;

ಕುರಿಹಟ್ಟಿ:ಜಾತ್ರೆ ಹಿನ್ನೆಲೆಯಲ್ಲಿ, ಕೋವಿಡ್ ನಿಯಂತ್ರಣಕ್ಕೆ ಗ್ರಾಮ ಸಭೆ…!!!

ಕುರಿಹಟ್ಟಿ:ಜಾತ್ರೆ ಹಿನ್ನೆಲೆಯಲ್ಲಿ, ಕೋವಿಡ್ ನಿಯಂತ್ರಣಕ್ಕೆ ಗ್ರಾಮ ಸಭೆ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ, ಕುರಿಹಟ್ಟಿ ಗ್ರಾಮದಲ್ಲಿ ಜ11 ರಂದು ಅದ್ದೂರಿಯಾಗಿ ನಡೆಯಬೇಕಿದ್ದ. ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯನ್ನು ಕೋವಿಡ್ ಹೆಚ್ಚಳವಾಗುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರದ ನಿರ್ದೇಶನದಂತೆ. ನಿಯಮ ನಿಬಂಧನೆ ರೂಪಿಸಿ ಜನ ಸಂಧಣಿ ಸೇರದಂತೆ ಕಡ್ಡಾಯವಾಗಿ ಮಾಸ್ಕ ಧರಸಿ,ಸಾಮಾಜಿಕ ಅಂತರ ಕಾಯ್ದು ಸ್ಯಾನಿಟೈಸರ್ ಬಳಕೆ ಮಾಡುವಂತೆ ತಿಳಿಸಲಾಯಿತು.ಗ್ರಾಮದಲ್ಲಿ ಯಾವುದೇ ಮೆರವಣಿಗೆ, ಜಾತ್ರಾ ಸಾಮಾನು ಅಂಗಡಿ ಹಾಕುವಂತಿಲ್ಲಾ, ಮತ್ತು ನಾಟಕ ಪ್ರದರ್ಶನ ಮಾಡುವಂತಿಲ್ಲ,ಬೇರೆ ಗ್ರಾಮಗಳಿಂದ ಜನರನ್ನು ಸಹ ಆಹ್ವಾನಿಸುವಂತಿಲ್ಲ ಎಂದು ತಿಳಿಸಿದರು.ನಂತರ ಗ್ರಾಮದ ಹಿರಿಯ ಮುಖಂಡರು ಹಾಗೂ ದೇವಸ್ಥಾನದ ದೈವಸ್ಥರು,ಮತ್ತು ಗ್ರಾಮದ ಜನತೆಯೊಂದಿಗೆ ಶಾಂತಿ ಸಭೆ ಕರೆದು ತಿಳಿಸಿ ಹೇಳಿದ್ದು.ಗ್ರಾಮದಲ್ಲಿ ಸರ್ಕಾರದ ನಿಯಮ ಉಲ್ಲಂಘಿಸಿ ಯಾವುದೇ ಅಹಿತಕರ ಘಟನೆ ಜರುಗಿದಲ್ಲಿ,ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸಿ ಪಿ ಐ ಮತ್ತು ಪಿ ಎಸ್ ಐ ಎಚ್ಚರಿಕೆ ನೀಡಿದರು.
ನಂತರ ಗ್ರಾಮಸ್ಥರ ಮನವಿಯಂತೆ ಹೆಚ್ಚಿನ ಜನಸಂಖ್ಯೆ ಸೇರದಂತೆ ತಿಳಿ ಹೇಳಿ,ಕೋವಿಡ್ ಲಸಿಕೆ ಎರಡು ಡೋಸ್ ಕಡ್ಡಾಯವಾಗಿ ಹಾಕಿಸಿಕೊಂಡವರು ಮಾತ್ರ ಗ್ರಾಮದ 10 ಜನ ಸದಸ್ಯರಿಂದ.ದೇವಸ್ಥಾನ ನಿಯಮದಂತೆ ಪೂಜಾ ಕಾರ್ಯಕ್ರಮವನ್ನು,ಸಾಂಪ್ರದಾಯಿಕ ವಾಗಿ ನೆರವೇರಿಸಲು ಅನುಮತಿ ನೀಡಿದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;