Kuwj ಸಮಸ್ತ ರಾಜ್ಯ ಸದಸ್ಯರುಗಳಿಗೆ, ಬಂಗ್ಲೆಯ ಹೃದಯ ಪೂರ್ವಕ ಕೃತಜ್ಞೆತೆಗಳು…!!!

Kuwj ಸಮಸ್ತ ರಾಜ್ಯ ಸದಸ್ಯರುಗಳಿಗೆ, ಬಂಗ್ಲೆಯ ಹೃದಯ ಪೂರ್ವಕ ಕೃತಜ್ಞೆತೆಗಳು:- ಇತ್ತೀಚೆಗೆ ಅಂದರೆ ದಿನಾಂಕ:-27/02/2022 ರಂದು ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರುಗಳ ಮೂರು ಸ್ಥಾನಕ್ಕೆ ನಡೆದಂತ ಚುನಾವಣೆಯಲ್ಲಿ ಕೆಲವು ಜಿಲ್ಲೆಯ ಆತ್ಮೀಯರು ನೀಡಿದಂತ ವರದಿಯ ಅನುಸಾರ ತುಮಕೂರು ಜಿಲ್ಲೆಯಿಂದ 179 ಮತಗಳು,ಬೆಂಗಳೂರು ನಗರ ಜಿಲ್ಲೆ 89 ಮತಗಳು,ಬೆಂಗಳೂರು ಗ್ರಾಮಾಂತರ ಜಿಲ್ಲೆ 110,ವಿಜಯಪುರ ಜಿಲ್ಲೆ 136 ಮತಗಳು,ಧಾರವಾಡ ಜಿಲ್ಲೆ 101 ಮತಗಳು,ಮಂಗಳೂರು ಜಿಲ್ಲೆ 99,ಕೊಡಗು ಜಿಲ್ಲೆ 42,ಕೊಪ್ಪಳ ಜಿಲ್ಲೆ 52. ಮತಗಳು,ದಾವಣಗೆರೆ ಜಿಲ್ಲೆಯಿಂದ 84 ಮತಗಳು,ಹಾಸನ ಜಿಲ್ಲೆಯಿಂದ 42 ಮತಗಳು,ಬಳ್ಳಾರಿ ಜಿಲ್ಲೆ 49,ವಿಜಯನಗರ ಜಿಲ್ಲೆ 38,ಚಿಕ್ಕಬಳ್ಳಾಪುರ ಜಿಲ್ಲೆ 119,ಕಲುಬುರುಗಿ ಜಿಲ್ಲೆ 59 ಮತಗಳು, ಯಾದಗಿರಿ ಜಿಲ್ಲೆ 48 ಮತಗಳು ಲಭಿಸಿರುವುದು ಗೊತ್ತಾಗಿದೆ.ಇನ್ನು ಉಳಿದಂತ ಜಿಲ್ಲೆಗಳಲ್ಲಿ ಮತಗಳು ಕುರಿತು ನನಗೆ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಯಾದ ಸು.ತ.ರಾಮೇಗೌಡರನ್ನು ವಿಚಾರಿಸಿದಾಗ ನನಗೆ ಈ ಕುರಿತು ಮಾಹಿತಿ ಇಲ್ಲಾ ಎಂಬ ಬುದ್ದಿವಂತಿಕೆಯ ಉತ್ತರ ಲಭಿಸಿದೆ.ಪ್ರಸ್ತುತ ಚುನಾವಣೆಯಲ್ಲಿ ನಾನು ರಾಜ್ಯದ ಯಾವ ಮುಖಂಡರನ್ನಾಗಲಿ,ಮತದಾರರನ್ನಾಗಲಿ ಖದ್ದಾಗಿ ಕಾಣುವುದಕ್ಕೆ ಹಾಗೂ ಪೋನ್ ಮೂಲಕ ಸಾಧ್ಯವಾಗಿಲ್ಲ. ಜೊತೆಗೆ ಪ್ರತಿಯೊಬ್ಬ ಮತದಾರರಿಗೂ ನನ್ನ ಪತ್ರಿಕೆಯ ಮೂಲಕ ಮನವಿಯನ್ನು ಸಲ್ಲಿಸಿ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನನಗೆ ಬೆಂಬಲಿಸುವಂತೆ ಕೋರಿ ಅಂಚೆ ಮೂಲಕ ಕಳುಹಿಸ ಬೇಕೆನ್ನುವ ನನ್ನ ಚಿಂತನೆಗೆ ರಾಜ್ಯಾಧ್ಯಕ್ಷ ಹಾಗೂ ಚುನಾವಣಾಧಿಕಾರಿ ಸೇರಿ ಎಳ್ಳು ನೀರು ಬಿಟ್ಟಂತೆ ಮತದಾರರ ಪಟ್ಟಿಯಲ್ಲಿ ವಿಳಾಸವೇ ಇಲ್ಲದಂತ ಪಟ್ಟಿ ನೀಡಿರುವುದು ಇವರ ಕುಟಿಲತನಕ್ಕೆ ಸಾಕ್ಷಿ ಎನ್ನುವಂತಿದೆ. ಆದರೂ ಪ್ರಬುದ್ದ ಮಾಧ್ಯಮ ಮತದಾರರು ನನ್ನ ವಿರೋಧಿಗಳು ನೀಡಿದಂತ ಹಣಕ್ಕಾಗಲಿ,ಗೋಡೆ ಗಡಿಯಾರಕ್ಕಾಗಲಿ,ಹೆಂಡ ತುಂಡಿಗಾಗಲಿ ನನ್ನಿಂದ ಆಪೇಕ್ಷಿಸದೆ ನಿಸ್ವಾರ್ಥವಾಗಿ ನನ್ನ ಹೋರಾಟದ ಮನೋಭಾವವನ್ನು ಗುರುತಿಸಿ ನನಗೆ ದೊಡ್ಡ ಮಟ್ಟದ ಬೆಂಬಲವನ್ನು, ಮತಗಳು ಮೂಲಕ ನೀಡಿದ್ದು,ನನಗೆ ಇನ್ನಿಲ್ಲದಂತ ಸಂತೋಷವಾಗಿದೆ. ನನಗೆ ಮತ ನೀಡಿದಂತ ಪ್ರತಿಯೊಬ್ಬ ಮತದಾರರಿಗೂ ಹೃದಯ ಪೂರ್ವಕ ಧನ್ಯವಾದಗಳು. ಇನ್ನುಳಿದಂತ ಜಿಲ್ಲೆಗಳಲ್ಲಿ ಪೆನ್ನು ಅವರದೇ,ಪೇಪರೂ ಅವರದೇ ಎನ್ನುವಂತ ಯಥಾ ರಾಜಾ ತಥಾ‌ ಪ್ರಜೆ ಎನ್ನವಂತೆ ಸಾಗಿರುವ ಈ ಚುನಾವಣೆಯಲ್ಲಿ ನ್ಯಾಯ ಸಮ್ಮತ ಫಲಿತಾಂಶ ನಿರೀಕ್ಷಿಸುವುದಕ್ಕೆ ಸಾಧ್ಯವೇ ಎನ್ನುವಂತ ಪ್ರಶ್ನೆ ಪ್ರತಿಯೊಬ್ಬರಲ್ಲಿ ಮೂಡಿದೆ,ಅನೇಕ ಜಿಲ್ಲೆಗಳಲ್ಲಿ ಅಂದೇ ಮತಗಳ ಎಣಿಕೆ ಅಂಕಿ ಅಂಶ ಗೊತ್ತಾಗಿದೆ.ಇನ್ನುಳಿದಂತ ಜಿಲ್ಲೆಗಳಲ್ಲಿ ಯಾಕೆ ಎಂಬ ಪ್ರಶ್ನೆಗೆ ಗೋಲ್ ಮಾಲ್ ಎಂಬ ಉತ್ತರ ವಿರಬಹುದೇ? ಮುಂದಿನ ವಾರ ನಾನು ಸಲ್ಲಿಸಿರುವ ರಿಟ್ ಪಿಟಿಷನ್ ಗೆ kuwj ಚುನಾವಣಾ ಫಲಿತಾಂಶಕ್ಕೆ ನೀಡಿರುವ ತಡೆಯಾಜ್ಞೆ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ವಿಚಾರಣೆ ಮುಂದುವರೆಯಲಿದೆ,ಈ ಕುರಿತಂತೆ ರಾಜ್ಯದ ಪತ್ರಕರ್ತರು ತದೇಕ ಚಿತ್ತದಿಂದ ಕಾಯುತ್ತಿದ್ದಾರೆ. ಸಂಘದಲ್ಲಿ ಬೇರೂರಿರುವ ಕೆಲ ವ್ಯಕ್ತಿಗಳನ್ನು ಇಲ್ಲಿಂದ ತೊಲಗಿಸಿವಂತ ಹಾಗೂ ಭ್ರಷ್ಟಾಚಾರಿಗಳ ಬಣ್ಣ ಬಯಲಾಗುವಂತ ಕಾರ್ಯ ಕಾನೂನಡಿಯಲ್ಲಿ ಸಾಗಿಸುವುದಕ್ಕೆ ಬೆಂಗಳೂರು ಹಾಗೂ ಇನ್ನೀತರ ಜಿಲ್ಲೆಗಳ ಅನೇಕ ಪತ್ರಕರ್ತರು ನನ್ನೊಂದಿಗೆ ಕೈಜೋಡಿಸಿರುವುದು ಮತ್ತಷ್ಟು ಬಲ ನೀಡಿದೆ. ಬಂಗ್ಲೆ ಮಲ್ಲಿಕಾರ್ಜುನ,ರಾಜ್ಯ ಕಾರ್ಯದರ್ಶಿಗಳು,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ…

ವರದಿ. ಮಂಜುನಾಥ್, ಎನ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend