ಮಹಾಲಿಂಗಪುರ ಪುರಸಭೆಯಲ್ಲಿ ಮಹಿಳಾ ದಿನಾಚರಣೆ ಆಚರಣೆ.
ಮಹಿಳೆಯರ ಸಬಲೀಕರಣ ತರಬೇತಿ ಕಾರ್ಯಾಗಾರಗಳಲ್ಲಿ ಮಹಿಳೆಯರು ಪಾಲ್ಗೊಳ್ಳಲಿ: ಸ್ನೇಹಲ್ ಅಂಗಡಿ
ಮಹಾಲಿಂಗಪುರ: ಪ್ರತಿವರ್ಷ ಪುರಸಭೆಯು ಮಹಿಳೆಯರ ಸಬಲೀಕರಣಕ್ಕಾಗಿ ವಿವಿಧ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಂಡಿರುತ್ತದೆ, ಕಾರಣ ಮಹಿಳೆಯರು ಇದರ ಸದುಪಯೋಗ ಪಡಿಸಿಕೊಂಡು ಸ್ವಾವಲಂಬಿಗಳಾಗಬೇಕೆಂದು ಎಂದು ಪುರಸಭಾಧ್ಯಕ್ಷೆ
ಸ್ನೇಹಲ್ ಶಿವಾನಂದ ಅಂಗಡಿ ಹೇಳಿದರು.ಮಂಗಳವಾರ ಪುರಸಭೆಯಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರು ಗಂಡನ ಅಲ್ಪ ಸಂಪಾದನೆಯಲ್ಲಿ ಬದುಕು ಸಾಗಿಸುವ ಸಾಕಷ್ಟು ಕುಟುಂಬಗಳಿವೆ. ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲಳು, ಕಾರಣ ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗದೆ ತಮ್ಮಲ್ಲಿರುವ ಪ್ರತಿಭೆಗಳ ಮೂಲಕ ಸಮಾಜ ಸುಧಾರಣೆಗೆ ಮುಂದಾಗಬೇಕು ಆಗ ಮಹಿಳಾ ಸಬಲೀಕರಣ ಯೋಜನೆಗೊಂದು ಮಹತ್ತ ಎಂದರು. ಮತ್ತು ತಮ್ಮ ಮನೆಗಳ ಮುಂದೆ ಸ್ವಚ್ಛತೆ ಕಾಪಾಡಿಕೊಂಡು ವಾರ್ಡಗಳಲ್ಲಿರುವ ಉದ್ಯಾನವನಗಳನ್ನು ಸ್ವಚ್ಛಗೊಳಿಸಿ ಸ್ವಚ್ಛಂದ ಪರಿಸರ ರೂಪಿಸಿಕೊಳ್ಳಲು ಪುರಸಭೆಯೊಂದಿಗೆ ಕೈಜೋಡಿಸಬೇಕು ಎಂದು ಮಹಿಳೆಯರಿಗೆ ಕಿವಿ ಮಾತು ಹೇಳಿದರು.ನಂತರ ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸುವರ್ಣಾ ಆಸಂಗಿ ಮಹಿಳೆ ಅಬಲೆಯಲ್ಲ ಸಬಲೆ. ಇಂದಿನ ಜಾಗತಿಕ ಮಟ್ಟದಲ್ಲಿ ಪ್ರತಿ ಹೆಣ್ಣು ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕವಾಗಿ ಉನ್ನತ ಹುದ್ದೆಗಳಲ್ಲಿ ಪುರುಷನ ಸರಿಸಮಾನವಾಗಿ ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾಳೆ. ಸಾರ್ವಜನಿಕ ಸಮಸ್ಯೆಗಳಿಗೆ ಹೆದರದೆ ಧೈರ್ಯದಿಂದ ಎದುರಿಸಬೇಕು, ಧೈರ್ಯವೇ ಸಮಸ್ಯೆಗಳಿಗೆ ಪರಿಹಾರವಾಗಿದೆ. ಮಹಿಳೆಯರು ಪುರಸಭೆ ಆದಿಯಾಗಿ ಸಂಘಗಳಿಂದ ಪಡೆದ ಹಣವನ್ನು ಸದ್ಬಳಕೆ ಮಾಡಿಕೊಂಡು ಶೀಘ್ರವಾಗಿ ಸಂದಾಯ ಮಾಡುವತ್ತ ಗಮನಹರಿಸಬೇಕು ಆವಾಗ ಮಹಿಳಾ ಒಕ್ಕೂಟಗಳಿಗೆ ಅರ್ಥ ಬರುತ್ತದೆ ಎಂದರು. ಸಮಾಜ ಸೇವಕಿ ವಿಜಯಲಕ್ಷ್ಮೀ ಮಹಾಲಿಂಗಪ್ಪ ಕುಳ್ಳೋಳ್ಳಿ ಮಾತನಾಡಿ ಮಹಿಳೆಯರು ಮನೆಗೆ ಮಾತ್ರ ಸೀಮಿತವಾಗದೆ ಮಹಿಳಾ ಸಂಘಟನೆಗಳು ಸಮಾಜಗಳಲ್ಲಿ ಬೆರೆತು ಸಾಮಾಜಿಕ ಸುಧಾರಣೆಯಲ್ಲಿ ಹೆಣ್ಣು ಪುರುಷರಿಗಿಂತ ಕಡಿಮೆ ಏನಲ್ಲ ಎಂಬುವುದನ್ನು ಸಾಬೀತು ಪಡಿಸಬೇಕು.ಈ ಕಾರಣದಿಂದಲೇ ಯಶಸ್ವಿ ಪುರುಳನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುವುದು ಗಮನಾರ್ಹ ವಿಷಯವಾಗಿದೆ.ಇದೇ ಸಂದರ್ಭದಲ್ಲಿ ಸರ್ಕಾರದಿಂದ ಬಂದಂತಹ ಹೊಲಿಗೆ ಯಂತ್ರ ಮತ್ತೂ ವಿಪಿಎಸ್ ಮಹಿಳೆಯರಿಗೆ ಮತ್ತು ಅಂಗವಿಕಲರಿಗೆ ಈ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಯಿತು.ಪುರಸಭೆ ಮಾಜಿ ಅಧ್ಯಕ್ಷ ಜಿ.ಎಸ್. ಗೊಂಬಿ,ಮುಖ್ಯಾಧಿಕಾರಿ ಚಿತ್ತರಗಿ ಮಾತನಾಡಿದರು.ವೇದಿಕೆ ಮೇಲೆ ಪುರಸಭೆ ಸದಸ್ಯರಾದ ಸರಸ್ವತಿ ರಾಮೋಜಿ,ಲಕ್ಷ್ಮೀ ಮುದ್ದಾಪೂರ, ಸಜನಸಾಬ ಪೆಂಡಾರಿ,ಶೇಖರ ಅಂಗಡಿ,ಬಸವರಾಜ ಹಿಟ್ಟಿನಮಠ, ರಾಜು ಚಮಕೇರಿ ಮತ್ತು ಸಿ.ಎಂ ಗೌಡರ,ಅರುಣಾ ಅಂಗಡಿ, ಈರಪ್ಪ ಚುರಮರಿ ಮತ್ತು ಪುರಸಭೆ ಸಿಬ್ಬಂದಿ ಎಸ್.ಎನ್. ಪಾಟೀಲ,ಮಠಪತಿ, ಬಿ.ವಾಯ್ ಮರ್ದಿ, ರಾಜೇಶ್ವರಿ ಸೋರಗಾಂವಿ, ಚನ್ನಮ್ಮ ಕಮತಗಿ,ರಾಮು ಮಾಂಗ ಮತ್ತು ನಗರದ ಹಲವಾರು ಮಹಿಳೆಯರು ಭಾಗಿಯಾಗಿದ್ದರು.

ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
