ರಾಜ್ಯ ನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕ ಎಪಿಎಂಸಿ ಪ್ರಾಂಗಣಗಳಲ್ಲಿ ಬಿಳಿ ಜೋಳ( ಮಾಲ್ದಂಡಿ ) ಖರೀದಿ ಕೇಂದ್ರ ಪ್ರಾರಂಬಿಸಲಾಗಿದೆ.
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನಲ್ಲಿ ದಿನಾಂಕ 17.3.2022 ರಂದು ನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ಎಪಿಎಂಸಿ ಪ್ರಾಂಗಣಗಳಲ್ಲಿ ಬಿಳಿ ಜೋಳ ( ಮಾಲ್ದಂಡಿ ) ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ
ಬಿಳಿ ಜೋಳ ಮಾಲ್ದಂಡಿ ಪ್ರತಿ ಕ್ವಿಂಟಾಲ್ಗೆ 2758 ರೂ , ಬಿಳಿ ಜೋಳ ಹೈಬ್ರಿಡ್ ಗೆ 2738 ರೂ., ಗ್ರೇಡ್ ಎ ಭತ್ತಕ್ಕೆ 1960 ರೂ, ಕ್ವಿಂಟಾಲ್ ಸಾಮಾನ್ಯ ಗ್ರೇಡ್ ಭತ್ತಕ್ಕೆ 1940 ರೂ. ಕ್ವಿಂಟಾಲ್ ರಾಗಿಗೆ 3377 ರೂ. ದರ ನಿಗದಿ ಪಡಿಸಲಾಗಿದೆ.
ಖರೀದಿ ಕೇಂದ್ರಗಳಿಗೆ ಮಿತಿ ಸೇರುವ ಸರ್ಕಾರ ಪ್ರತಿ ಎಕರೆಗೆ 25 ಕ್ವಿಂಟಾಲ್ ಭತ್ತ , ಪ್ರತಿ ರೈತರಿಂದ 40 ಕ್ವಿಂಟಾಲ್ ಗರಿಷ್ಠ ಭತ್ತ ಖರೀದಿ ಮಿತಿ ನಿಗದಿ ಗೊಳಿಸಲಾಗಿದೆ. ಅದರಂತೆ ಬಿಳಿ ಜೋಳಕ್ಕೆ ಮಿತಿ ನಿಗದಿ ಪಡಿಸಲಾಗಿದೆ.
ಪ್ರತಿ ರೈತರಿಂದ, ಬಿಳಿ ಜೋಳ ಖರೀದಿ ಮಿತಿ ಗೊಳಿಸಲಾಗಿದೆ ಎಂದು ರೈತರು ನೀಡುವ ಬಿಳಿ ಜೋಳ ಮತ್ತು ಭತ್ತವು ಉತ್ಕೃಷ್ಟ ಗುಣಮಟ್ಟದಾಗಿರಬೇಕು ಎಂದಿದೆ.
ರೈತರು ತಾವು ಬೆಳೆದ ಬಿಳಿ ಜೋಳ ಖರೀದಿ ಕೇಂದ್ರಕ್ಕೆ ತಂದು ದೃಢೀಕರಿಸಿಕೊಂಡು ಖರೀದಿ ಅಧಿಕಾರಿಗಳು ತಿಳಿಸಿದ ದಿನಾಂಕದಂದು ಖರೀದಿ ಕೇಂದ್ರಕ್ಕೆ ದಾಸ್ತಾನನು ತರಬೇಕು ಎಂದು ತಿಳಿಸಿದರು.
ಜೋಳ, 50 ಕೆಜಿ ಚೀಲದಲ್ಲಿ ತುಂಬಿ ಖರೀದಿ ಕೇಂದ್ರಕ್ಕೆ ತರಬೇಕು. ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಜೋಳ ಭತ್ತ ಖರೀದಿ ಕೇಂದ್ರಕ್ಕೆ ತರಬೇಕು. ಜೋಳ, ಭತ್ತವನ್ನು ಗುಣಮಟ್ಟ, ತೇವಾಂಶ ಪರೀಕ್ಷೆ ಮಾಡಲು ಸ್ಯಾಂಪಲ್ ತಂದು ನಿಗಮದ ಕೃಷಿ ಇಲಾಖೆಯ ನುರಿತ ತಾಂತ್ರಿಕ ಸಹಾಯಕರು ಜೋಳ, ಭತ್ತ ಗುಣಮಟ್ಟವನ್ನು ಪರಿಶೀಲನೆ ನಡೆಸಿ, ಜೋಳ, ಭತ್ತದ ಉತ್ತಮ ಗುಣಮಟ್ಟದ ಹಾಗೂ ತೇವಾಂಶಅನುಸೂಚಿತ ಮಟ್ಟದೊಳಗೆ ಇರುತ್ತದೆಂದು ದೃಢೀಕರಿಸಿದ ನಂತರವೇ ಧಾನ್ಯವನ್ನುಖರೀದಿಸಲಾಗುತ್ತದೆ ಎಂದಿದ್ದಾರೆ.
