ಸಿಂಧನೂರು : ಒಂದು ವಾರದೊಳಗೆ ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಿ-ಮಾಜಿ ಶಾಸಕ ಹಂಪನಗೌಡ ಬಾದರ್ಲಿ.
ಇಂದು ನಗರ ಮತ್ತು ಗ್ರಾಮೀಣ ಬ್ಲಾಕ ಕಾಂಗ್ರೆಸ್ ಸಮಿತಿ ವತಿಯಿಂದ ಶ್ರೀ ಹಂಪನಗೌಡ ಬಾದಲಿ೯ ಮಾಜಿ ಶಾಸಕರು ಇವರ ನೇತೃತ್ವದಲ್ಲಿ ಅಕಾಲಿಕವಾಗಿ ಸುರಿದ ಮಳೆಯಿಂದ ಭತ್ತ, ಹತ್ತಿ, ಜೋಳ ಕಡಲೆ ಮತ್ತು ತೊಗರಿ ಬೆಳೆಗಳು ನಾಶವಾಗಿರುವ ರೈತರಿಗೆ ಸರಕಾರ ಈ ಕೂಡಲೇ ಸವೇ೯ ಮಾಡಿಸಿ, ನಷ್ಟ ಪರಿಹಾರವನ್ನು ನೀಡುವಂತೆ ಒತ್ತಾಯಿಸಿ, ಶ್ರೀಆದಿಶೇಷ ದೇವಸ್ಥಾನದಿಂದ ತಹಶೀಲ್ದಾರರ ಕಾಯ೯ಲದವರೆಗೆ ತೆರಳಿ ಬೃಹತ್ ಪ್ರತಿಭಟನೆ ಮೂಲಕ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಮಾನ್ಯ ತಹಸೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಂಪನಗೌಡ ಬಾದರ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ವ್ಯಾಪ್ತಿಯಲ್ಲಿ ಕಳೆದ 20ದಿನಗಳಿಂದ ನಿರಂತರ ಮಳೆಯಾಗಿ ರೈತರು ಹಾಕಿದ ಬೆಳೆಗಳಾದ ಬತ್ತ , ಜೋಳ, ಹತ್ತಿ, ತೊಗರಿ,ಕಡಲೆ, ಬೆಳೆಗಳು ಸರ್ವನಾಶವಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ದುರ್ದೈವದ ಸಂಗತಿಯೆಂದರೆ ಆರ್ ಎಂ ಆರ್ ಭತ್ತ ತಳಿ ಸಂಪೂರ್ಣ ನೆಲಕಚ್ಚಿದೆ ಅದೇ ರೀತಿ ಸೋನಾಮಸೂರಿ ಭತ್ತ ತಳಿ ಬಳಕೆಯಾಗಿ ಒಂದು ಲಕ್ಷ ಎಕರೆ ಮೇಲ್ಪಟ್ಟವರು ನಾಟಿಮಾಡಿದ ನಷ್ಟವಾಗಿದೆ ಅದೇ ರೀತಿ 80 ಸಾವಿರ ಎಕರೆ ಜೋಳ ಹತ್ತಿ ತೊಗರಿ ಕಡಲೆ ಬೆಳೆಗಳು ಕೂಡ ಅತಿವೃಷ್ಟಿಯಿಂದ ರೋಗ ಬಂದು ಬೆಳೆಗಳು ಸಂಪೂರ್ಣ ನಾಶವಾಗಿರುತ್ತವೆ. ಅದಕ್ಕಾಗಿ 2016ರಲ್ಲಿ ನಮ್ಮ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಆಣೆಕಲ್ಲು ಮಳೆಯಿಂದಾಗಿ ನೆಲಕಚ್ಚಿ ಹೋದಂತಹ ಸಂದರ್ಭದಲ್ಲಿ ಪ್ರತಿ ಎಕರೆಗೆ 25ಸಾವಿರ ರೂ ರೈತರಿಗೆ ನೀಡಿದ ಹಾಗೆಯೇ ಪರಿಹಾರ ನೀಡಬೇಕು ಎಂದು ಮಾತನಾಡಿದರು.
