;

ಹೋಲಿ ಹಬ್ಬವನ್ನು ಭಾರತೀಯ ಮೂಲ ನಿವಾಸಿಗಳು ಏಕೆ ಆಚರಿಸಬಾರದು ..?

ಹೋಲಿ ಹಬ್ಬವನ್ನು ಭಾರತೀಯ ಮೂಲ ನಿವಾಸಿಗಳು ಏಕೆ ಆಚರಿಸಬಾರದು ..?

ಹೊಲಿ ಹಬ್ಬ (ಬಣ್ಣದ ಹಬ್ಬ)
ಹೋಲಿಕಾ ಎನ್ನುವ ಒಂದು ಹೆಣ್ಣನ್ನು ಅತ್ಯಾಚಾರ ಮಾಡಿ ಹತ್ಯ ಗೈದು ಸುಟ್ಟು ಸಂಬ್ರಮಿಸುವ ಹಬ್ಬ ಹೇಗೆ ಖುಷಿ ತರಲು ಸಾಧ್ಯ ಹಿಂದೂ ಧರ್ಮ ಹೆಣ್ಣನ್ನು ಗೌರವಿಸುವುದಾದರೆ ಹೊಲಿ ಹಬ್ಬವನ್ನು ನಿಷೇಧಿಸಲಿ
ಹಿಂದೂ ಧರ್ಮ ಹೆಣ್ಣನ್ನು ಅಗೌರವದಿಂದ ನೋಡುತಿತ್ತು

ಒಂದು ಸುಂದರ ಸೌಂದರ್ಯವತಿ ಕನ್ಯೆ ಆರ್ಯರ ಕಾಮದಾಟಕ್ಕೆ ಬಲಿಯಾದ ಇತಿಹಾಸವೆ ಹೋಲಿ ಹಬ್ಬ

ದಾನವ ಕುಲಕೆ ಹರಿಯೆ ವೈರಿ ಮರೆಯದಿರು ಮಗುವೆ!

ಅಸುರ ಸಾಮ್ರಾಟ ಮಹಾನ್ ಬೌದ್ಧ ಭಿಕ್ಕು, ಶಾಂತಿದೂತ ಹಿರಣ್ಯಕಶಿಪುವಿನ ಮಗನಾದ ಪ್ರಹ್ಲಾದನು ವಿಭೀಷಣ, ಸುಗ್ರೀವರಂತೆಯೇ ಜನಾಂಗದ್ರೋಹಿ. ತಂದೆಯ ಅಪ್ಪಣೆಯನ್ನು ಮೀರಿ ಆರ್ಯ ವಿಷ್ಣುವಿನ ಕಡೆಯವರ ಜೊತೆ ಗುರುತಿಸಿಕೊಂಡಿದ್ದ. ವಿಷ್ಣು ಪ್ರಿಯ ಪ್ರಹ್ಲಾದನ ವಿಚಾರ ಈಗ ಪ್ರಸ್ತಾಪಿಸಿದ ಉದ್ದೇಶ ಇಷ್ಟೇ.

ಅಸುರರ ಸಂಹಾರ ವರ್ಣನೆಗಳು ಇಲ್ಲಿನ ಸನಾತನಿಗಳಿಗೆ ಹಬ್ಬಗಳಾಗಿವೆ. ಅವುಗಳ ವಿವರಣೆಗಳು ನಾಟಕ, ಚಲನಚಿತ್ರ, ಯಕ್ಷಗಾನ, ಭರತನಾಟ್ಯದ ವಸ್ತುಗಳಾಗಿವೆ. ಇವರ ಹರಿಕಥೆಗಳಂತೂ ಸಂಪೂರ್ಣವಾಗಿ ಅಸುರರನ್ನು ದುಷ್ಟರಿಂದ ಕ್ರೂರಿಗಳೆಂದು ಅಂತಿಮವಾಗಿ ಇವರೆಲ್ಲರೂ ಸಂಹಾರವಾದುದರ ಬಗ್ಗೆಯೇ ಹೆಣೆಯಲ್ಪಟ್ಟಿವೆ. ಹಾಗೆ ಮೂಲನಿವಾಸಿ ಅಸುರರನ್ನು ಹತ್ಯೆಗೈದು ಆಚರಿಸುವ ಅನೇಕ ಹಬ್ಬಗಳಲ್ಲಿ ಹೋಳಿ ಹಬ್ಬವು ಒಂದು.

ಅಸುರ ಚಕ್ರವರ್ತಿ ಹಿರಣ್ಯಕಶಿಪುವಿನ ತಂಗಿಯ ಹೆಸರು ‘#ಹೋಳಿಕಾ’ ಎಂಬುದಾಗಿತ್ತು. ಹೋಳಿಕಾ ಅಂದು ಆರ್ಯರ ಕುತಂತ್ರಕ್ಕೆ ಒಳಗಾಗಿ ತನ್ನ ಪ್ರಾಣ ಕಳೆದುಕೊಂಡ ನೋವಿನ ಸಂದರ್ಭ ಅಸುರರಿಗೆ ಸಂತಾಪ ಸೂಚಿಸುವ ದಿನವಾದರೆ ಆರ್ಯರಿಗೆ ಅವಳನ್ನು ನಾಶಮಾಡಿದ ಖುಷಿಗೆ ಹೋಳಿಹಬ್ಬವನ್ನಾಚರಿಸುವ ದಿನವಾಯಿತು. ನಮ್ಮೆಲ್ಲ ಪೂರ್ವಿಕರನ್ನು ಕಳೆದುಕೊಂಡ ದಿನಗಳೆಲ್ಲವೂ ಆರ್ಯರಿಗೆ ಹಬ್ಬಗಳಾಗಿವೆ. ದುರಂತವೆಂದರೆ ಇತಿಹಾಸದ ಪ್ರಜ್ಞೆಯಿಲ್ಲದ ಕಾರಣ ಮೂಲನಿವಾಸಿಗಳಾದ ನಾವೂ ಅವರ ಜೊತೆಗೂಡಿ ಅವರು ಆಚರಿಸುವ ಹಬ್ಬಗಳನ್ನು ನಾವೂಗಳು ಆಚರಿಸುತ್ತಿದ್ದೇವೆ! ಇದಲ್ಲವೆ ದುರಂತ.

ಸನಾತನಿಗಳು ಬಿಟ್ಟಿರುವ ರೀಲು ನೋಡಿ. ಹಿರಣ್ಯಕಶಿಪುವಿನ ರಾಜ್ಯಾಡಳಿತದಲ್ಲಿ ಬರೀ ದುರಾಡಳಿತವಿತ್ತಂತೆ, ಅವನ ಪುತ್ರ ಪ್ರಹ್ಲಾದ ತಂದೆಯ ಮಾತನ್ನೂ ಮೀರಿ ವಿಷ್ಣು ಭಕ್ತನಾಗಿದ್ದ. ಆದ್ದರಿಂದ ಪ್ರಹ್ಲಾದನನ್ನು ಸಾಯಿಸುವುದೊಂದೇ ದಾರಿ ಎಂದು ತಿಳಿದು ಅವನನ್ನು ಬೆಂಕಿಗೆ ತಳ್ಳಲು ನಿರ್ಧರಿಸಿದನಂತೆ. ಹಿರಣ್ಯಕಶಿಪುವಿನ ತಂಗಿಯಾದ ಹೋಳಿಕಾಗೆ ಬೆಂಕಿಯಲ್ಲಿ ಬಿದ್ದರೂ ಅವಳು ಸಾಯದೇ ಇರುವಂತಹ ವರದಾನವನ್ನು ಪಡೆದಿರುತ್ತಾಳೆ. ಆದ್ದರಿಂದ ಹಿರಣ್ಯಕಶಿಪು ತನ್ನ ತಂಗಿಗೆ ಪ್ರಹ್ಲಾದನನ್ನು ಕರೆದುಕೊಂಡು ಬೆಂಕಿಯಲ್ಲಿ ಇಬ್ಬರು ಬೀಳುವ ಹಾಗೆ ನಟಿಸಿ ಅವನನ್ನು ಸಾಯಿಸಿದ ನಂತರ ಅವಳು ಎದ್ದು ಬರಬಹುದೆಂದೂ ಹೇಳಿಕಳುಹಿಸುತ್ತಾನಂತೆ. ಹೊಳಿಕ ಅಣ್ಣನ ಮಾತನ್ನು ಒಪ್ಪಿ ಪ್ರಹ್ಲಾದನನ್ನು ಕರೆದೊಯ್ಯುತ್ತಾಳೆ. ಆದರೆ ಇಲ್ಲಿ ಎಲ್ಲವೂ ಉಲ್ಟಾ ಆಗುತ್ತದೆ. ಪ್ರಹ್ಲಾದ ಬೆಂಕಿಯಿಂದ ಎದ್ದು ಬರುತ್ತಾನೆ. ಹೋಳಿಕಾ ಮಾತ್ರ ಬೆಂಕಿಯಲ್ಲಿ ಬೆಂದು ಸುಟ್ಟುಹೋಗುತ್ತಾಳಂತೆ. ಅಂದಿನಿಂದ ‘#ಹೋಳಿ’ ಹಬ್ಬ ಪ್ರಾರಂಭವಾಗುತ್ತದೆ.

ಅಸತ್ಯಗಳ, ರೀಲುಗಳ ಬಂಡಲುಗಳನ್ನೇ ಸುತ್ತಿ ಇಟ್ಟಿರುವ ಸನಾತನಿಗಳ ಕಥೆಗಳಲ್ಲಿ ವೈಜ್ಞಾನಿಕ ವಿಷಯವನ್ನು ಕೇಳುವವನು, ವಿಶ್ಲೇಷಿಸುವವನು ತನ್ನ ಬುರುಡೆ ಸೀಳಿಕೊಂಡು ಸ್ವತಃ ತಾನೇ ಸಾಯಬೇಕೇ ಹೊರತು ಇವರಿಂದ ವೈಜ್ಞಾನಿಕ ಉತ್ತರ ಪಡೆಯಲು ಮಾತ್ರ ಸಾಧ್ಯವಿಲ್ಲ. ಬೆಂಕಿ ಸುಟ್ಟರೆ ಇಬ್ಬರನ್ನೂ ಸುಡಬೇಕು. ಇಲ್ಲದಿದ್ದರೆ ಇಬ್ಬರನ್ನೂ ಬಚಾವು ಮಾಡಬೇಕು. ಇಲ್ಲಿ ಹಾಗಾಗುವುದಿಲ್ಲ. ಬೆಂಕಿಯೂ ಆರ್ಯರ ಪರವಾಗಿದ್ದು ಒಬ್ಬೊಬ್ಬರಿಗೆ ಒಂದೊಂದು ತೀರ್ಪು ನೀಡುತ್ತದೆ! ಮತ್ತು ತಂದೆಯೊಬ್ಬ ತನ್ನ ಮಗನನ್ನೇ ಬೆಂಕಿಗೆ ಆಹುತಿಯಾಗಲೀ ಎಂದು ಯಾವ ಕಾಲಕ್ಕೂ ಹೇಳುವುದಿಲ್ಲ. ಅಂತಹ ಕಾರ್ಯಕ್ಕೆ ಕೈ ಹಾಕುವುದಿಲ್ಲ. ಇದು ಮೂಲನಿವಾಸಿ ರಾಜರುಗಳನ್ನು ದುಷ್ಟರೆಂದೂ ಕ್ರೂರಿಗಳೆಂದೂ ಚಿತ್ರಿಸುವ ತಂತ್ರವಲ್ಲದೆ ಮತ್ತೇನೂ ಅಲ್ಲ.

ವಾಸ್ತವಿಕವಾಗಿ ಈ ಘಟನೆಯ ಹಿನ್ನೆಲೆ ಏನೆಂದರೆ ಪ್ರಾಚೀನ ಕಾಲದಲ್ಲಿ ಲಕ್ನೋ ಸಮೀಪ ಹಿರಣ್ಯಕಶಿಪುವಿನ ಸಾಮ್ರಾಜ್ಯವಿತ್ತು. ಅಸುರನಾದ್ದರಿಂದ ಹಿರಣ್ಯಕಶಿಪು ಆರ್ಯರ ವಿಷ್ಣು, ರಾಮ ಮುಂತಾದವರ ಕಡು ವಿರೋಧಿಯಾಗಿದ್ದ. ಆದ್ದರಿಂದಲೇ ರಾಜ್ಯವನ್ನು ”#ಹರಿದ್ರೋಹಿ” ಎಂದು ಕರೆಯುತ್ತಿದ್ದರು. ಅದೇ ಸ್ಥಳವನ್ನು ಇಂದು ಹರಿದ್ವಾರ ಎಂದು ಕರೆಯುತ್ತಾರೆ. ಹಿರಣ್ಯಕಶಿಪುವಿನ ಮಗ ಅಲ್ಲಲ್ಲಿ ಕಾಲ ಕಳೆಯುತ್ತಾ ಅಡ್ನಾಡಿ ಯಾಗಿಬಿಟ್ಟಿದ್ದ. ಇವನನ್ನು ಸುಧಾರಿಸಲು ಏನೆಲ್ಲಾ ಪ್ರಯತ್ನ ಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಬೇಸತ್ತು ಪ್ರಹ್ಲಾದನನ್ನು ಮನೆಬಿಟ್ಟು ಓಡಿಸಿದ ಹಿರಣ್ಯಕಶಿಪು ಮತ್ತೆ ಇನ್ನೆಂದೂ ಇತ್ತ ತಲೆ ಹಾಕಬೇಡ ಅವರ ಸಹವಾಸ ಮಾಡಿದ ಮೇಲೆ ಇನ್ನು ನಿನಗೆ ಉಳಿಗಾಲವಿಲ್ಲ ಹಾಳಾಗಿಹೋಗು ಎಂದು ಹೇಳಿ ಕಳಿಸಿಬಿಟ್ಟ! ಇದನ್ನೇ ಕಾಯುತ್ತಿದ್ದ ಆರ್ಯರು ಪ್ರಹ್ಲಾದನನ್ನು ತಮ್ಮತ್ತ ಎಳಕೊಂಡು ಮಗ ಅಪ್ಪನ ನಡುವೆ ಸದಾಕಾಲ ಕಿತ್ತಾಟ ನಡೆಯುತ್ತಿರುವಂತೆ ಕಡ್ಡಿ ಗೀರಿಬಿಟ್ಟರು! ಯಾವಾಗಲೂ ಉಂಡಾಡಿಗಳ ಜೊತೆ ಕಾಲ ಕಳೆಯುತ್ತಿದ್ದ ಪ್ರಹ್ಲಾದನನ್ನು ಕಂಡು ಹೋಳಿಕಾಗೆ ದುಃಖವಾಗುತ್ತಿತ್ತು. ಅಣ್ಣನ ಕಣ್ಣು ತಪ್ಪಿಸಿ ಪ್ರಹ್ಲಾದನಿಗೆ ದಿನವೂ ಊಟ ಕೊಟ್ಟು ಬರುತ್ತಿದ್ದಳು. ಒಂದು ದಿನ ಹೋಳಿಕಾ ಪ್ರಹ್ಲಾದನಿಗೆ ಊಟ ಹೊತ್ತುಕೊಂಡು ಬರುತ್ತಿರಲು ದಟ್ಟ ಮರಗಳ ಮಧ್ಯೆ ಗುಂಪೊಂದು ಕುಳಿತಿತ್ತು. ಅವಳು ಹತ್ತಿರ ಬಂದು ನೋಡಲು ಅಲ್ಲಿ ಪ್ರಹ್ಲಾದನು ತನ್ನ ಇತರ ಅಡ್ನಾಡಿ ಗೆಳೆಯರ ಜೊತೆಗೂಡಿ ಭಂಗಿಸೊಪ್ಪು ಅರೆದು ಕುಡಿಯುತ್ತಿದ್ದ. ಎಲ್ಲರೂ ಜೋರು ನಶೆಯಲ್ಲಿ ತೇಲುತ್ತಿದ್ದರು. ಅವರಲ್ಲಿ ಹಲವರು ಹೋಳಿಕಾಳನ್ನು ನೋಡುತ್ತಲೇ ಹತ್ತಿರ ಬಂದು ಅವಳ ಅತ್ಯಾಚಾರಕ್ಕೆ ಯತ್ನಿಸಿದರು. ಅವಳು ಬಹಳ ಸುಂದರಳಾಗಿದ್ದಳು, ಶೂರಳು ಆಗಿದ್ದಳು. ಆದರೆ ಅವಳು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗದೇ ಕೊನೆಗೂ ಅತ್ಯಾಚಾರಕ್ಕೆ ಒಳಗಾಗಬೇಕಾಯ್ತು. ಕೊನೆಗೆ ಅವಳನ್ನು ಜೀವಂತ ಉಳಿಸಿದರೆ ಅಪಾಯವೆಂದು ತಿಳಿದು ಅವರುಗಳು ಅವಳನ್ನು ಕೊಂದುಬಿಟ್ಟರು. ಗುರುತುಸಿಗದಿರಲೆಂದು ರಾತ್ರಿಯೆಲ್ಲಾ ಹೆಣದ ಮೇಲೆ ಸೌದೆಗಳನ್ನು ರಾಶಿ ರಾಶಿ ತಂದು ಬೆಂಕಿ ಹಚ್ಚಿಬಿಟ್ಟರು! ಅಲ್ಲೆಲ್ಲಾ ಇದ್ದ ಪಾಳು ಮನೆಗಳಿಂದ ಕಿಟಕಿ ಬಾಗಿಲುಗಳನ್ನು ಮುರಿದು ಹಾಕಿದರು. ಬೆಳಿಗ್ಗೆಯವರೆಗೂ ಇದರ ಒಂದಿಷ್ಟು ಸುಳಿವು ಸಿಗದಂತೆ ಮಾಡಿ ನಂತರ ತಮ್ಮ ದಾರಿ ಹಿಡಿದರು. ಇತ್ತ ಸಂಪೂರ್ಣ ನಿಶೆಯಲ್ಲಿ ಮುಳುಗಿದ್ದ ಪ್ರಹ್ಲಾದನಿಗೆ ತನ್ನ ತಂದೆಯ ತಂಗಿ ತಾಯಿ ಸಮಾನಳಂತೆ ದಿನವೂ ಬಂದು ಭೋಜನ ನೀಡುತ್ತಿದ್ದ ಹೋಳಿಕ ತನ್ನದೇ ಗ್ಯಾಂಗ್ ನಿಂದ ಅತ್ಯಾಚಾರಕ್ಕೊಳಗಾಗಿ ಕೊಲ್ಲಲ್ಪಟ್ಟಿರುವ ವಿಷಯ ತಿಳಿಯಲೇ ಇಲ್ಲ.

