ನೇತ್ರದಾನ ಮಾಡಲು ಮುಂದಾದ ಜಂತಲಿ ಶಿರೂರು ಗ್ರಾಮದ ಹಳ್ಳಿಕೇರಿಮಠ ದಂಪತಿಗಳು
ಮರಣಾ ನಂತರ ತಮ್ಮ ನೇತ್ರಗಳನ್ನು ದಾನ ಮಾಡಲು ನೊಂದಣಿ ಮಾಡಿಕೊಳ್ಳುವ ಮೂಲಕ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ನಾಡು ನುಡಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಖ್ಯಾತ ಜನಪದ ಕಲಾವಿದ ಶ್ರೀ ಗವಿಶಿದ್ಧಯ್ಯ ಹಾಗೂ ಅವರ ಧರ್ಮ ಪತ್ನಿ ಲೇಖಕಿ ಭಾಗ್ಯ ಶ್ರೀ ಯವರು ಮನುಕುಲದ ಒಳತಿಗಾಗಿ ನೇತ್ರದಾನಕ್ಕೆ ಮುಂದಾಗುವ ಮೂಲಕ ನೇತ್ರದಾನದ ಮಹತ್ವ ಸಾರಿದ್ಧಾರೆ.
ಕಣ್ಣುಗಳು ಪ್ರಕೃತಿ ನೀಡಿರುವ ಕೊಡುಗೆ ಅವುಗಳನ್ನು ಸೌರಂಕ್ಷಣೆ ಮಾಡುವದರೊಂದಿಗೆ ಮರಣಾನಂತರ ನೇತ್ರದಾನ ಮಾಡುವುದು ಪವಿತ್ರವಾದ ಸೇವಾ ಕಾರ್ಯ ಎಂದಿರುವ ಹಳ್ಳಿಕೇರಿಮಠ ದಂಪತಿಗಳು ಪ್ರತಿಜ್ಞಾ ಗೈಯುವ ಮೂಲಕ ನೇತ್ರದಾನದ ಅರಿವು ಮೂಡಿಸಿದ್ಧಾರೆ.
ಗದುಗಿನ ವೀರೇಶ್ವರ ಪುಣ್ಯಾಶ್ರಮದ ಸಭಾಂಗಣದಲ್ಲಿ ಗದಗ ಬೆಟಗೇರಿ ಲಯನ್ಸ ಕ್ಲಬ್ ,ವೀರೇಶ್ವರ ಪುಣ್ಯಾಶ್ರಮ ,ಎಸ. ಜಿ. ಎಮ್. ನೇತ್ರ ಬಂಡಾರ ಮತ್ತು ಸಂಶೋದನಾ ಪ್ರತಿಷ್ಠಾನ ಟ್ರಸ್ಟ್ ,ಗದಗ ಐಎಂಎ ಆಶ್ರಯದಲ್ಲಿ ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳವರ ಜಯಂತ್ಯೋತ್ಸವದ ಅಂಗವಾಗಿ ನಡೆದ ನೇತ್ರದಾನ ಅರಿವು ಹಾಗೂ ಪ್ರತಿಜ್ಞಾ ಕಾರ್ಯಕ್ರಮದಲ್ಲಿ ನೇತ್ರದಾನದ ನೊಂದಣಿ ಪತ್ರವನ್ನು ಹಳ್ಳಿಕೇರಿಮಠ ದಂಪತಿಗಳಿಗೆ ನೀಡಲಾಯಿತು.
ವೀರೇಶ್ವರ ಪುಣ್ಯಾಶ್ರಮದ ಪರಮ ಪೂಜ್ಯ ಶ್ರೀ ಕಲ್ಲಯಜ್ಜನವರು,
ಲಯನ್ಸ ಕ್ಲಬ್ ಜಿಲ್ಲಾ ಗವರ್ನರ್ ಶ್ರೀಕಾಂತ್ ಮೋರೆ,ಹುಬ್ಬಳ್ಳಿಯ ಎಂ.ಎಂ.ಜೋಷಿ ಆಸ್ಪತ್ರೆಯ ನೇತ್ರ ತಜ್ಞ ಡಾ. ಕೃಷ್ಣ ಪ್ರಸಾದ ,ಗದಗ ಬೆಟಗೇರಿ ಲಯನ್ಸ ಕ್ಲಬ್ ಅಧ್ಯಕ್ಷ ಶ್ರೀ ಶ್ರೀಧರ ಕುರಡಗಿ,ಕಾರ್ಯದರ್ಶಿ ನವಿನ ಹೀರೆಗೌಡರ ,ಗದಗ ಬೆಟಗೇರಿ ಲೇಡೀಸ್ ಕ್ಲಬ್ ಅಧ್ಯಕ್ಷೆ ಡಾ.ಸುನಿತಾ ಕುರಡಗಿ, ಕಾರ್ಯದರ್ಶಿ ಡಾ.ಅರ್ಪಿತಾ ಹಿರೇಗೌಡರ ಸೇರಿದಂತೆ ಮುಂತಾದವರು ಪಾಲ್ಗೋಂಡಿದ್ಧರು.ದಿನಾಂಕ-4-2-2022.
ಹೆಚ್ಚಿನ ಮಾಹಿತಿಗಾಗಿ-9980248730.6362270699..
ವರದಿ. ಮಹಾಲಿಂಗ ಗಗ್ಗರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
