ಸಿಂಧನೂರು : ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾನವ ದಿನಗಳನ್ನು ಹೆಚ್ಚಿಸಿ – ಸಿಐಟಿಯು ಒತ್ತಾಯ.
ನಗರದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಜಾರಿ ಸಮಿತಿ ಸಾಲಗುಂದಾ (ಸಿಐಟಿಯು) ವತಿಯಿಂದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾನವ ದಿನಗಳನ್ನು ಹೆಚ್ಚಿಸಬೇಕು ಎಂದು ಮನವಿ ಪತ್ರ ಸಲ್ಲಿಸಿದರು.
ಎರಡೂ ಬಾರಿ ಕೊವಿಡ್ 19ನಿಂದ ಲಾಕಡೌನ್ ನಿಂದಾಗಿ ಗ್ರಾಮೀಣ ಕೃಷಿ ಕಾರ್ಮಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ, ಇತ್ತೀಚೆಗೆ ಸುರಿದ ಸತತ ಮಳೆಯಿಂದಾಗಿ ಸಣ್ಣ ಅತಿಸಣ್ಣ ಮತ್ತು ಇನ್ನಿತರ ರೈತರು ಬಿತ್ತಿದ ಭತ್ತದ ಬೆಳೆ ಹಾಗೂ ಇನ್ನಿತರ ಬೆಳೆಗಳು ನಷ್ಟದಿಂದಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ 100 ದಿನ ಕೆಲಸ ನೀಡುತ್ತಿದ್ದು, ಇನ್ನೂ 50 ದಿನ ಕೆಲಸದ ದಿನಗಳನ್ನು ಹೆಚ್ಚಿಸಿ ಕೆಲಸ ನೀಡಬೇಕು. ತೀವ್ರ ಮಳೆಯಿಂದ ಬೆಳೆ ಹಾನಿಯಾದ ಎಲ್ಲಾ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ಪರಿಹಾರ ನೀಡಬೇಕು. ಈಗಾಗಲೇ ಸರಕಾರ ಮಹಿಳಾ ಮೇಸ್ತ್ರಿಗಳಿಗೆ ಒಂದು ಮಾನವ ದಿನಕ್ಕೆ ರೂ. 5=00 ಹಾಗೂ ಪುರುಷ ಮೇಸ್ತ್ರಿಗಳಿಗೆ ರೂ. 4=00 ಭತ್ಯೆ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗೇಸುದರಾಜ ಮಕಾನದಾರ ಅಧ್ಯಕ್ಷರು, ಚಿದಾನಂದಾ ಗೋರೆಬಾಳ ಉಪಾಧ್ಯಕ್ಷರು, ಗರೀಬಸಾಬ ಕೊಡ್ಲಿ, ಅಳ್ಳಪ್ಪ ಹಡಪದ, ಮಹ್ಮದಸಾಬ ದಿವಾನ, ಸಂಜಿವಪ್ಪ ಗೂಡ್ಯಾಳ, ಇನ್ನೂ ಅನೇಕ ಸದಸ್ಯರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
