;

ಸಿಂಧನೂರು: ಬ್ಲೂಪಿಲ್ಮ ನೋಡಿದ ವ್ಯಕ್ತಿಯನ್ನು ಉಪಮುಖ್ಯಮಂತ್ರಿ ಮಾಡಿದೆ – ಬಸನಗೌಡ ಬಾದರ್ಲಿ…!!!

ಸಿಂಧನೂರು: ಬ್ಲೂಪಿಲ್ಮ ನೋಡಿದ ವ್ಯಕ್ತಿಯನ್ನು ಉಪಮುಖ್ಯಮಂತ್ರಿ ಮಾಡಿದೆ – ಬಸನಗೌಡ ಬಾದರ್ಲಿ .

ದೇಶದಲ್ಲಿ ಮತ್ತು ರಾಜ್ಯದಲ್ಲಿ ಬಡವರ,ಧಿನದಲಿತರ, ಮಹಿಳೆಯರ, ರೈತರ ಅಭಿವೃದ್ಧಿಯಾಗಬೇಕಾದರೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಸಿದ್ದರಾಮಯ್ಯರವರ ನೇತೃತ್ವದ ಸರಕಾರದಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದೆ. ಕಾಂಗ್ರೆಸ್ ಪಕ್ಷದ ನಾಯಕರ ಮತ್ತು ಅಭ್ಯರ್ಥಿಯ ಬಗ್ಗೆ ಮಾತನಾಡುವ ಯೋಗ್ಯತೆ ಬಿಜೆಪಿಯ ನಾಯಕರಿಗೆ ಇಲ್ಲ. ಸದನದಲ್ಲಿ ಬ್ಲೂ ಫಿಲಂ ನೋಡಿದ ಲಕ್ಷ್ಮಣ ಸವದಿಯನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದೆ,ಮತ್ತು ರಾಯಚೂರು ಕೊಪ್ಪಳ ಭಾಗದಲ್ಲಿ ಒಬ್ಬ ವಿಧಾನಪರಿಷತ್ ಸದಸ್ಯ ನಿಲ್ಲಿಸುವ ಯೋಗ್ಯತೆ ಬಿಜೆಪಿಗರಿಗಿಲ್ಲ. ಬೇರೆ ಜಿಲ್ಲೆಯಿಂದ ಒಬ್ಬ ವ್ಯಾಪಾರಿಯನ್ನು ಕರೆದುಕೊಂಡು ಬಂದು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಈ ವ್ಯಾಪಾರಿಗೆ ರಾಜಕೀಯದ ಅನುಭವವಿಲ್ಲ ಜನರ ಕಷ್ಟ-ಸುಖಗಳ ಬಗ್ಗೆ ಅರಿವೇ ಇಲ್ಲ. ಶರಣೆಗೌಡ ಬಯ್ಯಾಪುರ ಅವರು ರಾಜಕೀಯ ಮನೆತನದಿಂದ ಬಂದವರು ಅವರಿಗೆ ಜನರ ಕಷ್ಟ-ಸುಖಗಳ ಬಗ್ಗೆ ಅರಿವಿದೆ. ನಮ್ಮ ತಾಲೂಕಿನ ಮತದಾರರು ಪ್ರಜ್ಞಾವಂತರುದ್ದಾರೆಯಾವುದೇ ಹಣದ ಆಮಿಷಕ್ಕೆ ಬಲಿಯಾಗದೆ ಅಭ್ಯರ್ಥಿಯಾದ ಶರಣೆ ಗೌಡ ಬಯ್ಯಪೂರ್ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸುತ್ತೇವೆ ಎಂದು ಬಸನಗೌಡ ಬಾದರ್ಲಿ ಮಾತನಾಡಿದರು.

ನಗರದ ಸಂಗಮ್ ಪ್ಯಾಲೇಸ್ ನಲ್ಲಿ ನಡೆದ ರಾಯಚೂರು – ಕೊಪ್ಪಳ ಸ್ಥಳೀಯ ಸಂಸ್ಥೆಗಳ ಮತ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಸಭೆಯನ್ನು ತಾಲೂಕ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ವಾಗಿ ಮಾತನಾಡಿದರು.

ನಂತರ ಮಾತನಾಡಿದ ಶರಣೇಗೌಡ ಬಯ್ಯಾಪೂರು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ರಾಜೀವಗಾಂಧಿ ನೇತ್ರತ್ವದ ಸರ್ಕಾರದಲ್ಲಿ, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸೋನಿಯಗಾಂಧಿ ನೇತ್ರತ್ವದಲ್ಲಿ ಜಾರಿಗೆ ತಂದಿದೆ, ಆದರೆ ಬಿಜೆಪಿ ಸರಕಾರ ಚುನಾವಣಾ ಸಂದರ್ಭದಲ್ಲಿ ಸುಳ್ಳು ಭಾಷಣಗಳನ್ನು ಮಾಡುತ್ತಾ ಭರವಸೆಗಳನ್ನು ನೀಡುತ್ತಾ ಬಂದಿರುವುದು ನಿಮಗೆಲ್ಲಾ ಗೊತ್ತಿದೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನರಿಗೆ ಮಾತ್ರ ಮನೆಗಳನ್ನು ನೀಡದೆ, ಎಲ್ಲಾ ಸಮುದಾಯದವರಿಗೂ ಸಿಗಲಿ ಎಂಬ ಉದ್ದೇಶದಿಂದ ಬಸವ ವಸತಿ ಯೋಜನೆ ಜಾರಿಗೆ ತಂದಿದೆ. ಪ್ರತಿಯೊಂದು ಗ್ರಾಮ ಪಂಚಾಯತ್ ಅಭಿವ್ರದ್ದಿ ಯಾಗಬೇಕಾದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನ್ನನ್ನು ಗೆಲ್ಲಿಸಿ ಎಂದು ಮತಯಾಚನೆ ಮಾಡಿದರು.

ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ್ಯಾಲಿ”ಮೂಲಕ ಕಾಂಗ್ರೆಸ್ ಪರಿಷತ್ ಅಭ್ಯರ್ಥಿಯಾದ ಶರಣಗೌಡ ಪಾಟೀಲ್ ಬಯ್ಯಾಪುರ ಅವರನ್ನು ಪಟಾಕಿ ಸಿಡಿಸಿ ಕಾರ್ಯಕ್ರಮದ ವೇದಿಕೆಗೆ ಅದ್ದೂರಿಯಾಗಿ ಸ್ವಾಗತಿಸಿದರು.

ಈ ಸಂಧರ್ಭದಲ್ಲಿ ಎಚ್. ಎನ್. ಬಡಿಗೇರ, ಶಿವುಕುಮಾರ ಜವಳಿ,ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದ್ರಾಕ್ಷಾಯಿಣಿ, ಯೂಸುಫ್ ಪಾಷ ನವಲಿ, ಮುಖಂಡರು,ಪಕ್ಷದ ಚುನಾಯಿತ ನಗರಸಭೆ ಸದ್ಯಸರು, ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಮಹಿಳೆಯರು, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು…

 

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend