ಉಕ್ರೆನ್ -ರಷ್ಯಾ ಬಿಕ್ಕಟ್ಟು ಪ್ರಧಾನಿ ನರೇಂದ್ರ ಮೋದಿಯವರ ಬಳಿ ಬೆಂಬಲ ಕೇಳಿದ ಉಕ್ರೆನ್…!!!

ರಷ್ಯಾವು ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ ಬಳಿಕ ಉಕ್ರೇನ್​​ ಸಹಾಯಕ್ಕಾಗಿ ವಿಶ್ವದ ಪ್ರಬಲ ನಾಯಕರಲ್ಲಿ ಒಬ್ಬರಾದ ಪ್ರಧಾನಿ ಮೋದಿಗೆ ಮನವಿ ಮಾಡಿದೆ.

ಪ್ರಧಾನಿ ಮೋದಿ ವಿಶ್ವದ ಅತ್ಯಂತ ಪ್ರಭಾವಿ ಹಾಗೂ ಗೌರವಾನ್ವಿತ ನಾಯಕರಲ್ಲಿ ಒಬ್ಬರಾಗಿದ್ದಾರೆ. ನೀವು ರಷ್ಯಾದ ಜೊತೆಯಲ್ಲಿ ಉತ್ತಮ ಸಂಬಂಧವನ್ನು ಹೊಂದಿದ್ದೀರಿ ಎಂದು ಭಾರತದ ಉಕ್ರೇನ್​ ರಾಯಭಾರಿ ಪೊಲಿಖಾ ಹೇಳಿದ್ದಾರೆ.

ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಾವು ಭಾರತ ಸರ್ಕಾರದಿಂದ ಹೆಚ್ಚು ಸಹಾಯವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಪೊಲಿಖಾ ಮನವಿ ಮಾಡಿದರು.

ಇದು ಮುಂಜಾನೆ 5 ಗಂಟೆಯಿಂದ ಆರಂಭವಾದ ಅಸ್ಪಷ್ಟ ಆಕ್ರಮಣವಾಗಿದೆ. ಉಕ್ರೇನ್​ನಲ್ಲಿ ಮಿಲಿಟರಿ ವಿಮಾನ ನಿಲ್ದಾಣಗಳು, ಮಿಲಿಟರಿ ಇನ್​ಸ್ಟಾಲೇಷನ್​ಗಳ ಮೇಲೆ ಬಾಂಬ್​​ ಹಾಗೂ ಕ್ಷಿಪಣಿ ದಾಳಿ ಮಾಡಲಾಗಿದೆ ಎಂದು ಪೊಲಿಖಾ ಮಾಹಿತಿ ನೀಡಿದರು.

ಕೆಲವು ದಾಳಿಗಳನ್ನು ರಾಜಧಾನಿಯ ಹೊರವಲಯದಲ್ಲಿ ನಡೆಸಲಾಗಿದೆ. ಕೆಲವು ದಾಳಿಗಳನ್ನು ಉಕ್ರೇನ್​ನ ಗಡಿ ಪ್ರದೇಶದ ಒಳಗಡೆಯೇ ನಡೆದಿದೆ. ನಮ್ಮ ಸೈನಿಕರು ಹಾಗೂ ನಾಗರಿಕರ ಸಾವು – ನೋವುಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ ಎಂದು ಹೇಳಿದರು….

ವರದಿ.ನ್ಯೂಸ್ ಬ್ಯುರೋ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend