ವಿಜಯನಗರ ಜಿಲ್ಲಾ ಹೂವಿನಹಡಗಲಿ ತಾಲೂಕಿನ ಇಟ್ಟಿಗಿ ಗ್ರಾಮ ಪಂಚಾಯತಿವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರ್ಮಿಕರಿಗೆ ಕೆಲಸ ನೀಡಿದ ಸ್ಥಳದಲ್ಲಿ ಪ್ರತಿ ಗುರುವಾರದಂದು ಹಮ್ಮಿಕೊಳ್ಳುವ ರೋಜ್ ಗಾರ್ ದಿನಾಚರಣೆ ಯನ್ನು ದಿನಾಂಕ 10/02/2022 ರಂದು ಇಟ್ಟಿಗಿ ಗ್ರಾಮದ ಹೊಸಪೇಟೆ ರಸ್ತೆ ಕೆರೆಯ ದಕ್ಷಿಣ ಭಾಗದ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಆಚರಿಸಲಾಯಿತು. ಈ ಒಂದು ಕಾರ್ಯಕ್ರಮದ ಸಭೆಯ ಅಧ್ಯಕ್ಷತೆಯನ್ನು ಕುಳಿಕಾರ್ಮಿಕರು ಹಾಗೂ ಮೇಟಿಯಾದ ಶ್ರೀ ಕೆ ಚಂದ್ರಪ್ಪ ಇವರು ವಹಿಸಿದ್ದರು.ಉದ್ಯೋಗ ಖಾತ್ರಿ ಯೋಜನೆಯ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಯ ಪ್ರತೀಕವಾಗಿ ಕೂಲಿ ಕಾರ್ಮಿಕರಿಗೆ NMMS ಹಾಜರಾತಿಯನ್ನು ಸರ್ಕಾರವು ತಂದಿರುವುದರಿಂದ ಕೂಲಿ ಕಾರ್ಮಿರೆಲ್ಲರೂ ಸಹಕರಿಸುವಂತೆಯೂ ಅಂದರೆ ಬೆಳಿಗ್ಗೆ 8ರಿಂದ 11 ಹಾಗೂ ಮಧ್ಯಾಹ್ನ 2ರಿಂದ 5 ರವರೆಗಿನ ಅವಧಿಯಲ್ಲಿ ಆನ್ಲೈನ್ ಹಾಜರಾತಿಯನ್ನು ಹಾಕಲಾಗುವುದು ತಪ್ಪದೇ ಈ ಒಂದು ಪದ್ಧತಿಗೆ ಬದ್ಧರಾಗಿ ಸರಿಯಾದ ನಿಗದಿತ ಅವಧಿಯಲ್ಲಿ ಹಾಜರಾತಿ ಹಾಕಿಸಿ ಹಾಕಿಸುವಲ್ಲಿ ಸಹಾಯ ಸಹಕಾರ ನೀಡಬೇಕೆಂದು, ದಿನ ದ ಕೂಲಿಮೊತ್ತ ರೂ 289/- ಜೊತೆಗೆ 10/- ರೂ ಯ ಶಾರ್ಪ್ನಿಂಗ್ ಚಾರ್ಜಸ್ ನ್ನು ಕೊಟ್ಟಿರುವ ಅಳತೆಯಂತೆ ಮಾಡಿ ಪಡೆಯುವಂತೆ ಗ್ರಾ ಪಂ ಪಿಡಿಒ ಉಮೇಶ್ ಸರ್,ಕ್ಲ ಕಂ ಡಿ ಇ ಓ ಪ್ರಕಾಶ್ ರವರು,ಬಿಎಫ್ ಟಿ ರೇಣುಕೇಶರವರು ಮಾತನಾಡಿದರು.ಕಾಯಕ ಮಿತ್ರರಾದ ಶ್ರೀಮತಿ ಶಾಂತಮ್ಮ & ಕೂಲಿಕಾರ್ಮಿಕರು ಪಾಲ್ಗೊಂಡಿದ್ದರು..

ವರದಿ ಪ್ರಕಾಶ್ ಆಚಾರ್ ಎ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
