ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ.
ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭ.
ಕಾನ ಹೊಸಹಳ್ಳಿ ಗ್ರಾಮದ ಎಸ್. ಕೆ. ಡಿ. ಡಿ. ವಿ, ಪ್ರೌಢಶಾಲೆಯ ಆವರಣದಲ್ಲಿ, ಪ್ರೌಢಶಾಲೆಯ ಇಂಗ್ಲಿಷ್ ಭಾಷೆಯ ಶಿಕ್ಷಕರಾದ, ಕೆಎಆರ್ ರವೀಂದ್ರ ಶಿಕ್ಷಕರು ಸುಮಾರು 32 ವರ್ಷಗಳ ಕಾಲ ನಿರಂತರ ಸೇವೆಗೈದುದಿನಾಂಕ 28,2.2022 ರಂದು .ವಯೋ ನಿವೃತ್ತಿ ಹೊಂದಿದ್ದರಿಂದ, ಎಸ್ ಕೆ ಡಿಡಿವಿ ಪ್ರೌಢಶಾಲೆ ವತಿಯಿಂದ ವಯೋ ನಿವೃತ್ತಿ ಬೀಳ್ಕೊಡುಗೆ ಸನ್ಮಾನ ಸಮಾರಂಭ ಏರ್ಪಡಿಸಿದ್ದು ಶಿಕ್ಷಕ ಶ್ರೀಯುತ ಕೆಆರ್ ರವೀಂದ್ರ ರವರಿಗೆ ಹೂಮಾಲೆ ಹಾಕಿ, ಸನ್ಮಾನಿಸಿ ಗೌರವಿಸಿ ಬೀಳ್ಕೊಡಲಾಯಿತು. ಶ್ರೀಯುತ ಕೆ ಆರ್ ರವೀಂದ್ರ ರವರು ಕೆಆರ್ ಮೇಷ್ಟ್ರು ಎಂದು ಚಿರಪರಿಚಿತರಾಗಿದ್ದರು ಸದಾಕಾಲ ನಗುನಗುತ್ತಲೇ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಮನ ಗೆದ್ದಂತವರು. ಕೆಆರ್ ರವೀಂದ್ರ ಶಿಕ್ಷಕರ ನಿವೃತ್ತಜೀವನ ಸುಖಕರವಾಗಿರಲಿ ಎಂದು ಎಸ್. ಕೆ.ಡಿ.ಡಿ. ವಿ ಪ್ರೌಢಶಾಲೆಯ ಮುಖ್ಯ ಗುರುಗಳುಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜ್ಞಾನ ಗುರು ವಿದ್ಯಾಪೀಠದ ಕಾರ್ಯದರ್ಶಿಗಳಾದ ಶ್ರೀಯುತ ಎಂ.ಎಂ.ಜೆ ಹರ್ಷವರ್ಧನ್, ಕೆ. ಎಂ. ಶಶಿಧರ ಸ್ವಾಮಿ ಕೆಎಂಎಸ್ ಸಂಸ್ಥೆಯ ನಿರ್ಮಾಪಕರು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಬೊಮ್ಮಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಶ್ರೀಯುತ ಬೂದಿ ಶಿವಕುಮಾರ್, ಬಳ್ಳಾರಿಯ ಕೇರಂ ಕ್ಲಬ್ಬಿನ ಸ್ನೇಹಿತರು, ಶಾಲೆಯ ಎಲ್ಲಾ ಶಿಕ್ಷಕರು ಭೋದಕೇತರು ವಿದ್ಯಾರ್ಥಿಗಳು ಹಳೆಯ ವಿದ್ಯಾರ್ಥಿಗಳು, ಶಾಲೆಯ ಸಿಬ್ಬಂದಿ ವರ್ಗ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು….

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
