ಹಿರಿಯೂರು ತಾಲ್ಲೂಕು ಯರಬಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಾನ್ಯ ಶಾಸಕರಾದ ಶ್ರೀಮತಿ,ಕೆ,ಪೂರ್ಣಿಮಾಶ್ರೀನಿವಾಸ್ ರವರ ಅಧ್ಯಕ್ಷತೆಯಲ್ಲಿ ರಾ.ಹೆ,150ಎ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಸಾರ್ವಜನಿಕರು ಇದುವರೆಗೆ ನೀಡಿರುವ ಸಮಸ್ಯೆಗಳಾದ ರೈತರಿಗೆ ಸೂಕ್ತ ಪರಿಹಾರ, ಸರ್ಕಾರಿ ಶಾಲೆಗಳು ಹಾಗೂ ಕಟ್ಟಡಗಳ ತೆರವುಗೊಳಿಸುವ ವಿಚಾರವಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಭೂಸ್ವಾಧೀನ ಅಧಿಕಾರಿಗಳಾದ ಎಸಿ ಸರೋಜ ರವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶಿವಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎ.ರಮ್ಯ, ಉಪಾಧ್ಯಕ್ಷೆ ಕವಿತ ನಾಗರಾಜ್, ಸದಸ್ಯರಾದ ಸಿದ್ದಯ್ಯ, ಮಹಾಲಕ್ಷ್ಮಿ ಗೋಪಾಲ, ಶಿವಣ್ಣ, ತಿಪ್ಪೇಸ್ವಾಮಿ, ಮಂಜುನಾಥ, ಭರತ್ ಮುಖಂಡರಾದ ಗೋಪಾಲ, ಮಣಿ, ವೀರಣ್ಣ, ಪಿಡಿಒ ಬಸವರಾಜು, ಪಿಎಸ್ಐ ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು….

ವರದಿ. ಶಶಿಕುಮಾರ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
