ಕ್ಷಯರೋಗ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕೆಂಚಮಲ್ಲನಹಳ್ಳಿ
ಕೆಂಚಮಲ್ಲನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಆಲೂರು ಹಾಗೂ ಉಪ ಕೇಂದ್ರ ಕೆಂಚಮಲ್ಲನಹಳ್ಳಿ ಆರೋಗ್ಯ ಇಲಾಖೆಯಿಂದ,ಕ್ಷಯರೋಗ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮ ಜರಗಿತು.
ಈ ಕಾರ್ಯಕ್ರಮ ಕುರಿತು ಅರೋಗ್ಯ ಹಿರಿಯ ನಿರೀಕ್ಷಣ ಅಧಿಕಾರಿ ಶ್ರೀನಿವಾಸ ಮಾತನಾಡಿ
ಕ್ಷಯರೋಗವು ನೇರ ನಿಗಾವಣೆ ಅಲ್ಪಾವಧಿ ಚಿಕಿತ್ಸೆಯಿಂದಗುಣಪಡಿಸಬಹುದು, ಆರರಿಂದ ಎಂಟು ತಿಂಗಳ ಕಾಲ ತಪ್ಪದೆ ಚಿಕಿತ್ಸೆಯನ್ನು ಪಡೆಯಬೇಕು, ಕ್ಷಯರೋಗಿಗಳು ಯಾರಾದರೂ ಇದ್ದರೆ ಸೀನುವಾಗ ಮುತ್ತು ಕೆಮ್ಮುವಾಗ ಬಾಯಿ ಮತ್ತು ಮೂಗಿನ ಹತ್ತಿರ ಕರವಸ್ತ್ರವನ್ನು ಇಟ್ಟುಕೊಳ್ಳಬೇಕು. ರೋಗಿಯು ಕಸವನ್ನು ಎಲ್ಲೆಂದರಲ್ಲಿ ಉಗಳಬಾರದು. ಇನ್ನೂ ಅನೇಕ ಸಾಂಕ್ರಾಮಿಕ ಹರಡುವ ವಿಚಾರವಾಗಿ ಈ ಸಂದರ್ಭದಲ್ಲಿ ಮಾತನಾಡಿದರು. ನವಜಾತ ಶಿಶುಗಳಿಗೆ ಬಿಸಿಜಿ ಲಸಿಕೆ ಹಾಕಬೇಕು ಮನೆಯಲ್ಲಿ ಅಥವಾ ಸುತ್ತಮುತ್ತಲು ಕ್ಷಯರೋಗದ ಲಕ್ಷಣಗಳು ಕಂಡುಬಂದರೆ ಸಮೀಪದ ಆರೋಗ್ಯ ಕೇಂದ್ರಕ್ಕೆ ಕಳುಹಿಸಬೇಕು ಎಂದು ಆರೋಗ್ಯ ಇಲಾಖೆ ಸಿ ಎಚ್ ಓ ಮೀನಾಕ್ಷಮ್ಮ ನವರು ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಈ ಸಂದರ್ಭದಲ್ಲಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಗಳಾದ ಕೊಟ್ರೇಶ್. ಸಹಶಿಕ್ಷಕ ರಂಗನಾಥ್. ಆರೋಗ್ಯ ಹಿರಿಯ ನಿರೀಕ್ಷಣ ಅಧಿಕಾರಿ ಸಿನಿವಾಸ್ ಹಾಗೂ ಆರೋಗ್ಯ ನಿರೀಕ್ಷಣ ಅಧಿಕಾರಿಗಳಾದ ನವೀನ್ ಕುಮಾರ್. ಮೀನಾಕ್ಷಮ್ಮ. ಶಾಲಾ ಮಕ್ಕಳು ಶಾಲಾ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯಾರು, ಸಾರ್ವಜನಿಕರು ಉಪಸ್ಥಿತರಿದ್ದರು..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
