ರಕ್ತದಾನ ಮತ್ತು ನೇತ್ರ ಶಿಬಿರ ಹಮ್ಮಿಕೊಂಡ ಯುವಕರೆ ಸ್ಪೂರ್ತಿದಾಯಕ. ಡಾ ಸಿದ್ದು ಪಾಟೀಲ್
ಯಡ್ರಾಮಿ: ತಾಲೂಕಿನ ಸಾತಖೇಡ ಗ್ರಾಮದ ಯುವ ಬಳಗದ ವತಿಯಿಂದ ನೇತ್ರದಾನ ಹಾಗೂ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಯಿತು. ಈ ಕಾರ್ಯಕ್ರಮವನ್ನು ಸಾನಿಧ್ಯ ಶ್ರೀ ಈರಣ್ಣ ಮುತ್ಯಾ ಸಾತಖೇಡ ವಹಿಸಿಕೊಂಡರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇವರ್ಗಿ ತಾಲೂಕಿನ ವೈದ್ಯಾಧಿಕಾರಿಗಳಾದ ಡಾಕ್ಟರ್ ಸಿದ್ದು ಪಾಟೀಲ್ ವಹಿಸಿಕೊಂಡು.
ವೈದ್ಯಾಧಿಕಾರಿಗಳು ಸಿದ್ದು ಪಾಟೀಲ್ ಮಾತನಾಡಿ ಸಾತಖೇಡ ಗ್ರಾಮದಲ್ಲಿ ಮಾಡಿರುವ ಯುವ ಬಳಗ ರಕ್ತದಾನ ಶಿಬಿರ ಮತ್ತು ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು ಖುಷಿಯ ವಿಚಾರ ಬೇರೆ ಯುವಕರಿಗೆ ಸ್ಪೂರ್ತಿದಾಯಕ ವಾದದ್ದು ಇಂತಹ ಗಳು ಕೆಲಸಗಳು ಆಗಾಗ ಗ್ರಾಮಗಳಲ್ಲಿ ನಡಿತಾ ಇರಬೇಕು ಆದರೆ ಯುವ ಬಳಗ ಅಥವಾ ಸಂಘ-ಸಂಸ್ಥೆಗಳು ರಿಜಿಸ್ಟರ್ ಮಾಡುವುದರಿಂದ ಸರ್ಕಾರದಿಂದ ಸವಲತ್ತುಗಳನ್ನು ಪಡೆದುಕೊಳ್ಳಬಹುದು. ಇಂತಹ ಅನೇಕ ಒಳ್ಳೆಯ ಕಾರ್ಯಕ್ರಮಗಳಿಗೆ ಸದಾ ಬೆಂಬಲಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ವೈದ್ಯಾಧಿಕಾರಿಗಳಿಗೆ ಯುವಕರ ಬಳಗದವತಿಯಿಂದ ಸನ್ಮಾನಿಸಲಾಯಿತು.ತಪಾಸಣೆಗೆ ಬೇರೆ ಊರಿನಿಂದ ಬಂದಿರುವಂತಹ ಎಲ್ಲಾ ಜನಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಸಾನಿಧ್ಯ ಶ್ರೀ ಈರಣ್ಣ ಮುತ್ಯ ಸಾತಖೇಡ ತಾಲೂಕ ವೈದ್ಯಾಧಿಕಾರಿಗಳಾದ ಸಿದ್ದು ಪಾಟೀಲ್, ಇಜೇರಿ ವೈದ್ಯಾಧಿಕಾರಿಗಳಾದ ಉಮೇಶ ಶರ್ಮಾ,ಗಂವಾರ ವೈದ್ಯಾಧಿಕಾರಿಗಳಾದ ಡಾಕ್ಟರ್ ಅಪರ್ಣ,ರವಿಶಂಕರ್,ಅನಂತ ರೆಡ್ಡಿ, ನಾಗರಾಜ್, ಸ್ನೇಹಲತಾ, ಅನಿತಾ, ಈಶ್ವರ್, ಆಶಾ ಕಾರ್ಯಕರ್ತರು, ಅಂಗನವಾಡಿ ಸಿಬ್ಬಂದಿಗಳು, ತಾಲೂಕ ವೈದ್ಯಾಧಿಕಾರಿಗಳ ಸಿಬ್ಬಂದಿ, ಗ್ರಾಮದ ಯುವ ಬಳಗ ಈ ಸಂದರ್ಭದಲ್ಲಿ ಹಾಜರಿದ್ದರು…

ವರದಿ. ಬಸವರಾಜ್ ಹಿರೇಮಠ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
