ವಿಜಯನಗರ ಜಿಲ್ಲೆ ಕೂಡ್ಲಿಗಿ,ತಾಲೂಕಿನಲ್ಲಿಯೇ ಅತ್ಯಂತ ದೊಡ್ಡ ರಥೋತ್ಸವ ಶ್ರೀವೀರಭದ್ರೇಶ್ವರ ರಥೋತ್ಸವ,ಲಾಕ್ ಡೌನ್ ಜಾರಿ ಹಿನ್ನಲೆಯಲ್ಲಿ ತಾಲೂಕಾಡಳಿತ ರಥೋತ್ಸವ ರದ್ದುಗೊಳಿಸಿ ಕ್ರಮಕ್ಕಾಗಿ ಆದೇಶಿಸಿದೆ.ಇದು ಭಕ್ತರಲ್ಲಿ ತುಂಬಾ ಬೇಸರ ಮೂಡಿಸಿದೆ ಸ್ಥಳೀಯ ಆಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಜಾರಿ ಮಾಡಿದ್ದು,ಸರ್ಕಾರದ ಸುತ್ತೊಲೆಯಂತೆ ತಾಲೂಕಾಡಳಿತ, ಹಾಗೂ ಆರಕ್ಷಕ ಇಲಾಖೆ ಹಾಗೂ ಸ್ಥಳೀಯ ಆಡಳಿತದ ಜೊತೆಗೆ ದೇವಸ್ಥಾನದ ಸೇವಾ ಮಂಡಳಿ ಪೂರಕವಾಗಿಯೇ ಸಹಕರಿಸುತ್ತಿದೆ. ಆದರೆ ಬಹುತೇಕ ಮೊರಬ ಗ್ರಾಮಸ್ಥರು ಸೇರದಂತೆ ನೆರೆಹೊರೆಯ ಗ್ರಾಮಸ್ಥರಲ್ಲಿ, ಲಾಕ್ ಡೌನ್ ಹಿನ್ನಲೆಯಲ್ಲಿ ರಥೋತ್ಸವ ರದ್ದಾಗಿರುವುದಕ್ಕೆ ತೀವ್ರ ಖೇದ ವ್ಯೆಕ್ತವಾಗಿದೆ. ಜಾತ್ರೆಗಳಲ್ಲಿ ವ್ಯಾಪಾರ ಮಾಡಿ ಜೀವನ ನಡೆಸುವರಿಂದಾಗಿ, ದಿಡೀರ್ ಲಾಕ್ ಡೌನ್ ಜಾರಿಯಾಗಿರೋದರಿಂದಾಗಿ ಅವರು ತೀವ್ರ ಆಕ್ರೋಶ ವ್ಯೆಕ್ತಪಡಿಸಿದ್ದಾರೆ. ಐವತ್ತು ಕುಟುಂಬಗಳು ಗೊಂಬೆ ಆಟಿಕೆಗಳನ್ನು ಮಾರೋ ಕುಟುಂಬಗಳು ಸೇರಿದಂತೆ,ಇತರೆ ನಾಲ್ಕು ನೂರು ಕುಟುಂಬಗಳು ರಥೊತ್ಸ ಹಾಗೂ ಜಾತ್ರೆಗಳನ್ನೆ ಅವಲಂಬಿಸಿವೆ.ವ್ಯಾಪಾರ ನಂಬಿ ಬದುಕುವ ನೂರಾರು ಕುಟುಂಬಗಳು ದೀಡೀರ್ ಲಾಕ್ ಡೌನ್ ಜಾರಿಯಿಂದಾಗಿ, ಅವರ ಬದುಕು ಸಾಲದ ಸುಳಿಯಲ್ಲಿ ವಿಲ ವಿಲ ಒದ್ದಾಡಿದಂತಾಗಿದೆ ಎಂದು ಆರೋಪಿಸಿದ್ದಾರೆ.ಅವರು ಮೊರಬ ಗ್ರಾಮದಲ್ಲಿ ಠಿಕಾಣಿ ಊಡಿರಿವ ಅಲೆಮಾರಿ ವ್ಯಾಪಾರಿಗಳು ಅವರ ಅಳನ್ನು ತೋಡಿಕೊಂಡಿದ್ದು, ಸರ್ಕಾರದ ನಿರ್ಧಾರಕ್ಕೆ ಅಲೆಮಾರಿ ವ್ಯಾಪಾರಿ ಕುಟುಂಬಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಘಗಳು ಹಾಗೂ ಖಾಸಗೀ ಬ್ಯಾಂಕ್ ಗಳಿಂದ ತಾವು ಸಾಲ ಮಾಡಿ ಸರಕು ತಂದಿದ್ದು,ಮಾರದಿದ್ದರೆ ಸಾಲಗಾರರ ಉಪಟಳ ಅನುಭವಿಸಬೇಕಿದೆ.ಸಾವಿರಾರು ರೂಗಳನ್ನು ಸಂಚಾರಕ್ಕೆ ವ್ಯಯ ಮಾಡಿದ್ದು,ಸುಕಾ ಸುಮ್ಮನೆ ಬಾಡಿಗೆ ಮಾಡಿಕೊಂಡು ಹಿಂತಿರುಗಬೇಕಿದೆ ಇದು ಬೆಂಕಿ ಯಿಂದ ಬಾಂಡಲಿಗೆ ಹಾಕಿದಂತಾಗಿದೆ.ಕಾರಣ ಜಿಲ್ಲಾಢಳಿತ ಹಾಗೂ ತಾಲೂ ಕಾಡಳಿತ ಮಾನವೀಯ ದೃಷ್ಟಿಯಿಂದಾಗಿ, ತಮಗೆ ಷರತ್ತು ಬದ್ಧ ನಿಯಮಗಳ ಪಾಲನೆಯಡಿ ವ್ಯಾಪಾರ ಮಾಡಲು ಅವಕಾಶ ಕೊಡುವಂತೆ ಅವರು ಈ ಮೂಲಕ ಜಿಲ್ಲಾಧಿಕಾರಿ ಗಳಲ್ಲಿ ಮನವಿ ಮಾಡಿದ್ದಾರೆ.ನಲವತ್ತಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಸ್ಥರು ಹಾಗೂ ರಥೋತ್ಸವ ಮತ್ತು ಜಾತ್ರೋತ್ಸವ ಅಲೆಮಾರಿ ವ್ಯಾಪಾರಸ್ಥರು ಇದ್ದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
