ಹರಪನಹಳ್ಳಿಯ ಉಪಾ ತಹಶೀಲ್ದಾರ್ ಎಸ್ ಚಂದ್ರಶೇಖರ್ ಅಮಾನತು…../
ಹರಪನಹಳ್ಳಿ ತಾಲೂಕಿನ ಚಿಗಟೇರಿ ಹೋಬಳಿಯ ಉಪಾ ತಹಶೀಲ್ದಾರ್ ಎಸ್.ಚಂದ್ರಶೇಕರ್ ಅವರನ್ನು ಅಮಾನತು ಮಾಡಲಾಗಿದೆ.
ಈ ಹಿಂದೆ ಹರಪನಹಳ್ಳಿ ಕಂದಾಯ ನಿರೀಕ್ಷಕರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಹರಪನಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೇ ನಂಬರ್ 427/1,427/2,428/3,429/1,429/2,430/1,430/2,ಜಮೀನುಗಳನ್ನು ಮೂಲ ಮಂಜೂರಾತಿದರರು ಮರಣದ ನಂತರ ಅವರು ವಸುದರಲ್ಲದ ಅಂದಿನ ಹರಪನಹಳ್ಳಿ ಪುರಸಭೆ ಅಧಯಕ್ಷರಾಗಿದ್ದ ಹೆಚ್. ಕೆ. ಹಾಲೇಶ್ ಅವರ ಹೆಸರಿಗೆ ತಪ್ಪು ವಂಶೃಕ್ಷ ಆದಾರದ ಮೇಲೆ ಭೂಮಿಯ ಹಕ್ಕು ಬದಲಾವಣೆ ಆದೇಶ ಹೊರಡಿಸಿರುವ ಆರೋಪದ ಹಿನ್ನಲೆಯಲ್ಲಿ ಕರ್ನಾಟಕ ಲೋಕಾಯಕ್ತ ಸಂಸ್ಥೆಯಲ್ಲಿ ದೂರು ನೀಡಲಾಗಿತ್ತು.
ಜಿಲ್ಲಾಧಿಕಾರಿ ದೋಷಾರುಪ ಪಟ್ಟಿಯಲ್ಲಿನ ದಾಖಲೆಗಳನ್ನು ಪಿಶೀಲಿಸಿದ ಪ್ರಾದೇಶಿಕ ಆಯುಕ್ತರು ಮೇಲ್ಕಂಡ ಜಮೀನುಗಳ ಖಾತೆ ಬಲಾವಣೆ ಪ್ರಕ್ರಿಯೆಯಲ್ಲಿ ಮೂಲ ಪಟ್ಟಿದಾರರ ವಂಶವೃಕ್ಷ ವ್ಯೇಕ್ತರಿಕ್ತವಾಗಿರುವುದನ್ನು ಪರಿಶೀಲಿಸಿ ಸದರಿ ಜಮೀನುಗಳವಂಶಸ್ಥರಲ್ಲದವರ ಹೆಸರಿಗೆ ಎಮ್, ಆರ್, ಹೆಚ್, ನಂಬರ್ 141/12-13 ಮೇ 25 2013 ರಂದು ಹಕ್ಕು ಬದಲಾವಣೆ ಮಾಡಿರುತ್ತಾರೆ. ಮೂಲ ಪಟ್ಟದಾರರ ವಂಶಸ್ಥ ರಲ್ಲದ ಅರ್ಜಿದಾರರು ನೀಡಿದ ಛಪಕಾಗದ ಮೇಲೆ ನೀಡಿದ ಮಾಹಿತಿ ಆದಾರದ ಮೇಲೆ ವಂಶೃಕ್ಷ ನೀಡಿರುವುದು ಕರ್ತವ್ಯ ಲೋಪ ಕಂಡುಬಂದಿದ್ದು. ಬೂಕಂದಾಯ ಹಾಗೂ ನಿಯಮಗಳನ್ನು ಸ್ಪಷ್ಟವಾಗಿ ಉಲಂಘನೆ ಆಗಿರುವುದು ಬಲವಾದ ಆರೋಪ ಮೇಲ್ನೋಟಕ್ಕೆ ಕಂಡುಬರುವುದರಿಂದ ಉಪತಾಹಶೀಲ್ದರ್ ಎಸ್.ಚಂದ್ರಶೇಕರ್ ಅವರ ವಿರುದ್ಧ ವಿಚಾರಣೆ ಕಾಯ್ದಿರಿಸಿ ಪ್ರಾದೇಶಿಕ ಆಯುಕ್ತರಾದ ಡಾ. ಎ. ಎನ್. ಮೂರ್ತಿ ಅವರು ಅಮಾನತು ಆದೇಶ ಹೊರಡಿಸಿರುತ್ತರೆ….

ವರದಿ.ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
