;

ಡಾ”ಬಿ.ಆರ್. ಅಂಬೇಡ್ಕರ್ ಫೋಟೋವನ್ನು ಧ್ವಜಾರೋಹಣ ಸಮಯದಲ್ಲಿ ಇಟ್ಟಿದ್ದಕ್ಕೆ ನ್ಯಾಯದೀಶರ ವರ್ತನೆಯನ್ನು ಖಂಡಿಸಿ ಕಾನಾಹೊಸಹಳ್ಳಿಯಲ್ಲಿ ವಜಾಗೊಳಿಸಲು ಮನವಿ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ
ಕಾನಹೊಸಹಳ್ಳಿ:- ರಾಯಚೂರು ಜಿಲ್ಲೆಯಲ್ಲಿ 73ನೇ ಗಣ ರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿರಾಯಚೂರು ಜಿಲ್ಲೆಯ. ಜಿಲ್ಲೆಯ ನ್ಯಾಯಾಧೀಶರಾದ ಮಲ್ಲಿಕಾರ್ಜುನ್ ಗೌಡ ರವರು. ಧ್ವಜಾರೋಹಣ ಕಾರ್ಯಕ್ರಮದಲ್ಲಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಭಾವಚಿತ್ರಗಳನ್ನು ಪೂಜೆಗೆ ಇಡಲಾಗಿತ್ತು.ಇದರಲ್ಲಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಭಾವಚಿತ್ರವನ್ನು ಕಾರ್ಯಕ್ರಮದಲ್ಲಿ ತೆಗೆದರೆ ಮಾತ್ರ ಧ್ವಜಾರೋಹಣ ಮಾಡುತ್ತೇನೆ ಎಂದು ಹೇಳಿದರು. ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ರವರು ಸವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ರವರಿಗೂ ಹಾಗೂ ಭಾರತ ಸಂವಿಧಾನದ ಹುದ್ದೆಗೆ ಮಾಡಿದ ಅವಮಾನವನ್ನು ಖಂಡಿಸಿ ಕಾನಹೊಸಹಳ್ಳಿ ಗ್ರಾಮದ ಮುಖಂಡರು ಸಂಘಟನಾಕಾರರು. ಸಂಘ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು. ಸಾರ್ವಜನಿಕರು ಭಾರತ ಸಂವಿಧಾನಕ್ಕೆ ಹಾಗೂ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರಿಗೆ ಅವರು ತೋರಿದ ಅಗೌರವ ಮತ್ತು ಅವಮಾನವನ್ನು ಖಂಡಿಸಿ ಶೀಘ್ರದಲ್ಲಿ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ರವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಪಟ್ಟಣದ ನಾಡಕಚೇರಿಯ ಕಂದಾಯ ಅಧಿಕಾರಿಗಳಾದ ಶ್ರೀಮುರಳಿ ಕೃಷ್ಣರವರ ದ್ವಾರ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಹಾಗೂ ರಾಜ್ಯದ ರಾಜ್ಯಪಾಲರು ಕರ್ನಾಟಕ ಸರ್ಕಾರ ವಿಧಾನ ಸೌಧ ಬೆಂಗಳೂರು ಇವರಿಗೆಮನವಿ ಪತ್ರವನ್ನು ಸಲ್ಲಿಸಿದರು. ಸಂದರ್ಭದಲ್ಲಿ
ಹೊಸಹಳ್ಳಿ ಹೋಬಳಿಯ ಕಂದಾಯ ನಿರೀಕ್ಷಕರಾದ ಮುರಳಿಕೃಷ್ಣ, ಗ್ರಾಮಲೆಕ್ಕಾಧಿಕಾರಿ ಮರಳಸಿದ್ದಪ್ಪ,.
ಗ್ರಾಮ ಪಂಚಾಯತಿ ಸದಸ್ಯ ಹೊನ್ನೂರಪ್ಪ,ಯುವ ಮುಖಂಡರಾದ ವೀರೇಶ್ ಕಿಟ್ಟಪ್ಪನವರ್, ನಾಗರಾಜ್,ಎಸ್ ಎಮ್ ಮಂಜುನಾಥ್, ಹನುಮಂತಪ್ಪ, ನೀರಗಂಟಿ ಸುರೇಶ್,
ಎಂ ಮಾರಪ್ಪ, ಅನಿಲ್, ಚೇತನ್,ಚನ್ನಕೇಶವ, ಕೊಟ್ರೇಶ್, ರಾಕೇಶ್, ಇತರರಿದ್ದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *