ಕುರಿಗಾರರ ಹೋರಾಟಕ್ಕೆ
ಸಮಾಜ ಸೇವಕಿಡಾ.ನಾಗಮಣಿ ಎಸ್ ಪಾಟೀಲ್ ಬೆಂಬಲ.
ಸಿಂಧನೂರು : ಮಾರ್ಚ್ 22 ರಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಕುರಿಗಾರರ ಹೋರಾಟಕ್ಕೆ ಸಿಂಧನೂರಿನ ಸಮಾಜ ಸೇವಕಿಡಾ.ನಾಗಮಣಿ ಎಸ್ ಪಾಟೀಲ ರವರು ಬೆಂಬಲವನ್ನು ಸೂಚಿಸಿದ್ದಾರೆ.
ಈ ಹೋರಾಟವು ಕುರಿಗಾರರ ಮೇಲೆ ಆಗುತ್ತಿರುವ ದೌರ್ಜನ್ಯ ಖಂಡಿಸುವ ಮತ್ತು ಭದ್ರತೆ ಒದಗಿಸುವ ಹೋರಾಟ ಇದಾಗಿದ್ದು, ರಾಜ್ಯದ ಎಲ್ಲಾ ವರ್ಗಗಳ ಬಡವರು ಕುರಿ, ಆಡು ,ದನಗಳನ್ನುಸಾಕಿಕೊಂಡು ತಮ್ಮ ಉಪ ಜೀವನವನ್ನು ಸಾಗಿಸುವವರು. ಈ ಕಸುಬನ್ನು ನಂಬಿಕೊಂಡು ಊರಿಂದೂರಿಗೆ ಮೇವು ಹಾಗೂ ನೀರನ್ನು ಹುಡುಕಿಕೊಂಡು ಪ್ರತಿನಿತ್ಯ ಅಲೆಮಾರಿ ಜೀವನ ಸಾಗಿಸುವದು ಈ ಬಡವರ ಗತಿಯಾಗಿದೆ. ಇದರ ಮಧ್ಯದಲ್ಲಿ ಕುರಿ ಮತ್ತು ದನಗಳ್ಳರಿಂದ ರಕ್ಷಣೆ ಮಾಡುವದು ಒಂದು ಸವಾಲಾದರೆ ಇದರ ಮಧ್ಯದಲ್ಲಿ ಹೆಣ್ಣು ಮಕ್ಕಳ ಮಾನ ಪ್ರಾಣ ರಕ್ಷಣೆ ಮಾಡುವದು ಅತಿದೊಡ್ಡ ಸಂಕಟದ ಸವಾಲಾಗಿದೆ. ಕೆಲವು ಕಡೆಗಳಲ್ಲಿ ಕುರಿಗಾರರ ಹೆಣ್ಣು ಮಕ್ಕಳ ಮೇಲೆ ದರೋಡೆ,ಕೊಲೆ ಅತ್ಯಾಚಾರ,ನಡೆದಿದ್ದನ್ನು ರಾಜ್ಯವೇ ತಲೆತಗ್ಗಿಸುವಂತಾಗಿದೆ. ಕುರಿ ಹಾಗೂ ದನಗಳ ಸಾಕಾಣಿಕೆದಾರರ,ಮಕ್ಕಳ ಮತ್ತು ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಪಶು ಸಂಪತ್ತು ಹೆಚ್ಚಿಸಲು ಸರ್ಕಾರದ ಮೇಲೆ ಒತ್ತಡ ಹೇರಲು ಕುರಿಗಾರರು ಮಾಡುತ್ತಿರುವ ಈಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದ್ದು ಮತ್ತು ಎಲ್ಲಾ ಪ್ರಗತಿಪರ ಸಂಘಟನೆಗಳು,ವಿಚಾರವಂತರು ಶಾಂತಿಯುತವಾಗಿ ಜಾತಿ , ಮತ , ಪಕ್ಷ ಬೇದವಿಲ್ಲದೇ ಬೆಂಗಳೂರಿನಲ್ಲಿ ನಡೆಯುತ್ತಿರುವ ಹೋರಾಟವನ್ನು ಯಶಸ್ವಿಗೊಳಸಬೇಕೆಂದು ಪತ್ರಿಕೆ ಹೇಳಿಕೆ ಮುಖಾಂತರ ತಿಳಿಸಿದ್ದಾರೆ…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