ಕಳೆದ 10 ದಿನಗಳಿಂದ ಪ್ರಕೃತಿ ನಮ್ಮ ವಿರುದ್ಧವಾಗಿದೆ.ರೈತರು ಸಂಕಷ್ಟದಲ್ಲಿದ್ದಾರೆ ಅವರಿಗೆ ಪರಿಹಾರ ಒದಗಿಸಬೇಕು.ಶಾಸಕರು ಅಧಿಕಾರಿಗಳು ಕಾಟಾಚಾರಕ್ಕೆ ರೈತರ ಹೊಲಗಳಿಗೆ ವೀಕ್ಷಣೆ ಮಾಡಿ ಬಂದರೆ ರೈತರು ಹೊಟ್ಟೆ ತುಂಬುವುದಿಲ್ಲ. ರೈತರಿಗೆ ಪರಿಹಾರ ನಷ್ಟ ಬರಿಸಬೇಕು ಒಂದು ವೇಳೆ ವಾರದೊಳಗೆ ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ರೈತರನ್ನು ಒಟ್ಟುಗೂಡಿಸಿ ರಾಜ್ಯ ನಾಯಕರ ಸಮ್ಮುಖದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
ನಿಂಗಪ್ಪ ದಡೆಸೂಗುರು ಮಾತನಾಡಿ ರಾಜ್ಯ ಸರ್ಕಾರದ ಎಲ್ಲಾ ಮಂತ್ರಿಗಳು, ಮುಖ್ಯಮಂತ್ರಿ, ಚುನಾವಣೆಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.ಆದರೆ ಒಬ್ಬ ಮಂತ್ರಿಯೂ ರೈತರ ಸಂಕಷ್ಟ ವಿಚಾರಿಸಲು ಧಾವಿಸಿಲ್ಲ. ಬಿಜೆಪಿಯ ರಾಜ್ಯಾಧ್ಯಕ್ಷರು ನೀತಿ ಸಂಹಿತೆ ಜಾರಿಯಲ್ಲಿದ್ದರೂ ಒಬ್ಬ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಸದಸ್ಯರಿಗೆ ಒಂದು ಕಾರು 10ಸಾವಿರ ಹಣ ನೀಡುವುದಾಗಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ನೀತಿ ಸಂಹಿತೆ ಉಲ್ಲಂಘನೆಯಾಗುದಿಲ್ಲವೇ ? ರೈತರ ಬೆಳೆ ನಷ್ಟ ಪರಿಹಾರ ಘೋಷಣೆ ಮಾಡಲು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ? ಎಂದು ಮಾತನಾಡಿದರು
ಈ ಸಂದರ್ಭದಲ್ಲಿ ಪಂಪನಗೌಡ ಬಾದರ್ಲಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಖಾಜಿ ಮಲ್ಲಿಕ್ ಅಮ್ಮದ್ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಬಾಬುಗೌಡ ಬಾದರ್ಲಿ, ಬಸವರಾಜ ಹಿರೇಗೌಡ, ಲಿಂಗಪ್ಪ ದಡೇಸುಗೂರು, ಜಾಫರ್ ಜಾಗಿರ್ದಾರ್, ಮಲ್ಲಿಕಾರ್ಜುನ್ ಪಾಟೀಲ್ ನಗರಸಭೆ ಅಧ್ಯಕ್ಷರು, ರಾಮಣ್ಣ ಗೋನ್ವಾರ, ಶೇಖರಪ್ಪ ಗಿಣಿವಾರ, ರಾಮಣ್ಣ ಸಾಸಲಮರಿ, ಶರಣೇಗೌಡ, ಬಸನಗೌಡ ರಾಮಣ್ಣ ಗೋನ್ವಾರ, ರೈತರು, ರೈತ ಮುಖಂಡರು, ಗ್ರಾಮ ಪಂಚಾಯತಿಯ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರು, ಜಿ.ಪಂಚಾಯತಿ ಹಾಗೂ ತಾ.ಪಂಚಾಯತಿ ಸದಸ್ಯರು, ನಗರಸಭೆ ಸದಸ್ಯರು , ವಿವಿಧ ಮುಂಚೂಣಿ ಘಟಕದ ಅಧ್ಯಕ್ಷರು, ಸದಸ್ಯರು, ಮಹಿಳಾ ಘಟಕದ ಅಧ್ಯಕ್ಷರು, ಸದಸ್ಯರು ಪಕ್ಷದ ಕಾರ್ಯಕರ್ತರು ಸೇರಿದಂತೆ ಇತರರು ಭಾಗವಹಿಸಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
