;

ಚುನಾವಣಾ ಪೂರ್ವದಲ್ಲಿ ಸಿಂಧನೂರು ನಲ್ಲಿ ಕಾಂಗ್ರೆಸ್​ ವರ್ಸಸ್ ಕಾಂಗ್ರೆಸ್​…!!!

ಚುನಾವಣಾ ಪೂರ್ವದಲ್ಲಿ ಸಿಂಧನೂರು ನಲ್ಲಿ ಕಾಂಗ್ರೆಸ್​ ವರ್ಸಸ್ ಕಾಂಗ್ರೆಸ್​.

ಸಿಂಧನೂರು : ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ಸರಿಯಿಲ್ಲ ಎನ್ನುವುದಕ್ಕೆ ಇಂದು ನಡೆದ ಕೆಪಿಸಿಸಿ ರಾಜ್ಯಧ್ಯಕ್ಷ ಡಿ. ಕೆ. ಶಿವುಕುಮಾರ ಅವರನ್ನು ಬರಮಾಡಿಕೊಳ್ಳುವ ಸಂಧರ್ಭದಲ್ಲಿ ಗೊತ್ತಾಗಿದೆ ಎಂದೂ ಸಾರ್ವಜನಿಕರು ಮಾತನಾಡಿಕೊಳ್ಳುವಂತಾಗಿದೆ.

ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ ಪ್ರಗತಿ ಪರಿಶೀಲನಾ ಸಭೆಯ ಅಂಗವಾಗಿ ರಾಯಚೂರು ದಿಂದ ಕೊಪ್ಪಳಕ್ಕೆ ತೆರಳುತ್ತಿದ್ದ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ರಾಜ್ಯಧ್ಯಕ್ಷರಾದ ಡಿ.ಕೆ. ಶಿವುಕುಮಾರರವರನ್ನು ಬರಮಾಡಿಕೊಳ್ಳುವ ಸಂದರ್ಭದಲ್ಲಿ ಕಂಡು ಬಂತು.

ಶ್ರೀಶೈಲ ಪಾದಯಾತ್ರೆಗಳಿಗಾಗಿ ಬಸನಗೌಡ ಬಾದರ್ಲಿ ಫೌಂಡೇಷನ್ ವತಿಯಿಂದ‌ ನಡೆದ 16ನೇ ವರ್ಷದ ಅನ್ನ ದಾಸೋಹ ಸ್ಥಳಕ್ಕೆ ‌ಡಿಕೆ ಶಿವಕುಮಾರ ಭೇಟಿ ನೀಡಿದ ವೇಳೆ ಬಸನಗೌಡ ‌ಬಾದರ್ಲಿ ಅಭಿಮಾನಿಗಳ ಬಳಗ ಕೆಪಿಸಿಸಿ ಅಧ್ಯಕ್ಷರಿಗೆ ಜೆಸಿಬಿಗಳಿಂದ ಹೂ ಮಳೆ ಸುರಿದು ಅದ್ಧೂರಿ ಸ್ವಾಗತ ಕೂರಿದ್ರು ಆದರೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಮತ್ತು ಮಾಜಿ ಕೆಪಿಸಿಸಿ ಕಾರ್ಯದರ್ಶಿ ಕೆ.ಕರಿಯಪ್ಪ ಕಾರ್ಯಕರ್ತರು ಬಂದಿರಲಿಲ್ಲ.ನಂತರ ಹಂಪನಗೌಡ ನಿವಾಸಕ್ಕೆ ತೆರಳುತ್ತಿದಂತೆ ಬಸನಗೌಡ ಬಾದರ್ಲಿ ಕಾರ್ಯಕರ್ತರು ಹೋಗದೇ ಇರುವುದು ಕಂಡು ಬಂತು. ನಂತರ ಮಾಜಿ ರಾಜ್ಯ ಕೆಪಿಸಿಸಿ ಕಾರ್ಯದರ್ಶಿ ಕೆ. ಕರಿಯಪ್ಪ ರವರು ಕನಕದಾಸ ವೃತ್ತದಲ್ಲಿ ನೂರಾರು ಕಾರ್ಯಕರ್ತರು ಯಾವುದೇ ಆಡಂಬರವಿಲ್ಲದೇ ಡಿ.ಕೆ ಶಿವಕುಮಾರ ಅವರನ್ನು ಬರಮಾಡಿಕೊಂಡರು.ಈ ವೇಳೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಇಲ್ಲದಿರುವುದು ಕಂಡು ಬಂತು.ಕಾರ್ಯಕರ್ತರು ಡಿಕೆ ಡಿಕೆ ಮತ್ತು ಕೆಕೆ ಕೆಕೆ ಎಂದು ಕೂಗಿದರು.

ಬ್ಯಾನರ್ ಮತ್ತು ಕಟೌಟಗಳು ರಸ್ತೆ ಬದಿಯಲ್ಲಿ ಹಾಕಿದ್ದು ಕಂಡು ಬಂತು. ಮೂರು ನಾಯಕರು ತಮ್ಮ ತಮ್ಮ ಕಾರ್ಯಕರ್ತರ ಜೊತೆ ಜೈಕಾರ ಗಳನ್ನು ಕೂಗುತ್ತಾ ಮುಂಬರುವ 2023 ಚುನಾವಣೆಯ ಪೂರ್ವಭಾವಿಯಾಗಿ ಬೇರೆ ಬೇರೆಯಾಗಿ ಶಕ್ತಿ ಪ್ರದರ್ಶನ ತೋರಿಸಿದರು. ಆದರೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷದವರು ಕಾಂಗ್ರೆಸ್ ಒಳ ಜಗಳದ ಬಗ್ಗೆ ಮಾತನಾಡಿಕೊಳ್ಳುವಂತಾಯಿತು.

ಕಾಂಗ್ರೆಸ್​ ಪಕ್ಷ ತಾನು ಹಿಂದೆಂದು ಕಾಣದಷ್ಟು ಕೆಟ್ಟ ಕಾಲವನ್ನು ಈ ಕಾಲಮಾನದಲ್ಲಿ ನೋಡುತ್ತಿದ್ದೆವೆ, ಆದರೆ ಕಾಂಗ್ರೆಸ್ ಪಕ್ಷವು ತನ್ನ ಪ್ರಭಾವವನ್ನು ದಿನದಿಂದ ದಿನಕ್ಕೆ ಕಳೆದುಕೊಳ್ಳುತ್ತಿದೆ. ಕಾರ್ಯಕರ್ತರಲ್ಲಿ ಗೊಂದಲ ಉಂಟುಮಾಡಿದೆ.ಇದನ್ನು ಕಾಂಗ್ರೆಸ್​ ವರ್ಸಸ್ ಕಾಂಗ್ರೆಸ್​ ವಿರುದ್ದವೇ ಹೋರಾಡುತ್ತಿದೆ ಎಂದು ಹೇಳಬಹುದು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;