;

ರೋಗದಿಂದ ನರಳುವ ರೋಗಿಗಳಿಗೆ ಔಷಧ ಕೊಡುವ ಬದಲು ವಿಷ ಕೊಟ್ಟಂತಾಗಿದೆ -ಡಿ.ಎಚ್.ಪೂಜಾರಿ…!!!

ರೋಗದಿಂದ ನರಳುವ ರೋಗಿಗಳಿಗೆ ಔಷಧ ಕೊಡುವ ಬದಲು ವಿಷ ಕೊಟ್ಟಂತಾಗಿದೆ -ಡಿ.ಎಚ್.ಪೂಜಾರಿ.

ಸಿಂಧನೂರು : ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಮಂಡಿಸಿದ ದೇಶ ದ್ರೋಹಿ ಬಜೆಟ್ ವಿರುದ್ಧ ಹೋರಾಡಬೇಕಾಗಿದೆ. ರೋಗದಿಂದ ನರಳುವ ರೋಗಿಗಳಿಗೆ ಔಷಧ ಕೊಡುವ ಬದಲು ವಿಷ ಕೊಟ್ಟಂತಾಗಿದೆ.39.45 ಲಕ್ಷ ಕೋಟಿ ಬಜೆಟ್ ಹುಸಿ ಘೋಷಣೆ ಅಷ್ಟೇ. ಪೆಟ್ರೋಲ್ ಡೀಸೆಲ್ ಮೇಲೆ ತೆರಿಗೆ ಹೆಚ್ಚು ಮಾಡಿದ್ದರಿಂದ ಪುನಃ ಬೆಲೆ ಹೆಚ್ಚಳವಾಗುತ್ತದೆ. ಪೆಟ್ರೋಲ್ ಡೀಸೆಲ್ ಬೆಲೆಯ ಆದರಿಸಿ ಎಲ್ಲಾ ಅಗತ್ಯವಸ್ತುಗಳ ಬೆಲೆಗಳು ಪುನಃ ಹೆಚ್ಚಳ ವಾಗುತ್ತವೆ.ಸೀಮೆಎಣ್ಣೆ ಮತ್ತು ಅಡಿಗೆ ಅನಿಲ ಸಿಲಿಂಡರ್ ಸಬ್ಸಿಡಿ ಕಡಿತ ಮಾಡಿದ್ದರಿಂದ ಬೆಲೆ ಕಡಿಮೆ ಆಗಬಹುದು ಎನ್ನುವ ನಿರೀಕ್ಷೆ ಸುಳ್ಳಾಗಿದೆ. ಮಹಾತ್ಮ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ 25 ರಷ್ಟು ಕಡಿತವಾಗಿದೆ.ಕಾರ್ಪೊರೇಟ್ ಕಂಪನಿಗಳ ತೆರಿಗೆ ಹೆಚ್ಚಳ ಮಾಡಿರುವುದಿಲ್ಲ. ಹಾಗಾಗಿ ದೇಶದ ಲೂಟಿಕೋರ ಬಹುರಾಷ್ಟ್ರೀಯ ಕಂಪನಿಗಳ ಪರ ಬಜೆಟ್ ಎನ್ನುವುದು ಮತ್ತಷ್ಟು ನಿಚ್ಚಳವಾಗಿದೆ. ಬಜೆಟ್ ಕೊರತೆ ತುಂಬಲು 14 ಲಕ್ಷ ಕೋಟಿ ಸಾಲ ಪಡೆಯುವ ತೀರ್ಮಾನ, ದೇಶದ ಸಂಪತ್ತನ್ನು ಮಾರಾಟ ಮಾಡುವುದಾಗಿದೆ. ರಕ್ಷಣೆಗೆ 5,25,166 ಲಕ್ಷ ಕೋಟಿ ಬಜೆಟ್ (ಶೇ.25 ರಷ್ಟು) ವಿದೇಶಿ ಸಾಲದ ಬಡ್ಡಿ 2.80 ಗ್ರಾಮೀಣ ಅಭಿವೃದ್ಧಿಯ ಯೋಜನೆಗಳಿಗೆ 27 ಸಾವಿರ ಕೋಟಿ ಕಡಿತಗೊಳಿಸಲಾಗಿದೆ. ಜನ ದ್ರೋಹಿ,ದೇಶ ದ್ರೋಹಿ ಬಜೆಟ್ ವಿರುದ್ಧ ಹೋರಾಡಲು ಕರ್ನಾಟಕ ರೈತ ಸಂಘ ರಾಜ್ಯಾಧ್ಯಕ್ಷ ಡಿ.ಹೆಚ್.ಪೂಜಾರ ಪತ್ರಿಕೆ ಹೇಳಿಕೆ ಮುಖಾಂತರ ಕರೆ ನೀಡಿದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;