ಇತ್ತ ಹಿರಣ್ಯಕಶಿಪುವಿಗೆ ಸುದ್ದಿ ತಿಳಿದ ಕೂಡಲೇ ಬಹಳ ನೊಂದುಕೊಂಡು ಸ್ವತಃ ತಾನೇ ಆ ಸ್ಥಳಕ್ಕೆ ಧಾವಿಸುತ್ತಾನೆ. ಸಂಕಟದಿಂದ ಅತ್ತು ಹೊರಳಾಡುತ್ತಾನೆ. ತನ್ನ ಮಗನಿಗೆ ಊಟ ಹೊತ್ತೊಯ್ಯುತ್ತಿದ್ದಾಗ ಹೀಗಾದ ವಿಷಯ ತಿಳಿದು ಕೋಪದಿಂದ ತನ್ನ ಸೇವಕರಿಗೆ ತನ್ನ ತಂಗಿಯ ಅನ್ಯಾಯಕ್ಕೆ ಕಾರಣರಾದ ಕ್ರೂರಿಗಳನ್ನು ಹಿಡಿದುತರಲು ಆಜ್ಞೆ ಹೊರಡಿಸುತ್ತಾನೆ. ಎಲ್ಲರೂ ಸಿಕ್ಕಿಹಾಕಿಕೊಳ್ಳುತ್ತಾರೆ. ಅತ್ಯಂತ ದಕ್ಷ ಆಡಳಿತಗಾರ ನೆಂದು ಹೆಸರುವಾಸಿಯಾಗಿದ್ದ ಹಿರಣ್ಯಕಶಿಪುವಿಗೆ ತನ್ನ ಸ್ವಂತ ಮಗ ಅಂತಹ ನಾಲಾಯಕ್ಕು, ಅಡ್ನಾಡಿಗಳ ಜೊತೆ ಸೇರಿ ಕಲಿಯಬಾರದ ವಿದ್ಯೆಗಳನ್ನು ಕಲಿತು ಅದ್ವಾನವಾಗಿ ನಿಂತಿದ್ದನ್ನು ಕಂಡು ಒಂದು ಗಳಿಗೆ ಕೋಪವೂ ಬರುತ್ತದೆ! ಮರುಗಳಿಗೆಯಲ್ಲೇ ದುಃಖ ಒತ್ತರಿಸಿ ಬರುತ್ತದೆ. ರಾಜನ ಮಗ ಇಂತಹ ಭಂಗಿ ವ್ಯಸನಿಯಾಗಿ ನಿಂತಿರುವುದನ್ನು ಕಂಡು ತೀವ್ರ ಸಂಕಟಕೊಳಗಾಗುತ್ತಾನೆ. (ಮೂಲನಿವಾಸಿ ರಾಜರುಗಳ ಬಾಳನ್ನೆಲ್ಲಾ ಹೀಗೆ ನಾಶಮಾಡಿಯೇ ಅಲ್ಲವೆ ಆರ್ಯರು ಉಂಡು ಸಂತಸದಿಂದಿರುವುದು.) ಸ್ವಯಂ ನ್ಯಾಯಾಧೀಶನೂ ಆಗಿದ್ದ ಹಿರಣ್ಯಕಶಿಪು ರಾಜನು ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಮುನ್ನ ಕ್ರೂರ ಕೆಲಸಮಾಡಿದ್ದ ದ್ರೋಹಿಗಳ ಗುಂಪಿನ ಜೊತೆ ಮಗನೂ ಕುಳಿತಿದ್ದ ಕಾರಣ ಅವನಿಗೂ ಅವನ ಗುಂಪಿನ ಎಲ್ಲರ ಮುಖಗಳಿಗೆ ಮಸಿ ಬಳಸಿ, ಅವರೆಲ್ಲರ ಕತ್ತುಗಳಿಗೆ ಹಳೆಯ ಚಪ್ಪಲಿಗಳ ಹಾರಗಳನ್ನು ಹಾಕಿಸಿ ಕತ್ತೆಗಳ ಮೇಲೆ ಕೂರಿಸಿ ಊರಿನ ಸುತ್ತಲೂ ಮೆರವಣಿಗೆ ಮಾಡಿಸುತ್ತಾನೆ. ಈ ‘#ಹೋಳಿಕಾ’ ಘಟನೆಯೇ ಕಾಲಂತರದಲ್ಲಿ ಆರ್ಯರು ಸೇಡಿನಿಂದ ಉಲ್ಟಾ ಮಾಡಿ ಈಗಿನ ರೂಪಕೊಟ್ಟುಬಿಟ್ಟರು!!

