;

ಕೂಡ್ಲಿಗಿ:ನ್ಯಾಯಾಲಯ ಅಪರ ಸರ್ಕಾರಿ ವಕೀಲರಾಗಿ ಕೆ.ಜಿ.ಶಿವಪ್ರಸಾದ್ ನೇಮಕ…!!!

ಕೂಡ್ಲಿಗಿ:ನ್ಯಾಯಾಲಯ ಅಪರ ಸರ್ಕಾರಿ ವಕೀಲರಾಗಿ ಕೆ.ಜಿ.ಶಿವಪ್ರಸಾದ್ ನೇಮಕ

ವಿಜಯನಗರ ಜಿಲ್ಲೆ ಕೂಡ್ಲಿಗಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಲಯದ,ಅಪರ ಸರ್ಕಾರಿ ವಕೀಲರಾಗಿ ಕೆ.ಜಿ.ಶಿವಪ್ರಸಾದ್ ನೇಮವಾಗಿದ್ದಾರೆ.ಈವರೆಗೂ ಕಾರ್ಯ ನಿರ್ವಹಿಸಿದ್ದ ಹಿರಿಯ ವಕೀಲರಾದ ಹೋ.ಮ.ಪಂಡಿತರಾಧ್ಯ ರವರ ಅಧಿಕಾರವಧಿ ಮುಗಿದ ಹಿನ್ನಲೆಯಲ್ಲಿ , ತೆರವಾಗಿದ್ದ ಹುದ್ದೆಗೆ ಹಿರಿಯ ವಕೀಲರಾದ ಕೆ.ಜಿ.ಶಿವಪ್ರಸಾದ್ ರನ್ನು ನೇಮಿಸಲಾಗಿದೆ.ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶದನ್ವಯ, ಕಾನೂನು ಇಲಾಖೆ ಸೇವಾ ಆಡಳಿತ ಸರ್ಕಾರಿ ಅದೀನ ಕಾರ್ಯದರ್ಶಿ ಗಳಾದ ಆಧಿನಾರಾಯಣ ರವರು ನೇಮಿಸಿ ಅಧಿಸೂಚನೆ ನೀಡಿದ್ದಾರೆ.

ಅಭಿನಂದನೆಗಳ ಮಹಾಪೂರ-ಕೂಡ್ಲಿಗಿ ನ್ಯಾಯಾಲಯ ಅಪರ ಸರ್ಕಾರಿ ವಕೀಲರಾಗಿ ಕೆ.ಜಿ.ಶಿವಪ್ರಸಾದ್ ನೇಮಕವಾದ ಹಿನ್ನಲೆಯಲ್ಲಿ,ಅವರಿಗೆ ಅಭಿನಂದನೆಗಳ ಮಾಹ‍ಪೂರವೇ ಹರಿದುಬಂದಿದೆ. ಈವರೆ ಕರ್ಥವ್ಯ ನಿರ್ವಹಿಸಿದ ಹಿರಿಯ ವಕೀಲರಾದ ಹೋ.ಮ.ಪಂಡಿತರಾಧ್ಯ ರವರು,ಕೆ.ಜಿ.ಶಿವಪ್ರಸಾದ್ ರಿಗೆ ಅಧಿಕಾರ ಹಸ್ತಾಂತರಿಸಿ ಅಭಿನಂದಿಸಿದರು. ಹಿರಿಯ ನ್ಯಾಯಾಧೀಶರಾದ ಕೆ.ಎ.ನಾಗೇಶರವರು, ಹಾಗೂ ಕಿರಿಯ ಶ್ರೇಣಿ ನ್ಯಾಯಾಲಯಧೀಶರಾದ ಮುರುಗೇಂದ್ರ ತುಬಾಕೆ ರವರು.ಸರ್ಕಾರಿ ಸಹಾಯಕ ಅಭಿಯೋಜಕರಾದ ಹೊಸವಡ್ರು ಅಣ್ಣೇಶ,ಕಾನೂನು ಸೇವಾ ಸಮಿತಿಯ ಶಿವರುದ್ರಸ್ವಾಮಿ ಹಾಗೂ ಸಿಬ್ಬಂದಿ, ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಹಾಗೂ ವಕೀಲರ ಸಂಘದ ಅಧ್ಯಕ್ಷ ಜಿ.ಹೊನ್ನೂರಪ್ಪ,ಉಪಾಧ್ಯಕ್ಷ ಟಿ.ಪಾಪಯ್ಯ,ಕಾರ್ಯದರ್ಶಿ ಬಿ.ಸಿದ್ದಲಿಂಗಪ್ಪ,ಗ್ರಂಥಾ ಪಾಲಕರಾದ ರಾಮಪ್ಪ, ಪ್ಯಾನಲ್ ವಕೀಲರಾದ ಸಿ.ವಿರುಪಾಕ್ಷಪ್ಪ,ಮಲ್ಲಿಕಾರ್ಜುನಸ್ವಾಮಿ,ಹಿರಿಯ ವಕೀಲರಾದ ಶಿವರುದ್ರಗೌಡ್ರು,ನಾಗರಾಜ ಶೆಟ್ರು,ನೋಟರಿ ಸಿದ್ದಪ್ಪ, ಬಡೇಲಡಕು ಮೂಗಪ್ಪ,ಮಹಿಳಾ ವಕೀಲರಾದ ಕೆ.ಹೆಚ್.ಎಂ.ಶೇಲಜಾ,ಲಕ್ಷ್ಮೀ,ಜಯಮ್ಮ, ಹನುಮಂತಪ್ಪ, ಎಲ್.ಎಸ್.ಬಷೀರ್ ಅಹಮ್ಮದ್,ಜಾಗಟಗೇರಿ ನಾಗರಾಜ,ಹನುಮೇಶ,ಭಾಷಾ ಸಾಹೇಬ್,ಯು.ಚಂದ್ರು,ಮಲ್ಲಿಕಾರ್ಜುನ ,ಕೊಟ್ರೇಶ, ನಾಗರಾಜ,ಶಿವಕುಮಾರ್,ಟಿ.ಸಲೀಂ,ಬಿ.ನಾಗರಾಜ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು ಸರ್ವಸದಸ್ಯರು. ತಾಲೂಕಿನ ಗಣ್ಯರು, ಹಿರಿಯ ನಾಗರೀಕರು,ಪತ್ರಕರ್ತರ ಸಂಘ, ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕೆ.ಜಿ.ಶಿವಪ್ರಸಾದ್ ರವರನ್ನು ಅಭಿನಂದಿಸಿದ್ದಾರೆ.

ವರದಿ.ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;