ಎಸ್ಟಿ ಮೀಸಲಾತಿ ಹೆಚ್ಚಳ ಮಾಡದಿದ್ದರೆ ವಿಧಾನಸೌಧ ಮುತ್ತಿಗೆ – ಅರುಣಕುಮಾರ…!!!

ಎಸ್ಟಿ ಮೀಸಲಾತಿ ಹೆಚ್ಚಳ ಮಾಡದಿದ್ದರೆ ವಿಧಾನಸೌಧ ಮುತ್ತಿಗೆ – ಅರುಣಕುಮಾರ

ಸಿಂಧನೂರು ತಾಲೂಕಿನ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕೆಗೋಷ್ಠಿ ಉದ್ದೇಶಿಸಿ ಮಾತನಾಡಿದಅರುಣಕುಮಾರ್ ಯಾಪಲಪರ್ವಿ ಎಸ್ಟಿ ಮೀಸಲಾತಿ ಹೆಚ್ಚಳಕ್ಕಾಗಿ ಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರುಗಳಾದ ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಅನೇಕ ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಶ್ರೀಗಳ ನೇತೃತ್ವದಲ್ಲಿ ದಾವಣಗೆರೆ ಜಿಲ್ಲೆ ರಾಜನಹಳ್ಳಿಯಿಂದ ರಾಜಧಾನಿ ತನಕ ಬೃಹತ್ ಪಾದಯಾತ್ರೆ ನಡೆಸಲಾಯಿತು. ಆದರೂ ಸರಕಾರ ನಿರ್ಲಕ್ಷ್ಯ ವಹಿಸಿದ್ದರಿಂದ ಇದೇ ದಿನಾಂಕ 10/02/2022 ರಿಂದ ಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಏಕಾಂಗಿಯಾಗಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ಕೋವಿಡ್ ನಿಯಮಗಳನ್ನು ಪಾಲಿಸುವುದಕ್ಕಾಗಿ ವಾಲ್ಮೀಕಿ ನಾಯಕ ಸಮುದಾಯದ ಯಾರು ಸಹ ಸತ್ಯಾಗ್ರಹದಲ್ಲಿ ಭಾಗವಹಿಸಬಾರದು ಎಂದು ಗುರುಗಳು ಆದೇಶ ಮಾಡಿರುವದರಿಂದ ರಾಜ್ಯಾದ್ಯಂತ ವಾಲ್ಮೀಕಿ ನಾಯಕ ಸಮುದಾಯದ ಜನರು ಗುರುಗಳ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಗುರುಗಳು ಆದೇಶ ನೀಡಿದರೆ ಲಕ್ಷಾಂತರ ಜನ ವಾಲ್ಮೀಕಿ ನಾಯಕ ಸಮುದಾಯದವರು ಬೆಂಗಳೂರಿಗೆ ತೆರಳಿ ವಿಧಾನಸೌಧ ಮುತ್ತಿಗೆ ಹಾಕುತ್ತೇವೆ.

ಎಸ್.ಟಿ ಮೀಸಲಾತಿ ಕುರಿತು ಕಳೆದ ಅಧಿವೇಶನದ ಸಂದರ್ಭದಲ್ಲಿ ಸದನದಲ್ಲಿ ಕೇವಲ ಕಂಪ್ಲಿ ಶಾಸಕರಾದ ಗಣೇಶ ಮತ್ತು ರಾಯಚೂರು ಗ್ರಾಮೀಣ ಕ್ಷೇತ್ರ ಶಾಸಕರಾದ ಬಸನಗೌಡ ದದ್ದಲ, ಸುರುಪುರದ ಶಾಸಕರಾದ ರಾಜುಗೌಡ ಮತ್ತು ಮಾನವಿ ಕ್ಷೇತ್ರದ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಧ್ವನಿ ಎತ್ತಿದಾಗ ಸದನದಲ್ಲಿ ಅವರಿಗೆ ಮಾತನಾಡಲು ಅವಕಾಶ ನೀಡದೆ ವಿಷಯವನ್ನು ಡೈವರ್ಟ್ ಮಾಡಲಾಯಿತು. ಮತ್ತು ಉಳಿದ ಮೀಸಲು ಕ್ಷೇತ್ರದ ಶಾಸಕರು ಧ್ವನಿ ಎತ್ತದೆ ಇರುವುದು ಸಮುದಾಯದ ಅಸಮಧಾನಕ್ಕೆ ಕಾರಣವಾಗಿದೆ. ಇದೇ 14ರಂದು ಪ್ರಾರಂಭವಾಗುವ ಅಧಿವೇಶನದಲ್ಲಿ ಎಲ್ಲಾ ಮೀಸಲು ಕ್ಷೇತ್ರದ ಶಾಸಕರು ಎಸ್.ಟಿ ಮೀಸಲಾತಿ ಹೆಚ್ಚಳ ಕುರಿತು ಧ್ವನಿ ಎತ್ತಬೇಕು ಇಲ್ಲವಾದರೆ ನಿಮ್ಮ(ಶಾಸಕರ) ಮನೆಗಳ ಮುಂದೆ ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ. ಒಟ್ಟಾರೆ ಈ ಅಧಿವೇಶನದಲ್ಲಿ ತಿರ್ಮಾನವಾಗಬೇಕು ಎಂಬುದು ಸಮುದಾಯದ ಆಗ್ರಹವಾಗಿದೆ ಎಂದರು.

ಕಳೆದ ಸರ್ಕಾರದ ಅವಧಿಯಲ್ಲಿ ಎಸ್.ಟಿ ಸಮುದಾಯವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಕ್ಕಾಗಿ ಸಮಾಜದವರು ಯಾದಗಿರಿಯಲ್ಲಿ ಆಗಿನ ಸಿಎಂ ಸಿದ್ದರಾಮಯ್ಯನವರಿಗೆ ಕಪ್ಪು ಭಾವುಟ ಮೂಲಕ ಬಿಸಿ ಮುಟ್ಟಸಲಾಗಿತ್ತು. ಎಸ್.ಟಿ ಮೀಸಲಾತಿ ಬಗ್ಗೆ ತಪ್ಪು ಹೇಳಿಕೆ ನೀಡಿದ್ದಕ್ಕಾಗಿ ಬೆಂಗಳೂರಿನ ಬನ್ನಪ್ಪ ಪಾರ್ಕನಲ್ಲಿ ಬೃಹತ ಪ್ರತಿಭಟನೆ ಮೂಲಕ ವಿರೋಧ ವ್ಯಕ್ತಪಡಿಸಲಾಯಿತು. ನಂತರ ಕಲಬುರ್ಗಿಯಲ್ಲಿ ಪ್ರತಿಭಟನೆ ನಡೆಸಲಾಯಿತು.ನಂತರ ಶ್ರೀಗಳ ನೇತೃತ್ವದಲ್ಲಿ ಬೆಂಗಳೂರಿನತನಕ ಪಾದಯಾತ್ರೆ ನಡೆಸಲಾಗಿದೆ. ಆದರೂ ಸರಕಾರ ನಿರ್ಲಕ್ಷ್ಯ ವಹಿಸಿದೆ.ಶ್ರೀರಾಮುಲು, ರಾಜುಗೌಡ, ಶಿವನಗೌಡ ನಾಯಕರ ನೇತೃತ್ವದಲ್ಲಿ ಲಿಂಗಸೂಗುರುನಲ್ಲಿ ಬಿಜೆಪಿ ಎಸ್.ಟಿ ಸಮಾವೇಶ ಮಾಡಿದಾಗ ಬಿಜೆಪಿ ಅಧಿಕಾರಕ್ಕೆ ಬಂದರೆ ಕೇವಲ 24ಗಂಟೆಯಲ್ಲಿ ಎಸ್.ಟಿ ಮೀಸಲಾತಿಯನ್ನು ಕೇಂದ್ರದ ಮಾದರಿಯಂತೆ 7.5% ಮಾಡುತ್ತೇವೆ ಮತ್ತು ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡುತ್ತೇವೆ ಎಂದು ಯಡಿಯುರಪ್ಪನವರು ಮಾತು ನೀಡಿದಾಕ್ಕಾಗಿ ಚುನಾವಣೆಯಲ್ಲಿ ಎಸ್. ಟಿ ಸಮಾಜ ಸಂಪೂರ್ಣವಾಗಿ ಬಿಜೆಪಿಗೆ ಬೆಂಬಲಿಸಿತು.

ಸರ್ಕಾರ ತನ್ನ ಅಧಿಕಾರವಧಿ ಮುಗಿಯುತ್ತಾ ಬಂದರು ಸಹ ಮೀಸಲಾತಿ ಹೆಚ್ಚಳದ ಕುರಿತು ಸ್ಪಷ್ಟ ನಿಲುವನ್ನುತೋರಿಸುತ್ತಿಲ್ಲ. ನ್ಯಾಯಮೂರ್ತಿನಾಗಮೋಹನದಾಸರವರು ವರದಿ ನೀಡಿದರು, ಸಹ ಉಪಸಮಿತಿ ರಚಿಸಿ ಅದರಿಂದ ಮತ್ತೆ ಸುಭಾಷ ಅಡಿ ಅವರ ಸಮಿತಿಗೆ ಶಿಫಾರಸ್ಸು ಮಾಡಿರುವುದು ಖಂಡನೀಯ. ಕೂಡಲೇ ಸರಕಾರ ಎಸ್‌.ಟಿ ಮೀಸಲಾತಿ ಹೆಚ್ಚಳದ ವಿಷಯದಲ್ಲಿ ತನ್ನ ನಿಲುವನ್ನು ಪ್ರಕಟಿಸದಿದ್ದರೆ ವಿದಾನಸೌಧ ಮುತ್ತಿಗೆ ಹಾಕಬೇಕಾಗುತ್ತದೆ. ಇದೇ ಫೆಬ್ರವರಿ 14 ರಿಂದ ನಡೆಸುವ ಅಧಿವೇಶನದಲ್ಲಿ ಎಸ್‌ಟಿ ಮೀಸಲಾತಿ ಕ್ಷೇತ್ರದ ಶಾಸಕರು ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು

ಈ ಸಂದರ್ಭದಲ್ಲಿ ಅರುಣಕುಮಾರ ನಾಯಕ ಹೈದರಾಬಾದ್ ಕರ್ನಾಟಕ ವಾಲ್ಮೀಕಿ ಸಂಘ ರಾಯಚೂರ ಜಿಲ್ಲಾ ಉಪಾಧ್ಯಕ್ಷರು, ಮಲ್ಲಯ್ಯ ಮ್ಯಾಕಲ್ ಗೊನವಾರ, ಅಮರೇಶ್ ನಾಯಕ ಜೀನೂರ್,ಮಲ್ಲೇಶ್ ನಾಯಕ ಬೂದಿಹಾಳ್, ಕುಪೇಂದ್ರ ನಾಯಕ ವಾ. ನಾ.ಸಂಘ.ಜಿಲ್ಲಾ ಉಪಾಧ್ಯಕ್ಷರು ಉಪಸ್ಥಿತರಿದ್ದರು….

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend