;

ವೀಕೆಂಡ್ ಕರ್ಫ್ಯೂ ಜಾರಿಯಿಂದ ಕಾನಹೊಸಹಳ್ಳಿ ಪಟ್ಟಣ ಬಹುತೇಕ ಸ್ತಬ್ಧ…!!!

ವೀಕೆಂಡ್ ಕರ್ಫ್ಯೂ ಜಾರಿಯಿಂದ ಕಾನ ಹೊಸ ಹಳ್ಳಿ ಪಟ್ಟಣ ಬಹುತೇಕ ಸ್ತಬ್ಧ

ಕೋವಿಡ್ ಉಲ್ಬಣದಿಂದ ಸರ್ಕಾರವು ವೀಕೆಂಡ್ ಕರ್ಫ್ಯೂ ಜಾರಿಯಿಂದ ಕೂಡ್ಲಿಗಿ ತಾಲೂಕಿನ ಕಾನ ಹೊಸಹಳ್ಳಿ ಪಟ್ಟಣದ ಬಹುತೇಕ ಸ್ತಬ್ಧವಾಗಿದೆ ಶನಿವಾರ ಕಾನ ಹೊಸಹಳ್ಳಿನ ವ್ಯಾಪಾರದ ಬಹುತೇಕ ಹಳ್ಳಿಯಿಂದ ಪಟ್ಟಣಕ್ಕೆ ಬರುವ ಜನರಿಂದ ತುಂಬಿರುತ್ತಿದ್ದ ಪಟ್ಟಣವು ಕರೋನಾ ವೀಕೆಂಡ್ ಕರ್ಫ್ಯೂ ಹೊಡೆತದಿಂದ ಸಂಪೂರ್ಣ ವ್ಯಾಪಾರ ವಹಿವಾಟುಗಳು ಸ್ಥಗಿತವಾಗಿ ಬಿಕೋ ಎನ್ನುತ್ತಿದೆ. ಜನರು ಸಹಕಾರ ನೀಡಿದಲ್ಲಿ ಕೋವಿಡ್ ಮತ್ತು ಒಮಿಕ್ರಾನ್ ರೋಗ ಹರಡುವುದನ್ನು ತಡೆಗಟ್ಟುವಲ್ಲಿ ಯಶಸ್ವಿ ಆಗಬಹುದು.
ಪೊಲೀಸ್ ಇಲಾಖೆ ವತಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು.
ದಿನಸಿ ಅಗತ್ಯ ವಸ್ತುಗಳು ಹೊರತುಪಡಿಸಿ ಅನಗತ್ಯವಾಗಿ ತಿರುಗುತ್ತಿದ್ದ ವರಿಗೆ ಮತ್ತು ಮಾತು ಧರಿಸಿದವರಿಗೆ ದಂಡ ವಿಧಿಸಲಾಯಿತು.
ದಿನಸಿ ತರಕಾರಿ ಔಷಧಿ ಅಂಗಡಿಗಳು ತೆರೆದಿದ್ದವು. ಉಳಿದಂತೆ ಇತರೆ ಅಂಗಡಿಗಳು ಮುಂಗಟ್ಟುಗಳು ಮುಚ್ಚಿದ್ದವು. ಹೋಟೆಲ್ಗಳಲ್ಲಿ ಪಾರ್ಸಲ್ ವ್ಯವಸ್ಥೆ ಲಭ್ಯವಿತ್ತು. ನಷ್ಟದ ಭೀತಿಯಲ್ಲಿ ಕೆಲವು ಹೋಟೆಲ್ ಗಳು ಮುಚ್ಚಿದ್ದವು..

ವರದಿ.ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;