;

ಎ.ಆರ್.ಟಿ.ಒ.ಪ್ರಾದೇಶಿಕ ಕಚೇರಿ ನಗರಕ್ಕೆ ಮಂಜೂರು ಮಾಡಿಸುವಲ್ಲಿ – ನಾಡಗೌಡ ಯಶಸ್ವಿ…!!!

ಎ.ಆರ್.ಟಿ.ಒ.ಪ್ರಾದೇಶಿಕ ಕಚೇರಿ ನಗರಕ್ಕೆ ಮಂಜೂರು ಮಾಡಿಸುವಲ್ಲಿ – ನಾಡಗೌಡ ಯಶಸ್ವಿ.

ಸಿಂಧನೂರು : ನಗರಕ್ಕೆ ARTO ಪ್ರಾದೇಶಿಕ ಕಚೇರಿ ಮಂಜೂರು ಮಾಡುವಲ್ಲಿ ಶಾಸಕರಾದ ವೆಂಕಟರಾವ್ ನಾಡಗೌಡ ಅವರು ಯಶಸ್ವಿಯಾದರು.

ದೇಶದಲ್ಲಿಯೇ ಅತಿ ಹೆಚ್ಚು ಟ್ರ್ಯಾಕ್ಟರ್ ಗಳು ಮಾರಾಟವಾಗುವ ಅಥವಾ ಉಪಯೋಗಿಸುವ ಕೇಂದ್ರವಾಗಿದೆ.ಅತಿಹೆಚ್ಚು ಪ್ರಮಾಣದಲ್ಲಿ ವಾಹನ ಖರೀದಿಯಾಗುತ್ತವೆ. ಸರಕಾರಕ್ಕೂ ಆದಾಯ ಬರುತ್ತದೆ.ರಾಯಚೂರು ಜಿಲ್ಲೆಯಲ್ಲೇ ವಾಣಿಜ್ಯವಾಗಿ ವೇಗವಾಗಿ ಬೆಳೆಯುತ್ತಿರುವ ಸಿಂಧ‌ನೂರು ತಾಲೂಕಿನಲ್ಲಿ ಎಆರ್ ಟಿಓ ಕಚೇರಿ ಆರಂಭಿಸಬೇಕು ಎಂದು ಕಳೆದ ಬಾರಿ ಅಧಿವೇಶನದಲ್ಲಿ ನಗರಕ್ಕೆ ಮಂಜೂರು ಮಾಡುವ ಕುರಿತು ಚರ್ಚೆಯಾದಾಗ, ಸಚಿವರು ಮಂಜೂರು ಮಾಡಲು ಯೋಚಿಸುತ್ತೇವೆ ಎಂದು ಹೇಳಿದ್ದರು.ಆದರೆ ಇಂದು ಅಧಿವೇಶನದಲ್ಲಿ ಲಿಂಗಸ್ಗೂರು ಶಾಸಕರು ಎ. ಆರ್. ಟಿ. ಒ. ಪ್ರಾದೇಶಿಕ ಕಚೇರಿ ಕುರಿತು ಕೇಳಿದ ಪ್ರಶ್ನೆಯಲ್ಲಿ ಶಾಸಕ ವೆಂಕಟರಾವ್ ನಾಡಗೌಡ ಅವರು ಮಧ್ಯಪ್ರವೇಶಿಸಿ ಸಿಂಧನೂರು ನಗರದಲ್ಲಿ ಕಚೇರಿ ಪ್ರಾರಂಭಿಸಲು ಚರ್ಚಿಸಿದರು,
ಅಧಿವೇಶನದಲ್ಲಿ ಶಾಸಕರು ಮಾತನಾಡಿದ ನಂತರ ಸಚಿವರು ಉತ್ತರ ನೀಡುವಾಗ ಸಿಂಧನೂರಿಗೆ ಎ.ಆರ್.ಟಿ.ಒ. ಪ್ರಾದೇಶಿಕ ಕಚೇರಿ ಮಂಜೂರು ಮಾಡಿರುವುದಾಗಿ ಸಚಿವರು ಹೇಳಿಕೆ ನೀಡಿದರು.

ನಗರಕ್ಕೆ ARTO ಪ್ರಾದೇಶಿಕ ಕಚೇರಿ ಮಂಜೂರು ಮಾಡಿರುವುದಾಗಿ ಒಪ್ಪಿಗೆ ನೀಡಿದ ಮಾನ್ಯ ಸಚಿವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಶಾಸಕರಾದ ವೆಂಕಟರಾವ್ ನಾಡಗೌಡ ತಿಳಿಸಿದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;