ಚಳ್ಳಕೆರೆಯ ದೊಡ್ಡೇರಿಚಿಕ್ಕ ಕೆರೆಯನ್ನು ಧರ್ಮಸ್ಥಳ ಮಂಜುನಾಥೇಶ್ವರ ಸಂಗದಿಂದ ಅಭಿವೃದ್ಧಿಪಡಿಸಿ ಲೋಕಾರ್ಪಣೆ
ಕೆರೆಗಳು ಸಾರ್ವಜನಿಕರ ಜೀವನಾಡಿ ಯಾಗಿದ್ದು ಈ ಕೆರೆಗಳ ಸಂರಕ್ಷಣೆ ಎಲ್ಲಾ ಸಾರ್ವಜನಿಕರದ್ದಾಗಿದೆ ಎಂದು ಚಳ್ಳಕೆರೆ ತಾಸಿಲ್ದಾರ್ ಏನ್ ರಘುಮೂರ್ತಿ ಹೇಳಿದರು ಧರ್ಮಸ್ಥಳ ಕ್ಷೇತ್ರ ಅಭಿವೃದ್ಧಿ ವತಿಯಿಂದ ದೊಡ್ಡೇರಿ ಚಿಕ್ಕ ಕೆರೆಯನ್ನು ಅಭಿವೃದ್ಧಿಪಡಿಸಿ ಗ್ರಾಮಸ್ಥರಿಗೆ ಲೋಕಾರ್ಪಣೆ ಮಾಡುವ ಸಂದರ್ಭದಲ್ಲಿ ಮಾತನಾಡಿ ಜಾಗತಿಕವಾಗಿ 71 ಪರ್ಸೆಂಟ್ ಜಲ ವಿಶ್ವವನ್ನು ಆವರಿಸಿದ್ದು ಇದರಲ್ಲಿ ಕುಡಿಯಲು ಯೋಗ್ಯವಾಗಿ ಮೂರು ಪರ್ಸೆಂಟ್ ಜಲ ಲಭ್ಯವಿದೆ ಮನುಷ್ಯನ ದುರಾಸೆಯಿಂದ ಅರಣ್ಯ ಸಂಪತ್ತು ನಾಶ ಗೊಂಡಿತ್ತು ಇದರಿಂದ ನೀರು ಭೂಮಿಯಲ್ಲಿ ಇಂಗುವುದು ಕಷ್ಟಸಾಧ್ಯವಾಗಿದೆ ಓಡುವ ನೀರನ್ನು ನಡೆಯುವಾಗ ನಡೆಯುವ ನೀರನ್ನು ತೆವಳುವ ಹಾಗೆ ತೆವಳುವ ನೀರನ್ನು ಇಂಗು ವಾಗೆ ಮಾಡಿದಾಗ ಜಲ ಪೂರ್ಣವಾಗಿ ಭೂಮಿಯಲ್ಲಿ ನೀರು ಲಭ್ಯವಾಗುತ್ತದೆ ಇಲ್ಲವಾದಲ್ಲಿ ಮುಂದಿನ ಶತಮಾನದಲ್ಲಿ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳು ಮರುಭೂಮಿ ಯಾಗುವ ಸಂಶಯವನ್ನು ಬಿಬಿಸಿ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ ಆದುದರಿಂದ ಗ್ರಾಮದಲ್ಲಿ ಇರುವಂತ ಕಲ್ಯಾಣಿಗಳು ಇಂಗು ಗುಂಡಿಗಳು ಸೇರಿದಂತೆ ಜಲಮೂಲಗಳನ್ನು ಸದೃಡಗೊಳಿಸುವ ಕೆಲಸವನ್ನು ಸಾರ್ವಜನಿಕರು ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜನಜೀವನ ದುಸ್ಥಿತಿಗೆ ತಲುಪುತ್ತದೆ ಎಂದು ಹೇಳಿದರು…..
ವರದಿ.ಶಶಿಕುಮಾರ್, ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