ಬಿಳಿ ಜೋಳ, ಭತ್ತವನ್ನು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಮಾರಾಟ ಮಾಡಲು ಇಚ್ಫಿಸುವ ರೈತರು ತಮ್ಮ ಜಮೀನಿನ 2013-14 ಸಾಲಿನ ಪಹಣಿ ಪತ್ರಕ್ಕೆ (ಉತಾರ) ಮೇಲೆ ಸಂಬಂಧಪಟ್ಟ ಗ್ರಾಮ ಲೆಕ್ಕಿಗರ ದೃಢೀಕರಣದೊಂದಿಗೆ ಹಾಜರುಪಡಿಸಬೇಕು. ಬಿಳಿಜೋಳ, ಭತ್ತದ ಹಣವನ್ನು ನೇರವಾಗಿ ಸಂಬಂಧಪಟ್ಟ ರೈತರ ಹೆಸರಿನಲ್ಲಿ ಆರ್ಟಿಜಿಎಸ್ ನಲ್ಲಿ ಮೂಲಕ ಪಾವತಿಸಲಾಗುವುದು. ರೈತರು ತಮ್ಮ ಬ್ಯಾಂಕಿನ ಖಾತೆ ಸಂಖ್ಯೆ ಮತ್ತು ಪುಸ್ತಕದ ಜೆರಾಕ್ಸ್ ಪ್ರತಿಯನ್ನು (ಭಾವಚಿತ್ರ ವಿರುವ) ನೀಡಬೇಕು ಎಂದು ಹೇಳಿದ್ದಾರೆ.
ರೈತರು ಖರೀದಿ ಕೇಂದ್ರಕ್ಕೆ ತಂದ ಒಮ್ಮೆ ಪರೀಕ್ಷೆ ಮಾಡಿದ ಸ್ಯಾಂಪಲ್ ಬಿಳಿ ಜೋಳದ, ಭತ್ತದ ಸರಕಲ್ಲದೇ ಬೇರೆ ಸರಕನ್ನು ತಂದರೆ ತಿರಸ್ಕರಿಸಲಾಗುವುದು.
ಖರೀದಿ ಕೇಂದ್ರಕ್ಕೆ ತಂದ ಒಟ್ಟು ಪ್ರಮಾಣದ ಬಿಳಿ ಜೋಳದ, ಭತ್ತದ ಸರಕಿನಿಂದಲು ಸಹ ಸ್ಯಾಂಪಲ್ ತೆಗೆದು ಪರೀಕ್ಷಿಸಲಾಗುವುದು ಎಂದಿದ್ದಾರೆ.
ಬಿಳಿ ಜೋಳದ ತೇವಾಂಶ ಶೇ.14ರಷ್ಟು ಹಾಗೂ ಭತ್ತದ ಸರಕಿನ ತೇವಾಂಶ ಶೇ.17 ಮಿರಬಾರದು ಮಿರಿದ್ದಲ್ಲಿ ತಿರಸ್ಕರಿಸಲಾಗುವುದು
ಸದರಿ ರೈತರು ಬಿಳಿ ಜೋಳ, ಭತ್ತವನ್ನು ಶುದ್ಧಪಡಿಸಿ ಧಾನ್ಯವನ್ನು ಒಣಗಿಸಿ ಮಾರಾಟಕ್ಕೆ ತರಬೇಕೆಂದು ಸೂಚಿಸಲಾಗಿದೆ.
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕ ಎಪಿಎಂಸಿ ಪ್ರಾಂಗಣಗಳಲ್ಲಿ ಬಿಳಿ ಜೋಳ( ಮಾಲ್ದಂಡಿ ) ಖರೀದಿ ಕೇಂದ್ರಕ್ಕೆ ಆಗಮಿಸಿದ್ದ ಮಾನ್ಯ ತಹಶೀಲ್ದರ್ ಆಹಾರ ಶಿರಸ್ಥೆದಾರ ಸಂಜಯ್ ಖರೀದಿ ಅದಿಕಾರಿ ಯಂಕೋಬ್,ಜಿಲ್ಲಾ ವ್ಯೆವಸ್ಥಪಾಕರು ಮುನೀರ್ ಬಾಷಾ,ಹಮಾಲಿ ಸಂಘದ ಅಧ್ಯಕ್ಷರು ಚಿಕ್ಕೇರಿ ಬಸಣ್ಣ, ನವೀನ, ರೈತರು ಮಹೇಶ್ ಮ್ಯಾನೇಜರ್ ಶಿಲ್ಪಾ ಇನ್ನು ಅನೇಕರು ಉಪಸ್ಥಿತರಿದ್ದರು..

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
