ರೌಡಕುಂದಾ ಶಿಲಾಮಂಟಪ ಉದ್ಘಾಟನೆ,ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವ.
ಸಿಂಧನೂರು : ತಾಲೂಕಿನ ರೌಡಕುಂದಾ ಗ್ರಾಮದಲ್ಲಿನ ರೌಡಕುಂದಿ ಸಂಸ್ಥಾನ ಹಿರೇಮಠದ ನೂತನ ಬೃಹತ್ ಶಿಲಾ ಮಂಟಪದ ಉದ್ಘಾಟನೆ ಹಾಗೂ ಶಿವಯೋಗಿ ಮರಿದೇವರು ಪಟ್ಟಾಧಿಕಾರ ಮಹೋತ್ಸವ ಹಾಗೂ ಧರ್ಮಸಭೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯವನ್ನುಉಜ್ಜಯಿನಿ ಸದ್ದರ್ಮ ಸಿಂಹಾಸನಾಧಿಶ್ವರ ಶ್ರೀ 1008 ಜಗದ್ಗುರು ಅಭಿನವ ಸಿದ್ಧಲಿಂಗ ರಾಜ ದೇಶಿ ಕೇಂದ್ರ ಶಿವಾಚಾರ್ಯಮಹಾಭಗವತ್ಪಾದರು ” ಮಡಿಕೆ ಮಾಡುವಡೆ ಮಣ್ಣೆ ಮೊದಲು ,ತೊಡವ ಮಾಡುವಡೆ ಹೊನ್ನೆ ಮೊದಲು ಶಿವ ಮಾಡುವಡೆ ಗುರುವೆ ಮೊದಲು ” ಎಂದು ಜಗದ್ಗುರು ಬಸವಣ್ಣನವರು ಹೇಳಿರುವುದು ಅಕ್ಷರಶಃ ನಿಜ ‘ಅಂಗ ಗುಣಗಳನ್ನು ಕಳೆದು ಲಿಂಗ ಗುಣಗಳನ್ನು ತುಂಬುವವನು ಗುರು ಎಂದರು. ತಾಯಿಗೆ ಮಹಾರಾಷ್ಟ್ರದಲ್ಲಿ ಗುರುಮಾವಳಿ ಎನ್ನುವರು ಮಾವಳಿ ಎಂದರೆ ತಾಯಿ ಎಂದರ್ಥ ಎಂದರು. ಕಬೀರ ದಾಸರಿಗೆ ಗುರು ಮತ್ತು ದೇವರು ಇವರಲ್ಲಿ ಯಾರು ಹೆಚ್ಚು ಎಂದಾಗ ಗುರು ಹೆಚ್ಚು ಎಂದರು. ದೇವರು ಎಲ್ಲಿದ್ದಾನೆ ? ಹೇಗೆ ಇದ್ದಾನೆ ? ಎಂದು ತಿಳಿಸುವವನು ‘ಗುರು ‘ಎಂದು ಭಕ್ತಿಯ ಜ್ನಾನದ ನುಡಿಗಳನ್ನು ಜನರಿಗೆ ತುಂಬುವ ಮೂಲಕ ಆಶಿರ್ವಚನ ಮಾಡಿದರು.
ರೌಡಕುಂದಾ ಶ್ರೀ ಮಠದಲ್ಲಿ ಅಭ್ಯಾಸ ಮಾಡಿದವರಲ್ಲಿ ನಾನು ಒಬ್ಬ ನನ್ನೆಲ್ಲಾ ಗುರುಗಳ ಪಾದವೃಂದಗಳಿಗೆ ಪಡಮಟ್ಟು ಅವರು ಹಾಕಿದ ಹೆಜ್ಜೆ ಗುರುತುಗಳನ್ನುನೋಡಿಕೊಂಡು ಅವರ ದಾರಿಯಲ್ಲಿ ನಡೆಯುತ್ತೆನೆಂದು ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಆಶಿರ್ವಚನ ನೀಡಿದರು.
ಪಟ್ಟದಾರ್ಯರ ಪರಂಪರೆಯ ರೌಡಕುಂದಿ ಹಿರೇಮಠ ವಂಶದಲ್ಲಿ ಜನಸಿದವರೇ ಶ್ರೀ ಶಿವಯೋಗಿ ಮರಿದೇವರು. ತಂದೆವೇ,ಮೂ//ಜಗದೇವಯ್ಯ ಸ್ವಾಮಿ ತಾಯಿ ಶ್ರೀಮತಿ ಸರಸ್ವತಿ ಮಾತೆಯ ಗರ್ಭಾವಧಿಯಲ್ಲಿ ಜೇಷ್ಠ ಪುತ್ರರಾಗಿ ಜ್ಞಾನ ಬೆಳಗುವ ಯೋಗಿಯಾಗಿ ಜನ್ಮ ತಾಳಿದರು. ಶಿವಯೋಗಿ ಎಂಬ ನಾಮದಿಂದ ಬೆಳೆದ ಮರಿದೇವರು ಹುಟ್ಟಿನಿಂದಲೂ ಗುರುಸೇವೆಯಲ್ಲಿ ಆಶಕ್ತಿ ಹೊಂದಿದವರಾಗಿದ್ದರು. ತೊಟ್ಟಿಲಲೇ ಶಿವಯೋಗಿ ಯಾದ ಮಗು.ಶಿವಯೋಗದ ಸಿದ್ಧಿ ಅವರ ತ್ಯಾಗ ಭಾವಕ್ಕೆ ಒಲಿದ ಈ ಯೋಗಿಯನ್ನು ಶ್ರೀ ಮಠವೇ ಇವರನ್ನ ಆಯ್ಕೆ ಮಾಡಿಕೊಂಡಿತು. ಉತ್ತರ ಕರ್ನಾಟಕದ ಕಾಶೀ ರೌಡಕುಂದ ಸಂಸ್ಥಾನ ಹಿರೇಮಠ ಈ ಮಣ್ಣಲ್ಲಿ ಸರ್ವವಿದ್ಯೆಗಳ ಸಾರವಿದೆ ಎಂಬ ನುಡಿಯನ್ನು ಕಾಶೀ ಮಹಾ ಸನ್ನಿಧಾನ ಶ್ರೀಮಠದ ವೇದಿಕೆಯಲ್ಲಿ ನುಡಿದಂತೆ ಮರಿದೇವರು ಶ್ರೀಮಠದ ಗುರುಗಳ ಸೇವೆ ಮಾಡುತ್ತಾ ಮತ್ತು ವಿದ್ಯಾಭ್ಯಾಸದ ಜೊತೆಗೆ ಪೂಜ್ಯರ ಅಂತ್ಯಕಾಲದಲ್ಲಿ ಪೂಜಾ ಕೊಠಡಿಯ ಪರಿಪೂರ್ಣ ಸೇವೆಯನ್ನು ಮಾಡುತ್ತಾ ಗುರುಕೃಪೆಗೆ ಪಾತ್ರರಾದರು. ಪೂಜ್ಯರ ಮರಿ ದೇವರನ್ನು ಸ್ವಾಮಿ ಸ್ವಾಮಿ ಎಂದು ಕರೆಯುತ್ತಿದ್ದರು. ಅಂತಹ ಗುರುವಾಣಿ ಇಂದು ನಮ್ಮ ಮುಂದೆ ಬಾಲಲೀಲಾ ಮೂರ್ತಿಯಾಗಿ ಮಠದ ಮರಿದೇವರಾಗಿ ಅಲಂಕೃತರಾದರು. ಗುರುದೇವರು ಸ್ವಗ್ರಾಮದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಪೂರ್ಣಗೈದು ನಂತರ ಸುಕ್ಷೇತ್ರ ಯಡಿಯೂರು ಸಿದ್ದಲಿಂಗೇಶ್ವರ ಗುರುಕುಲದಲ್ಲಿ ವೇದ, ಸಂಸ್ಕೃತ, ಜ್ಯೋತಿಷ್ಯ ಅಭ್ಯಾಸ ಮಾಡುತ್ತಿದ್ದಾರೆ. ಮಹಾಸ್ವಾಮಿಗಳು ಎಂದು ಅಭಿಧಾನ ಹೊತ್ತು ಶ್ರೀಮಠ ಧರ್ಮಧಿಕಾರದ ಪೀಠವನ್ನು ಅಲಂಕರಿಸಿದರು
ಶ್ರೀ ಮಠದಲ್ಲಿ ನಾಲ್ಕೈದು ದಿನಗಳ ಕಾಲ ಪೂಜೆ, ಹೋಮ ,ಲಿಂಗೈಕ್ಯ ಪರಮ ಪೂಜ್ಯರ ಅಮೃತ ಶಿಲಾ ಮೂರ್ತಿಗಳ ಪ್ರತಿಷ್ಟಾಪನೆ , ನೂತನ ಗೋಪುರ ಕಳಸಾರೋಹಣ , ಮುರುಗೇಶ್ವರಿಗೆ ಹುಡಿ ತುಂಬುವ ಕಾರ್ಯಕ್ರಮ, ಜಂಗಮ ವಟುಗಳಿಗೆ ಅಯಾಚಾರ ದೀಕ್ಷಾ,ಅಡ್ಡ ಪಲ್ಲಕ್ಕಿ ,ಶ್ರೀ ಮಠದ ನಿಯೋಜಿತ ಉತ್ತರಾಧಿಕಾರಿಗಳಿಗೆ ಶ್ರೀ ಗುರು ಪಟ್ಟಾಧಿಕಾರ ದೀಕ್ಷಾ ಮಹೋತ್ಸವ ವಿವಿಧ ರೀತಿಯ ಕಾರ್ಯಕ್ರಮಗಳನ್ನು ವಿವಿಧ ಮಠಗಳ ಜಗದ್ಗುರು ಗಳ ಸಾನಿದ್ಯ ದಲ್ಲಿ ಧರ್ಮ ಸಭೆ ಜರುಗಿವೆ ಈ ಶಿಲಾ ಮಂಟಪ ನಿರ್ಮಾಣ ಕ್ಕೆ ಹಲವಾರು ದಾನಿಗಳು ಸಹಾಯಧನ ಮಾಡಿರುವುದು ತುಂಬಾ ಮೆಚ್ಚುಗೆ ಪಡುವಂತಹದ್ದಾಗಿದೆ ಶುಕ್ರವಾರ ಕೊನೆಯ ದಿನದ ಧರ್ಮ ಸಭೆಯಲ್ಲಿ ವನಸರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪುರ, ಪತ್ರಕರ್ತರಾದ ಪಂಪಾಪತಿ ಬಿ ಹೂವಿನಬಾವಿ, ನಾಗರಾಜ ಬೊಮ್ಮನಾಳ, ಹನುಮಂತ ಗೋಡಿಹಾಳ , ವಿರೇಶ ಹೊಸಳ್ಳಿ, ವೆಂಕೋಬ ಭೂತಲದಿನ್ನಿ, ದುಗ್ಗಪ್ಪ ಮಲ್ಲಾಪುರ, ಶಿವರಾಜ ಗೋರೆಬಾಳರಿಗೆ ಸನ್ಮಾನಿಸಿ , ನೆನಪಿನ ಕಾಣಿಕೆಗಳನ್ನು ನೀಡಿದರು. ಈ ರೀತಿಯಾಗಿ ಕಾರ್ಯಕ್ರಮಗಳು ನಡೆದು ಕೊನೆಗೆ ಮಹಾಮಂಗಲ ವಾಡಿದರು. ಸುತ್ತಮುತ್ತಲಿನ ಗ್ರಾಮದ ಭಕ್ತರು ಮಹಾ ಪ್ರಸಾದ ಸವಿದು ಗುರುಗಳ ಪ್ರೀತಿಗೆ ಪಾತ್ರರಾದರು.
ಈ ಕಾರ್ಯಕ್ರಮದಲ್ಲಿ ವೆಂಕಟಗಿರಿ ಕ್ಯಾಂಪ್ ನ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು,ತುರವಿಹಾಳ ಅಮರಗುಂಡಯ್ಯ ಸ್ವಾಮಿಗಳು, ವಿಶ್ವರಾಧ್ಯ ಕರಿಸಿದ್ದೇಶ್ವರ ಶಿವಾಚಾರ್ಯಮಹಾಸ್ವಾಮಿಗಳು ಬುಕ್ಕಸಾಗರ, ಶ್ರೀ ಗಜದಂಡ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ದೇವರಭೂಪುರ, ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮಿಗಳು ಕರಿಬಸವ ನಗರ ಸಿಂಧನೂರರು, ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಶಾನವಾಸಪುರ, ಶ್ರೀ ವರರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಗಚ್ಚಿನಮಠ ಮಸ್ಕಿ, ಶ್ರೀ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮಿಗಳು ಸುಲ್ತಾನಪುರ, ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಸಂತೆಕಲ್ಲೂರು, ನಾಮ ಬಸಯ್ಯ ತಾತನವರು ನಾಗರಳ, ಶ್ರೀ ಶಿವಲಿಂಗಯ್ಯ ತಾತನವರು ಹಂಚಿನಾಳ ಕ್ಯಾಂಪ್, ಶ್ರೀ ಶಿವಪ್ರಕಾಶ ಶರಣರು ಹೆಬ್ಬಾಳ, ಮಲ್ಲಯ್ಯ ತಾತನವರು ಗೊಬ್ಬರಕಲ್ಲು
ವೇದಿಕೆಯಲ್ಲಿ ದಿವ್ಯ ಸಾನಿದ್ಯ ವಹಿಸಿಕೊಂಡಿದ್ದರು. ದೇವಸ್ಥಾನದ ಸಮಿತಿ ಯವರು, ಮುಖಂಡರು ,ಊರಿನ ಹಿರಿಯರು ಸೇರಿದಂತೆ ಹಲವಾರು ಭಕ್ತರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
