;

ಅಂಗವಿಕಲರಾದ ಸಾಹೇಬಣ್ಣರವರನ್ನು ಕಾರುಣ್ಯ ಆಶ್ರಮಕ್ಕೆ ಕಳುಹಿಸಿ ಮಾನವೀಯತೆ ಮೆರೆದ ಅಧಿಕಾರಿಗಳು…!!!

ಸಿಂಧನೂರು: ನಗರದ ಇಂದಿರಾ ಕ್ಯಾಂಟೀನ್ ಹತ್ತಿರ ಸುಮಾರು ದಿನಗಳಿಂದ ಕಾಲಿಲ್ಲದ ಅಂಗವಿಕಲ ವೃದ್ಧನಾದ ಸಾಯಬಣ್ಣ ಸುಮಾರು 75 ವರ್ಷಗಳು ಅನಾಮಧೇಯ ವ್ಯಕ್ತಿಯಾಗಿ ಇರುವುದನ್ನು ಗಮನಿಸಿ ಇಂದಿರಾ ಕ್ಯಾಂಟೀನ್ ನ ಕಾವಲುಗಾರರಾದ ಚನ್ನಬಸವ ಅಲಬನೂರು ಹಾಗೂ ಸಮಾಜಸೇವಕರಾದ ಚನ್ನಬಸಯ್ಯ ಸ್ವಾಮಿ ಪಿಡಬ್ಲ್ಯೂಡಿ ಕ್ಯಾಂಪ್ ಸಿಂಧನೂರು ಇವರುಗಳು ಕಾರುಣ್ಯ ಆಶ್ರಮಕ್ಕೆ ಮಾಹಿತಿ ತಲುಪಿಸಿದರು. ಈ ಸಮಯದಲ್ಲಿ ಈತನ ವಿಚಾರಣೆಗಾಗಿ ನಗರದ ಪಿಎಸ್ಐ ಗಳಾದ ಸೌಮ್ಯ ಹಿರೇಮಠ ಅವರು ಅವರ ಸಿಬ್ಬಂದಿಯನ್ನು ಕಳುಹಿಸಿಕೊಟ್ಟು ಈತನನ್ನು ಕಾರುಣ್ಯ ಆಶ್ರಮಕ್ಕೆ ಈ ಸಮಯದಲ್ಲಿ ಸ್ಥಳೀಯರಾದ ರವಿ ವಾಚ್ ಸೆಂಟರ್ ಹಾಗೂ ಅಶ್ರಮದ ಸಿಬ್ಬಂದಿಗಳಾದ ಚನ್ನಬಸಯ್ಯ ಸ್ವಾಮಿ ಹಿರೇಮಠ ಆಡಳಿತಾಧಿಕಾರಿಗಳು. ಪಂಪಯ್ಯ ಸ್ವಾಮಿ ಜವಳಗೇರಾ ಮುಖ್ಯ ಸೇವಾಕರ್ತರು. ರೇಖಾ ಸುಶ್ರು ಕೀಯರು. ಜ್ಯೋತಿ ಸೇವಾಕರ್ತರು ಈ ಕಾಲಿಲ್ಲದ ವಯೋವೃದ್ಧನನ್ನು ಆಶ್ರಮದ ವಾಹನದಲ್ಲಿ ಕರೆದುಕೊಂಡು ಹೋಗಿ ಆತನ ಆರೋಗ್ಯ ತಪಾಸಣೆ ಮಾಡಿ ದೇಹದ ಭಾಗವನ್ನು ಸ್ವಚ್ಛಗೊಳಿಸಿ ಉಪಚರಿಸಿದರು. ಈ ಸಮಯದಲ್ಲಿ ಮಾತನಾಡಿದ ಆಶ್ರಮದ ಆಡಳಿತಾಧಿಕಾರಿಗಳಾದ ಚನ್ನಬಸಯ್ಯ ಸ್ವಾಮಿ ಹಿರೇಮಠ ಸಿಂಧನೂರು ನಗರದಲ್ಲಿ ಈ ತರಹ ಹಲವಾರು ಅನಾಮಧೇಯ ವೃದ್ಧರನ್ನು ಗುರುತಿಸಿ ಅವರನ್ನು ಆಶ್ರಮಕ್ಕೆ ಕರೆದುಕೊಂಡು ಹೋಗಿ ಅವರ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿ ಅವರವರ ಗೂಡಿಗೆ ಸೇರುವೆ ಸೇರಿಸುವಂತಹಕಾರ್ಯಗಳನ್ನು ಸುಮಾರು ವರ್ಷಗಳಿಂದ ಮಾಡುತ್ತಿದ್ದೇವೆ. ಇದುವರೆಗೆ ಸುಮಾರು 25 ಜನರನ್ನು ಅವರವರ ಕುಟುಂಬಕ್ಕೆ ಸೇರಿಸಿದ್ದೇವೆ. ನಾವು ಅನಾಥರು ವೃದ್ಧರನ್ನು ಹಾಗೂ ವಯಸ್ಕರ ಬುದ್ಧಿಮಾಂದ್ಯ ರನ್ನು ಸೇವೆ ಮಾಡುವುದರ ಮೂಲಕ ಇಂತಹ ಹಲವಾರು ಸಮಾಜ ಪರ ಕಾರ್ಯಗಳನ್ನು ಮಾಡುತ್ತಿದ್ದೇವೆ ಇದಕ್ಕೆ ಪೊಲೀಸ್ ಇಲಾಖೆಯ ಸಂಪೂರ್ಣ ಸಹಕಾರ ನಮಗಿದೆ. ಇಂಥ ಕಾರ್ಯ ಮಾಡುತ್ತಿರುವ ನಮ್ಮ ಸಂಸ್ಥೆಗೆ ಸರ್ಕಾರಿ ನಿವೇಶನ ನೀಡಿ ಅನುಕೂಲ ಮಾಡಿಕೊಟ್ಟರೆ ಸಿಂಧನೂರಿನ ಹೆಮ್ಮೆಯನ್ನು ಎತ್ತಿ ಹಿಡಿಯುತ್ತೇವೆ ಎಂದು ಮಾತನಾಡಿ ಸರ್ವ ಸಮಸ್ತ ಸಿಂಧನೂರಿನ ಜನತೆಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;