ವಿಷ್ಣುವಿನ ಆರಾಧಕ ಹರಿನಾಮ ಸ್ಮರಣೆಯ ಬಾಲಕ ಪ್ರಹ್ಲಾದನ ಕಥೆ ಇಂತಿರ್ಪುದು! ಏನೇ ಆಗಲಿ ಅವರಿಗೆ ಹತ್ತಿರವಾಗಿದ್ದವರನ್ನೆಲ್ಲಾ ದೈವತ್ವಕ್ಕೇರಿಸಿ ಅವರನ್ನು ಅಮರರನ್ನಾಗಿಸುವ ಕಲೆ ಇವರಿಗಿಲ್ಲದೆ ಇನ್ಯಾರಿಗೂ ಬರುವುದಿಲ್ಲವಲ್ಲ ! ಅದು ಹೇಗೆ ಅಂತ? ಅದೆಲ್ಲಾ ವಿಷ್ಣು ಮಾಯೆ ಅನ್ನಿ!

ಹಿರಣ್ಯಕಶಿಪುವಿನ ಇತರ ಮಕ್ಕಳಾದ ಹ್ಲಾದ, ಸಂಹ್ಲಾದ ಇವರುಗಳು ತಂದೆಯಂತೆಯೇ ಯಜ್ಞ ವಿರೋಧಿಗಳು, ಹರಿ ವೈರಿಗಳು. ಆದರೆ ಪ್ರಹ್ಲಾದ ಮಾತ್ರ ಉಂಡಾಡಿ ಅಡ್ನಾಡಿಯಾಗಿ ಸುರರ ಕಡೆ ಸೇರಿಕೊಂಡು ಎಕ್ಕುಟ್ಟು ಹೋಗಿದ್ದು ಮಾತ್ರ ದುರಂತವೇ ಸರಿ! ಹಿರಣ್ಯಕಶಿಪುವಿನ ಸೋದರ ಹಿರಾಣ್ಯಕ್ಷ. ಆತನ ಮಕ್ಕಳು ಎಲ್ಲರೂ ವಿಷ್ಣುವಿನ ಕಡೆಯವರ ಮೋಸ, ಅತ್ಯಾಚಾರ, ಯಜ್ಞಕ್ಕಾಗಿ ಕಾಡುಗಳನ್ನು ನಾಶಮಾಡುತ್ತಿದ್ದುದರ ವಿರುದ್ಧ ದೊಡ್ಡ ಸಮರವನ್ನೇ ಸಾರಿದರು! ಪಾಪ! ಇವೆಲ್ಲರಿಗೂ ಇದ್ದ ಒಂದೇ ನೋವು ಏನೆಂದರೆ ಪ್ರಹ್ಲಾದನ ಜನಾಂಗ ದ್ರೋಹದ ಕೆಲಸಗಳು! ಇರಲಿ, ಇಲ್ಲಿ ಪ್ರಸ್ತಾಪಿಸಬೇಕಾದ ಇನ್ನೊಂದು ವಿಚಾರವೆಂದರೆ,

ಮಹಾತ್ಮ ಜ್ಯೋತಿಬಾ ಫುಲೆಯವರ #SLAVERY ಕೃತಿಯಲ್ಲಿ ಪ್ರಹ್ಲಾದನೂ ಸಹ ಕೊನೆಗೆ ವಿಷ್ಣುವಿನ ಮೋಸ ವಂಚನೆಗಳನ್ನೆಲ್ಲಾ ಹರಿತು ಆರ್ಯ ವಿರೋಧಿಯಾಗುತ್ತಾನೆ. ತನ್ನ ಅಪ್ಪ, ಚಿಕ್ಕಪ್ಪ ಮತ್ತು ತನ್ನ ಅಣ್ಣ-ತಮ್ಮಂದಿರ ಮಾತು ಕೇಳದೆ ಹಾಳಾದೆನಲ್ಲ ಎಂದು ಕೊರಗುತ್ತಾನೆ.

ಕಾಲಾಂತರದಲ್ಲಿ ಆರ್ಯರ ವಿರುದ್ಧವೇ ತಿರುಗಿಬಿದ್ದು ವಿಷ್ಣುವಿನ ಕಡೆಯವರನ್ನು ಬಗ್ಗುಬಡಿದ ಪ್ರಹ್ಲಾದನೂ ಸಹ ಅಪ್ಪನಂತೆಯೇ ಹರಿ ವೈರಿಯಾದ ವಿಚಾರ ಮಾತ್ರ ಮನುವಿನ ಕುಲಬಾಂಧವರು ಎಲ್ಲೂ ಹೇಳುವುದಿಲ್ಲ! ಹಿರಣ್ಯಕಶಿಪು ಮಲಗಿದ್ದಾಗ ಕಳ್ಳನಂತೆ ಕೋಣೆಗೆ ಬಂದು ಮುಖವಾಡ ಧರಿಸಿ ಕಬ್ಬಿಣದ ಸಲಾಕೆಯಿಂದ ಕಂಬದ ಬಳಿ ನಿಂತು ಅವನನ್ನು ಸಾಯಿಸಲು ಯತ್ನಿಸಿದ ವಿಷ್ಣುವನ್ನು ಹಿರಣ್ಯಕಶಿಪು ಎದ್ದು ಸದೆಬಡಿದಿದ್ದು, ಅಕ್ಕಪಕ್ಕದಲ್ಲಿ ಮಲಗಿದ್ದ ಹಿರಣ್ಯಕಶಿಪುವಿನ ಮಕ್ಕಳು ಓಡಿಹೋಗಲು ಯತ್ನಿಸುತ್ತಿದ್ದ ವಿಷ್ಣುವನ್ನು ಅಂಟಿಸಿಕೊಂಡು ಹೋಗಿ ಪ್ರಾಣ ಹೋಗುವಂತೆ ಹೊಡೆಯುತ್ತಿದ್ದನ್ನು ಘನ ಪಂಡಿತರುಗಳು ಯಾವ ಹರಿಕಥೆಗಳಲ್ಲೂ ಹೇಳುವುದಿಲ್ಲ. ಇವರುಗಳು ಹೇಳುವುದೆಲ್ಲಾ ಅದ್ಭುತ ಅವತಾರಗಳ ಕಥೆಗಳು! ಇವರುಗಳು ಕೇವಲ ಬಾಲಕ ಪ್ರಹ್ಲಾದನ ಹರಿನಾಮ ಸ್ಮರಣೆಯ ಚಿತ್ರಣವನ್ನು ಮಾತ್ರ ಕೊಡುತ್ತಾ ಬಂದರಷ್ಟೆ! ಅವನು ಮುಂದೆ ಏನಾದ? ಎಂಬ ವಿಚಾರವನ್ನು ಹೇಳಬೇಕಾಗಿರುವುದು ನಮ್ಮ ಮಕ್ಕಳಿಗಾಗಿ! ಇದಕ್ಕೇನೆ ನಾವು ಇತಿಹಾಸವನ್ನು ಅರಿಯಬೇಕಾಗಿರುವುದು! ಬಾಬಾಸಾಹೇಬರು ಯಾವುದನ್ನೂ ಸುಮ್ಮನೆ ಹೇಳಿಲ್ಲ. ಅವರ ಮಾತುಗಳಿಗೆ ಎರಡುಸಾವಿರ ವರ್ಷಗಳ ಅಗಾಧ ಇತಿಹಾಸದ ಅರಿವಿದೆ. ಇಂತಹ ಇತಿಹಾಸವನ್ನು ಅರಗಿಸಿ ಕೊಳ್ಳುವ ಶಕ್ತಿ ತಂದುಕೊಳ್ಳಿರೋ ಬಹುಜನರೆ ಏಕೆಂದರೆ, ಇಂತಹ ವಿಚಾರ ನಮಗೆ ಎಷ್ಟು ಬೇಗ ಅರ್ಥವಾಗುತ್ತದೋ ಅಷ್ಟು ಬೇಗ ನಮ್ಮ ವಿಮೋಚನೆ ಸಾಧ್ಯ.

ಆಧಾರ: ಮೂಲ ನಿವಾಸಿ ಬಹುಜನರ ಇತಿಹಾಸ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *