;

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಎಚ್ಕೆ ಕುಂಟೆ ಸಹಿಪ್ರಾ ಶಾಲೆಯಲ್ಲಿ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡಲಾಯಿತು…!!!

ವಿಶ್ವ ಮಹಿಳಾ ದಿನಾಚರಣೆ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಎಚ್ಕೆ ಕುಂಟೆ ಸಹಿಪ್ರಾ ಶಾಲೆಯಲ್ಲಿ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡಲಾಯಿತು..
ಹೆಣ್ಣು ಈ ಸಮಾಜದ ಮುಂದಿನ ಕಣ್ಣು. ಮುಖ್ಯಶಿಕ್ಷಕ ಶಾಮಸುಂದರ ಸಪಾರೆ
ಮಹಿಳೆಯರಿಗೆ ನೀಡಬೇಕಾದ ಗೌರವ ಸ್ಥಾನಮಾನ ಹಾಗೂ ಹಕ್ಕುಗಳನ್ನು ನೀಡಿರಿ, ಅವರೇ ಈ ಸಮಾಜದ ಮುಂದಿನ ಕಣ್ಣಾಗುವ ರು ಎಂದು ಮುಖ್ಯಶಿಕ್ಷಕ ಶ್ಯಾಮಸುಂದರ ಸ ಪಾರೆ
ಸಹಿಪ್ರಾ ಶಾಲೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮ ಕುರಿತು ಮಾತನಾಡಿದರು.ಹೆಣ್ಣು ಅಬಲೆಯಲ್ಲ ಸಬಲೆ,ಮಹಾ ಗಟ್ಟಿಗಿತ್ತಿ ಮತ್ತು ಚಲಗಾತಿ ಅವಕಾಶ ಕಲ್ಪಿಸಿ ಕೊಡಿ, ತಾಯಿಯಾಗಿ, ಮಗಳಾಗಿ, ಪತ್ನಿಯಾಗಿ. ಸ್ನೇಹಿತೆಯಾಗಿ ಎಲ್ಲಾ ಪಾತ್ರಗಳನ್ನು ತುಂಬುವ ಅಂತ ಹ ಹೆಣ್ಣನ್ನು ಗೌರವಿಸುವ ಅಂತರಾಷ್ಟ್ರೀಯ ಮಟ್ಟದಲ್ಲಿ ಒಂದು ದಿನ. ಮೀಸಲಿದೆ, ಅದುವೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರತಿವರ್ಷ ಮಾರ್ಚ್ ತಿಂಗಳೊಂದು ಮಹಿಳಾ ದಿನಾಚರಣೆಯನ್ನು ಆಚರಿಸುತ್ತೇವೆ.ಬಡ ದುರ್ಬಲ ಹೆಣ್ಣುಮಕ್ಕಳನ್ನು ಪ್ರೋತ್ಸಾಹಿಸಿ ಸುಂದರ ಬದುಕು ರೂಪಿಸುವ ಕಾರ್ಯಕ್ರಮ ಈ ಮಹಿಳಾ ದಿನಾಚರಣೆ ಯಾಗಿದೆ ಎಂದರು. ಸಭೆಯ ಘನ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ.ಯ ಮಹಿಳಾ ಸದಸ್ಯರಾದ ಶ್ರೀಮತಿ ಅಂಬಿಕಾ.ಸಿ.ಅವರು ವಹಿಸಿಕೊಂಡಿದ್ದರು.
ಕಾರ್ಯಕ್ರಮ ದಲ್ಲಿ ದೇಶದ ಸಾಧನೆಗೈದ ವೀರ ವನಿತೆಯರ ವೇಷಭೂಷಣ ಧರಿಸಿ ಮಕ್ಕಳು ಅವರ ಸಾಧನೆ ಕುರಿತು ಹಂಚಿಕೊಂಡರು.
ಕಲ್ಪನಾ ಚಾವ್ಲ್, ಸಾವಿತ್ರಬಾಯಿಪುಲೆ,ಸುಧಾಮೂರ್ತಿ, ದೀಶಾ ಮಣ್ಮೂರ್,ಮೇರಿಕೊಂ,ಕರಣಂ ಮಲ್ಲೇಶ್ವರಿ,ಓಬವ್ವ,ರಾಣಿ ಅಬ್ಬಕ್ಕ,ಸಾಲುಮರದ ತಿಮ್ಮಕ್ಕ,ಗಾಯಕಿ ಲತಾಮಂಗೇಶ್ಕರ್, ಸುಬ್ಬಲಕ್ಷ್ಮೀ ,ಪಂಡರೀಬಾಯಿ ಇತರ ಸಾಧಕಿಯರನ್ನು ನೆನೆದರು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿಯ ಮಹಿಳಾಸದಸ್ಯರಾದ ಶ್ರೀಮತಿ ಮಂಗಳಗೌರಿ,ಮಮತಾ, ಶಿಕ್ಷಕರುಗಳಾದ ರೂಪ, ಶಾರದ,ಹನುಮಂತರಡ್ಡಿ,ಬಸವರಾಜ,ಮಂಜುನಾಥ,ವಿದ್ಯಾರ್ಥಿವೃಂದ ಪೋಷಕರು ಹಾಜರಿದ್ದರು…

ವರದಿ.ಡಿ.ಎಂ.ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;