ಹಿರೇಕುಂಬಳಗುಂಟೆ ಯ ಸಹಿಪ್ರಾ ಶಾಲೆಯಲ್ಲಿ 5ನೇ ತರಗತಿ ಮಕ್ಕಳಿಂದ ಸೌರಮಂಡಲದ ಗ್ರಹಗಳ ಪ್ರಾಯೋಗಿಕ ಪಾಠ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಹಿರೇಕುಂಬಳಗುಂಟೆ ಯ ಸಹಿಪ್ರಾ ಶಾಲೆಯಲ್ಲಿ 5ನೇ ತರಗತಿ ಮಕ್ಕಳಿಂದ ಪ್ರಾಯೋಗಿಕವಾಗಿ ಸೌರಮಂಡಲದಲ್ಲಿರುವ ಗ್ರಹಗಳ ಪರಿಚಯ ಹಾಗೂ ಅವುಗಳ ಪಥ ಚಲನೆಯಿಂದ ಉಂಟಾಗುವ ಬದಲಾವಣೆಗಳ ಬಗ್ಗೆ ಮಕ್ಕಳು ತಿಳಿಯಪಡಿಸಿದರು. ಪ್ರಾಯೋಗಿಕವಾಗಿ ಪಾಠ ನಿರ್ವಹಣೆ ಮಾಡಿದ ಶ್ರೀಮತಿ ಶಾರದಾ ಶಿಕ್ಷಕಿಯವರು ಈ ಕಲಿಕೆಯಿಂದ ಮಕ್ಕಳ ಕಲಿಕೆ ಶಾಶ್ವತವಾಗಿ ಗಟ್ಟಿಕೊಳ್ಳುವುದರಲ್ಲಿ ಸಂಶಯವಿಲ್ಲ. ಮಕ್ಕಳ ಮನೋಧೈರ್ಯ ಕಲಿಕೆಯ ಆಸಕ್ತಿ ಹೆಚ್ಚಿಸುವುದು ಎಲ್ಲರೂ ಸಕ್ರಿಯವಾಗಿ ಭಾಗವಹಿಸುವ ಇಂತಹ ಪ್ರಯತ್ನಗಳು ನಮ್ಮ ಶಾಲೆಗಳಲ್ಲಿ ನಡೆಯುತ್ತಿದ್ದರೆ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದರು. ಶಾಲಾ ಸಿಬ್ಬಂದಿ ಅವರ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯಗುರುಗಳಾದ ಶಾಮಸುಂದರ್ ಸಪಾರಿ ಅವರು ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಶೈಕ್ಷಣಿಕವಾಗಿ ಮಕ್ಕಳ ಪ್ರಗತಿಗೆ ಶ್ರಮಿಸುವ ಅನೇಕ ಶಾಲೆಗಳು ನಮ್ಮ ತಾಲ್ಲೂಕಿನಲ್ಲಿ ವೆ ಎಂಬುದು ಹೆಮ್ಮೆಯ ವಿಚಾರವಾಗಿದೆ. ಎಂದು ಈ ಸಂದರ್ಭದಲ್ಲಿ ಹೇಳಿದರು. ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿ ಶಿಕ್ಷಕ ವರ್ಗ ಹಾಗೂ ಶಾಲೆ ಮಕ್ಕಳು ಉಪಸ್ಥಿತರಿದ್ದರು…

ವರದಿ ಡಿಎಂ ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend