ಮಹಾನಗರ ಪಾಲಿಕೆಯು ಬಯಲು ಶೌಚಮುಕ್ತ
ಸ್ವಯಂ ಘೋಷಣೆ: ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನ
ಕಲಬುರಗಿ:.-ಕಲಬುರಗಿ ಮಹಾನಗರ ಪಾಲಿಕೆಗೆ ಕಳೆದ ವರ್ಷ “ಬಯಲು ಶೌಚಮುಕ್ತ (ODF) ಎಂದು ಪ್ರಮಾಣ ಪತ್ರ ದೊರೆಕಿರುತ್ತದೆ. ನಂತರ ಈ ವರ್ಷ ಮಹಾನಗರ ಪಾಲಿಕೆಯು “ಬಯಲು ಶೌಚಮುಕ್ತ (ODF) ಎಂದು ಸ್ವಯಂ ಘೋಷಿಸಿದ್ದು, ಈ ಕುರಿತು ಸಾರ್ವಜನಿಕರಿಂದ ಯಾವುದಾದರೂ ಆಕ್ಷೇಪಣೆಗಳೇನಾದರೂ ಇದ್ದಲ್ಲಿ 15 ದಿನದೊಳಗಾಗಿ (2022ರ ಫೆಬ್ರವರಿ 15ರೊಳಗಾಗಿ) ಕಲಬುರಗಿ ಮಹಾನಗರ ಪಾಲಿಕೆಗೆ ಸಲ್ಲಿಸಬೇಕೆಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ಈ ಕೊನೆಯ ದಿನಾಂಕದ ನಂತರ ಬಂದ ಬಂದ ಆಕ್ಷೇಪಣೆ/ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಕಲಬುರಗಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಈ ಮೊದಲು ಸಾರ್ವಜನಿಕರು ಶೌಚಕ್ಕೆಂದು ಬಯಲಿನಲ್ಲಿ ಹೋಗುತ್ತಿದ್ದರು. ಆದರೆ “ಸ್ವಚ್ಛ ಭಾರತ ಮಿಷನ್” ಅಡಿಯಲ್ಲಿ ಮಹಾನಗರ ಪಾಲಿಕೆಯಿಂದ ನಗರದ ಸಾರ್ವಜನಿಕರಿಗೆ ವೈಯಕ್ತಿಕ ಶೌಚಾಲಯ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕ/ಸಮುದಾಯಿಕ ಶೌಚಾಲಯಗಳ ನಿರ್ಮಾಣದಿಂದ ಸಾರ್ವಜನಿಕರು ಬಯಲು ಶೌಚವನ್ನು ಬಿಟ್ಟು ಸದರಿ ಶೌಚಾಲಯಗಳನ್ನು ಉಪಯೋಗಿಸುತ್ತಿದ್ದಾರೆ. ಆದ್ದರಿಂದ ಕಲಬುರಗಿ ನಗರದ ಏರಿಯಾ/ವಾರ್ಡ್ಗಳ ಶಾಲಾ-ಕಾಲೇಜುಗಳ ಮುಖ್ಯಸ್ಥರು, ಸ್ವ-ಸಹಾಯ ಸಂಘಗಳು ಹಾಗೂ ಸಾರ್ವಜನಿಕರು ತಮ್ಮ-ತಮ್ಮ ವಾರ್ಡ್/ಏರಿಯಾಗಳು “ಬಯಲು ಶೌಚಮುಕ್ತ (ODF+) ಎಂದು ಘೋಷಿಸಿರುತ್ತವೆ ಎಂದು ಅವರು ತಿಳಿಸಿದ್ದಾರೆ…

ವರದಿ. ಬಸವರಾಜ್ ಹಿರೇಮಠ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
