ಡಾll ನಾಗವೇಣಿ ಅವರಿಗೆ ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿ.
ಸಿಂಧನೂರು: ಪ್ರತಿ ದಿನವೂ ತಮ್ಮನ್ನು ತಾನು ತೊಡಗಿಸಿಕೊಂಡು ಒಂದಲ್ಲಾ ಒಂದು ಸಮಾಜ ಚಟುವಟಿಕೆಗಳಲ್ಲಿ ಭಾಗವಹಿಸಿ ಸಮಾಜ ಸೇವೆ ಸಲ್ಲಿಸುತ್ತಾ ಬಂದಿರುವ ಡಾ. ನಾಗವೇಣಿ ಎಸ್. ಪಾಟೀಲ್ ತುರುವಿಹಾಳ ಇವರಿಗೆ ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿ ಲಭಿಸಿದೆ.
ಇತ್ತೀಚೆಗೆ ಮೈಸೂರಿನಲ್ಲಿ ಖಾಸಗಿ ಹೋಟೆಲೊಂದರಲ್ಲಿ ಶ್ರೀ ದುರ್ಗಾ ಪೌಂಡೇಶನ್ ವತಿಯಿಂದ ಏರ್ಪಡಿಸಿದ್ದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಗುರುತಿಸಿ ಪ್ರಶಸ್ತಿ ಕೊಡುವ ಸಮಾರಂಭದಲ್ಲಿ ಡಾ. ನಾಗವೇಣಿ ಅವರಿಗೆ ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ನಾಗವೇಣಿಯವರು ಮಾತನಾಡಿ ಈ ಪ್ರಶಸ್ತಿಗಳು ನನ್ನ ಸಮಾಜಸೇವೆಗೆ ಮುನ್ನುಗ್ಗಲು ದಾರಿದೀಪ ವಾಗಿರುತ್ತದೆಎಂದ ಅವರು ದುರ್ಗಾ ಪೌಂಡೇಶನ್ ಜಿಲ್ಲಾಮಟ್ಟ & ರಾಜ್ಯಮಟ್ಟದ ಅತ್ಯುತ್ತಮ ಸೇವೆಸಲ್ಲಿಸಿದ ಅವರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದೆ ಅದೇರೀತಿ ಮುಂಬರುವ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಯಲಿ ಎಂದು ಹೇಳಿದರು.
ಈ ಭವ್ಯ ಸಮಾರಂಭದ ವೇದಿಕೆಯ ಮೇಲೆ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಮಂಜಮ್ಮ ಜೋಗತಿ, ಸಾಲುಮರದ ತಿಮ್ಮಕ್ಕ ಚಲನಚಿತ್ರ ನಟ ನಟಿಯರು ಇನ್ನೂ ಅನೇಕ ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
