ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು.
ಡಾ. ಬಿ. ಆರ್. ಅಂಬೇಡ್ಕರ ರವರ ಅವಮಾನ ಖಂಡಿಸಿ ಪ್ರತಿಭಟನೆ.
ಕೂಡ್ಲಿಗಿ :– ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಡಾ ಬಿಆರ್ ಅಂಬೇಡ್ಕರ್ ಸಂಘ ತಾಲೂಕ ಸಮಿತಿ ವತಿಯಿಂದ ಡಾ ಬಿಆರ್ ಅಂಬೇಡ್ಕರ್ ಅವರ ಅವಮಾನ ಖಂಡಿಸಿ ಪ್ರತಿಭಟನೆ ಮಾಡಲಾಯಿತು.
ದಿನಾಂಕ 26.1.2022 ರಂದುರಾಯಚೂರು ಜಿಲ್ಲೆಯ. ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ 73 ನೆಯ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಡಾ ಬಿಆರ್ ಅಂಬೇಡ್ಕರ್ ರವರ ಚಿತ್ರಪಟ ಮತ್ತು ಮಹಾತ್ಮ ಗಾಂಧೀಜಿ ಯವರ ಚಿತ್ರಪಟವನ್ನು ಇಡಲಾಗಿತ್ತು. ಆದರೆ ರಾಯಚೂರು ಜಿಲ್ಲೆ. ಜಿಲ್ಲಾ ನ್ಯಾಯಾಲಯದ ನ್ಯಾಯಧೀಶರಾದ ಮಲ್ಲಿಕಾರ್ಜುನ ಗೌಡರು ಕಾರ್ಯಕ್ರಮದಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ರವರ ಚಿತ್ರಪಟವನ್ನು ತೆಗೆದರೆ ಮಾತ್ರ ಕಾರ್ಯಕ್ರಮಕ್ಕೆ ಬರುತ್ತೇನೆ ಹಾಗೂ ಧ್ವಜಾರೋಹಣ ಕಾರ್ಯಕ್ರಮ ಮಾಡುತ್ತೇನೆ. ಎಂದು ಹೇಳಿ. ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್. ಹಾಗೂ ಸವಿಂದಾನದ ಹುದ್ದೆಗೆ ಅವಮಾನ ಮಾಡಿದ್ದಾರೆ ಎಂದು ತಾಲೂಕು ಅಂಬೇಡ್ಕರ್ ಸಂಘದ ವತಿಯಿಂದ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ರವರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮಾಡಲಾಯಿತು. ನಂತರ ಅಂಬೇಡ್ಕರ್ ಸಂಘದ ಅಧ್ಯಕ್ಷ ಗುಣಸಾಗರದ ಕೃಷ್ಣಪ್ಪನವರು ಮಾತನಾಡಿ.ನ ಮಲ್ಲಿಕಾರ್ಜುನ ಗೌಡರವರು ಒಬ್ಬ ನ್ಯಾಯಾಧೀಶರಾಗಿ ಕಾನೂನು ಬಲ್ಲವರು ಆಗಿ. ಸಾಮಾನ್ಯಜನರಿಗೂ ನ್ಯಾಯ ದೊರಕಿಸಿಕೊಡುವ ನ್ಯಾಯಾಲಯದ ನ್ಯಾಯಾಧೀಶರು ಇಂತಹ ನ್ಯಾಯಾಧೀಶರು ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಚಿತ್ರಪಟವನ್ನು ತೆಗೆದರೆ ಮಾತ್ರ ಧ್ವಜಾರೋಹಣ ಕಾರ್ಯಕ್ರಮವನ್ನು ಮಾಡುತ್ತೇನೆ ಎಂದು ಹೇಳಿರುವುದು ಮಹಾನ್ ವ್ಯಕ್ತಿ ಕರಡು ಸಮಿತಿ ಅಧ್ಯಕ್ಷರು. ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರಿಗೆ. ಹಾಗೂ ಸವಿಂದಾನದ ಹುದ್ದೆಗೆ ಮಾಡಿರುವ ಅವಮಾನ. ಈ ರೀತಿ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರು ನಡೆದುಕೊಂಡಿರುವುದು ಸವಿಂದಾನದ ಹುದ್ದೆಗೆ ಅವಮಾನ. ತಕ್ಷಣ ಈ ನ್ಯಾಯಾಧೀಶರನ್ನು ನ್ಯಾಯಾಧೀಶ ಸ್ಥಾನದಿಂದ ವಜಾಗೊಳಿಸುವಂತೆ ಘನವೆತ್ತ ರಾಜ್ಯದ ರಾಜ್ಯಪಾಲರಿಗೂ ಹಾಗೂ ಮಾನ್ಯ ಮುಖ್ಯಮಂತ್ರಿಗಳಿಗೆ ಈ ಸಂದರ್ಭದಲ್ಲಿ ಮನವಿ ಮಾಡಿದರು. ನಂತರ ಇನ್ನೂ ಅನೇಕ ಅಂಬೇಡ್ಕರ್ ಸಂಘದ ಸದಸ್ಯರು ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಯಚೂರು ಜಿಲ್ಲೆಯಲ್ಲಿ ನಡೆದ ರಾಯಚೂರು ಜಿಲ್ಲಾ ನ್ಯಾಯಾಲಯದ ನ್ಯಾಯದೀಶರು ಮಾಡಿದ ಸವಿಂದಾನ ಶಿಲ್ಪಿ ಅಂಬೇಡ್ಕರ್ ಹಾಗೂ ಸವಿಂದಾನ ಹುದ್ದೆಗೆ ಮಾಡಿದ ಅವಮಾನ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಗುಣಸಾಗರ ಕೃಷ್ಣಪ್ಪ. ಕಾರ್ಯದರ್ಶಿ ರಾಘವೇಂದ್ರ ಸಾಲುಮನೆ. ಉಪಾಧ್ಯಕ್ಷರುಗಳಾದ ಶ್ರೀ ರಾಘವೇಂದ್ರ. ಕೆ ಪ್ರಭಾಕರ ಕೊಟ್ರೇಶ್. ಪ್ರಧಾನ ಕಾರ್ಯದರ್ಶಿಗಳಾದ ರಮೇಶ ಲೋಕೇಶ ಹಾಲೂರು. ಸಿಡೇಗಲ್ಲು ಹೊನ್ನೂರ ಸ್ವಾಮಿ.
ಖಜಾಂಜಿ ವಕೀಲರಾದ ಡಿಎಚ್ ದುರುಗೇಶ. ಮುಖಂಡರಾದ ವಿರೂಪಾಕ್ಷಪ್ಪ ವಕೀಲರು ಹಾಗೂ ಗುನ್ನಹಳ್ಳಿ ರಾಘವೇಂದ್ರ. ಯೋಗೇಶ. ಕೆ ಬಾಬು.. ಏಕೆ ರಮೇಶ್. ಗಣೇಶ್. ದುರುಗೇಶ ಪಿ. ಎಚ್ ಕೆ ನಾಗರಾಜ್ ಭೀಮಸಮುದ್ರ ಗ್ರಾಮದ B. D. O. ಓಬಪ್ಪ. ಸೇರಿದಂತೆ ಅಂಬೇಡ್ಕರ್ ಸಂಘದ ಸರ್ವ ಸದಸ್ಯರು ಪದಾಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ ಡಿ ಎಂ ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
