ್ಪ ಜನತಾ ಕಾಲೋನಿ ಸಿಂ, ಕಾರ್ಯದರ್ಶಿ – ಜಿ.ರಾಮಣ್ಣ ಹಟ್ಟಿ, ಖಜಾಂಚಿ – ಟಿ. ಸೋಮನಾಥ ಕಲ್ಲೂರು,
ಸದಸ್ಯರು – ಆಂಜನೇಯ, ಬಿ.ಲಿಂಗಪ್ಪ ಸೋಮಲಾಪೂರು, ಶಿವಣ್ಣ ಸುಕಾಲಪೇಟೆ,ಎಮ್ ರಾಮಾಂಜನೇಯ,
ಈ ಸಂದರ್ಭದಲ್ಲಿ ಗಂಗಾಮತಸ್ಥರ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳು ಸಮಾಜದ ಮುಖಂಡರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
