ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಂಡುಮುಣುಗು ಗ್ರಾಮ ಪಂಚಾಯತಿ
ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಕಲ್ಪಿಸಿಕೊಡಲು ಪೋಷಕರ ಹಾಗೂ ಗ್ರಾಮಸ್ಥರಮನವಿ
ಗುಂಡುಮುಣುಗು ಗ್ರಾಮ ಪಂಚಾಯಿತಿಗೆ ಸೇರಿದ ಸಿದ್ದಾಪುರ ಗ್ರಾಮದ ಗ್ರಾಮಸ್ಥರು ಕೂಡ್ಲಿಗಿ ಬಸ್ ಡಿಪೋ ಘಟಕದ ವ್ಯವಸ್ಥಾಪಕರಿಗೆ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಿದ್ದಾಪುರ ಗ್ರಾಮದಿಂದ ಕಾನಹೊಸಹಳ್ಳಿ ಗ್ರಾಮಕ್ಕೆ ವಿದ್ಯಾಭ್ಯಾಸಕ್ಕಾಗಿ ಹೋಗುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬಸ್ ಸೌಲಭ್ಯ ಕಲ್ಪಿಸಿಕೊಡು ಒಂದೇ ಈ ಹಿಂದೆ ಮಾಧ್ಯಮದ ಮೂಲಕ ಮನವಿ ಸಲ್ಲಿಸಿದ್ದರು. ಆದರೂ ಸಹ ಪ್ರಯೋಜನವಾಗಲಿಲ್ಲ. ಬಸ್ಸು ಇಲ್ಲದ ಕಾರಣ ಆಟೋಗಳಿಗೆ ವಿದ್ಯಾಭ್ಯಾಸಕ್ಕಾಗಿ ಕಾನಹೊಸಹಳ್ಳಿ ಗೆ ಹೋಗುತ್ತಿದ್ದರು.ಈಗ ಆಟೋ ಸಹ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಈಗ ಹುಣಸೆ ಹಣ್ಣಿನ ವ್ಯಾಪಾರ ಜೋರು ಇರುವುದರಿಂದ ಕೆಲವು ಆಟೋ ಚಾಲಕರು ಕೂಲಿ ಕಾರ್ಮಿಕರನ್ನು ಕರೆದುಕೊಂಡು ಬಾಡಿಗೆ ಹೋಗುತ್ತಾರೆ. ಅನಿವಾರ್ಯ ಕಾರಣ ಬೇರೆ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ದಾರಿಯಲ್ಲಿ ಬರುವ ವಾಹನಗಳನ್ನು ಕೈ ಮಾಡಿ ಅದರಲ್ಲಿ ಹತ್ತಿಕೊಂಡು ವಿದ್ಯಾಭ್ಯಾಸಕ್ಕಾಗಿ ತೆರಳುತ್ತಾರೆ. ಸುಮಾರು ಬಾರಿ ಈ ಬಗ್ಗೆ ವರದಿ ಮಾಡಿದರು ಕೂಡ ಅಧಿಕಾರಿಗಳು ಸ್ಪಂದಿಸದಿರುವುದು ಮಕ್ಕಳ ಪೋಷಕರಿಗೆ ಅಸಮಾಧಾನಕರ ವಾಗಿದೆ ಕಾರಣ ಒಂದು ದಿನಾಂಕವನ್ನು ನಿಗದಿ ಮಾಡಿಕೊಂಡು… ಕೂಡ್ಲಿಗಿ ತಾಲೂಕಿನ ಬಸ್ಗ ಟಕದ ಕಚೇರಿಯ ಮುಂಭಾಗಧರಣಿ ಮಾಡಲಾಗುವುದು ಎಂದು ಸಿದ್ದಾಪುರ ಗ್ರಾಮದ ಗ್ರಾಮಸ್ಥರು.ಪೋಷಕರು.ವಿವಿಧ ಸಂಘಟನೆಗಳ ಮುಖಂಡರು. ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಧ್ಯಮದ ಮೂಲಕ ಮನವಿ ಸಲ್ಲಿಸಿರುತ್ತಾರೆ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
