;

ಶ್ರೀಎಂ,ಡಿ,ಲಕ್ಷ್ಮೀನಾರಾಯಣ ಅವರನ್ನು ಹರಪನಹಳ್ಳಿಗೆ ಬರಮಾಡಿಕೊಂಡ ಕ್ಷೇತ್ರದ ಜನಪ್ರಿಯ ನಾಯಕಿ ಎಂ,ಪಿ,ವೀಣಾ ಮಹಾಂತೇಶ್…!!!

ಕಾಂಗ್ರೆಸ್ ಒಬಿಸಿ ಘಟಕದ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀಎಂ,ಡಿ,ಲಕ್ಷ್ಮೀನಾರಾಯಣ ಅವರನ್ನು ಹರಪನಹಳ್ಳಿಗೆ ಬರಮಾಡಿಕೊಂಡ ಕ್ಷೇತ್ರದ ಜನಪ್ರಿಯ ನಾಯಕಿ ಎಂ,ಪಿ,ವೀಣಾ ಮಹಾಂತೇಶ್ ಮತ್ತು ತಾಲೂಕ ಕಾಂಗ್ರೆಸ್

ಬಳ್ಳಾರಿ-ವಿಜಯನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿ.ಪ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಶ್ರೀಕೆ,ಸಿ,ಕೊಂಡಯ್ಯ ಅವರ ಪರವಾಗಿ ಸತತವಾಗಿ ಒಂದು ವಾರಗಳ ಕಾಲ ಚುನಾವಣಾ ಪ್ರಚಾರ ಕೈಗೊಳ್ಳಲು ಹರಪನಹಳ್ಳಿಗೆ ಆಗಮಿಸಿದ ರಾಜ್ಯ ಕಾಂಗ್ರೆಸ್ ಒಬಿಸಿ ಘಟಕದ ರಾಜ್ಯಾಧ್ಯಕ್ಷರಾದ ಶ್ರೀಎಂ,ಡಿ,ಲಕ್ಷ್ಮೀನಾರಾಯಣ ಅವರನ್ನು ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಅಧ್ಯಕ್ಷರ ನೇತೃತ್ವದಲ್ಲಿ ಸ್ವಾಗತಿಸಿ, ಚುನಾವಣೆಯನ ತಯಾರಿಯ ಬಗ್ಗೆ ಚರ್ಚೆ ನಡಿಸಲಾಯಿತು. ಹಾಗೂ ಶ್ರೀಕ್ಷೇತ್ರ ದೇವರ ತಿಮ್ಮಲಾಪುರ ಶ್ರೀವೆಂಕಟೇಶ್ವರನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಹರಪನಹಳ್ಳಿ ಕ್ಷೇತ್ರದ ಜನಪ್ರಿಯ ನಾಯಕಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ,ಪಿ,ವೀಣಾ ಮಹಾಂತೇಶ್ ಅವರು ಆತ್ಮೀಯವಾಗಿ ಬರಮಾಡಿಕೊಂಡು ತಮ್ಮೊಂದಿಗೆ ಕ್ಷೇತ್ರ ಪ್ರವಾಸ ಕೈಗೊಂಡು ಚುನಾವಣಾ ಪ್ರಚಾರಕ್ಕೆ ಧುಮುಕಲು ತಯಾರಿದ್ದೇನೆ ಎನ್ನುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ವಿಶ್ವಕರ್ಮ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಎಐಸಿಸಿ ಸಂಯೋಜಕರಾದ ಶ್ರೀ,M D ಸತೀಶ್ ಶ್ರೀ, D ಶಿವಾನಂದ ಓಬಿಸಿ ಘಟಕದ ರಾಜ್ಯ ಉಪಾಧ್ಯಕ್ಷರು ಶ್ರೀ, ನಾಗರಾಜ ಜಂಬನಹಳ್ಳಿ ಓಬಿಸಿ ಘಟಕದ ರಾಜ್ಯ ಕಾರ್ಯದರ್ಶಿ, ಓಬಿಸಿ ಘಟಕದ ರಾಜ್ಯ ಕಾರ್ಯದರ್ಶಿ ಶ್ರೀ.ಶಂಬಣ್ಣ ರಾಜ್ಯ ಕಾರ್ಯದರ್ಶಿ ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ, ಬೇಲೂರು ಅಂಜಪ್ಪ, ಶ್ರೀ.ಬಸವರಾಜ್ ರಾಜ್ಯ ಕಾರ್ಯದರ್ಶಿಗಳು ತಾಲೂಕ್ ಬ್ಲಾಕ್ ಕಾಂಗ್ರೆಸ್ ದ ವಿವಿಧ ಘಟಕಗಳ ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳು ಮತ್ತು ಹರಪನಹಳ್ಳಿ ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಕಾಂಗ್ರೆಸ್ ನ ಹಿರಿಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು..

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;