;

ಪಟ್ಟಣದಲ್ಲಿ ಭಾರೀ ವಾಹನಗಳ ಹಾವಳಿ,ಇಲಾಖೆಗಳ ಮೌನಸಮ್ಮತಿ.!?

ಪಟ್ಟಣದಲ್ಲಿ ಭಾರೀ ವಾಹನಗಳ ಹಾವಳಿ,ಇಲಾಖೆಗಳ ಮೌನಸಮ್ಮತಿ.!?

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪೊಲೀಸ್ ಠಾಣೆಯ ಮುಂದೆಯೇ ಭಾರೀ ವಾಹನಗಳು ಮಿತಿಮೀರಿದ ವೇಗದಲ್ಲಿ ಸಂಚರಿಸುತ್ತಿದ್ದು,ಇದರಿಂದಾಗಿ ಬೈಕ್ ಸವಾರರು ಹಾಗೂ ಪಾದಾಚಾರಿಗಳು ಸಂಚರಿಸುವುದು ದುಸ್ಥರವಾಗಿದೆ ಎಂದು ನಾಗರೀಕರು ದೂರಿದ್ದಾರೆ. ಬಳ್ಳಾರಿ ರಸ್ಥೆ ಸೇರಿದಂತೆ ಪ್ರಮುಖ ರಸ್ಥೆಗಳ ಮೂಲಕ ಭಾರೀ ವಾಹನಗಳು,ಅತಿ ವೇಗದಲ್ಲಿಯೇ ಪಟ್ಟಣದೆಲ್ಲೆಡೆ ಸಂಚರಿಸುತ್ತವೆ ಇದರಿಂದಾಗಿ ವೃತ್ತಗಳಲ್ಲಿ ವಾಹನ ದಟ್ಟಣೆ ನಿರ್ಮಾಣವಾಗುತ್ತಿದೆ ಎಂದು ನಾಗರೀಕರು ದೂರಿದ್ದಾರೆ. ಭಾರೀ ವಾಹನಗಳನ್ನು ನಿಯಂತ್ರಿಸಬೇಕಾಗಿರೋ ಪೊಲೀಸ್ ಹಾಗೂ ಪಟ್ಟಣ ಪಂಚಾಯ್ತಿ ಇಲಾಖೆಗಳು ಮಾತ್ರ ಮೌನವಹಿಸಿವೆ,ನಿಯಮ ಉಲ್ಲಂಘಸಿದ ವಾಹನಗಳ ವಿರುದ್ಧ ಕ್ರಮ ಜರುಗಿಸಿಲ್ಲ.ಈ ಮೂಲಕ ಭಾರೀ ವಾಹನಗಳ ಸಂಚಾರಕ್ಕೆ ಮೌನ ಸಮ್ಮತಿ ನೀಡಿದಂತಿದೆ ಎಂದು ನಾಗರೀಕರು ದೂರಿದ್ದಾರೆ,ಅಚ್ಚರಿ ಎಂದರೆ ಭಾರೀವಾಹನಗಳು ಪೊಲೀಸ್ ಠಾಣೆಯ ಮುಂದೆಯೇ ಭಾರೀ ಸದ್ದು ಮಾಡುತ್ತ ಮತ್ತು ಅತಿವೇಗವಾಗಿ ಸಂಚರಿಸುತ್ತಿವೆ. ಹಲವು ಬೃಹತ್ ವಾಹನಗಳು ಡಿವೈಎಸ್ಪಿ ಕಚೇರಿ ಮುಂದೆಯೇ ಹಾಗೂ ಠಾಣೆಯ ಮುಂದೆಯೇ ನಿಯಮ ಗಾಳಿಗೆ ತೂರಿ ಸಂಚರಿಸುತ್ತಿವೆ,ಬೈಕ್ ಗೆ ಕೈ ಅಂದು ಮುಗ್ದ ಜನರಿಂದ ದಂಡ ವಸೂಲಿ ಮಾಡೋ ಪೊಲೀಸ್ ಮಹಾನೀಯರು, ಭಾರೀ ವಾಹನಗಳನ್ನೇಕೆ ತಡೆಯುತ್ತಿಲ್ಲ ಹಾಗೂ ಕಡಿವಾಣ ಹಾಕುತ್ತಿಲ್ಲ..?ಎಂದು ಪ್ರಜ್ಞಾವಂತರು ಈ ಮೂಲಕ ಪೋಲೀಸರನ್ನು ಪ್ರೆಶ್ನಿಸಿದ್ದಾರೆ. ನಾಗರಿಕರಿಗೆ ಹಾಗೂ ಪಾದಾಚಾರಿಗಳಲ್ಲಿ ಆತಂಕ ಸೃಷ್ಟಿಸುತ್ತಿರುವ ಟಿಪ್ಪರ್ ಗಳು,ಭಾರೀ ವಾಹನಗಳು ಹಗಲಿರುಳು ಪಟ್ಟಣದಲ್ಲಿ ಅತಿವೇಗದಲ್ಲಿ ಭಾರೀ ಸದ್ದಿನೊಂದಿಗೆ ಸಂಚರಿಸುತ್ತಿವೆ,ಮತ್ತು ವೃತ್ತಗಳಲ್ಲಿ ರಸ್ಥೆ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಸಂಚರಿಸುತ್ತಿವೆ ಎಂದು ನಾಗರೀಕರು ದೂರಿದ್ದಾರೆ. ಆದರೂ ಪೊಲೀಸರು ಹಾಗೂ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ.!? ಇದು ಪ್ರತ್ಯಕ್ಷ ದರ್ಶಿಗಳಲ್ಲಿ ಯಕ್ಷ ಪ್ರೆಶ್ನೆಯಾಗಿ ಉಳಿದಿದೆ.ಸಂಚಾರ ನಿಯಮ ಪಾಲಿಸಬೇಕಾಗಿರುವ ಪ್ರಮುಖ ಸ್ಥಳಗಳಾದ ಕೋರ್ಟ್ ಪೊಲೀಸ್ ಠಾಣೆ ಹಾಗೂ ಆಸ್ಪತ್ರೆ,ಶಾಲಾ ಕಾಲೇಜ್ ಪ್ರಮುಖ ವೃತ್ತಗಳು ಜನನಿಬಿಡ ಸ್ಥಳಗಳಲ್ಲಿಯೇ ಭಾರೀವಾಹನ ಸಂಚಾರದಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ.ಶಾಲಾ ಕಾಲೇಜ್ ವೇಳೆಯಲ್ಲಿ ವಾಹನ ದಟ್ಟಣೆ ನಿಯಂತ್ರಿಸಬೇಕಾಗಿದೆ, ಪ್ರಮುಖ ವೃತ್ತಗಳಲ್ಲಿ ಹಾಗೂ ಪ್ರಮುಖ ರಸ್ಥೆಗಳಲ್ಲಿಯೇ ಭಾರೀವಾಹನಗಳು ರಸ್ಥೆ ನಿಯಮ ಮೀರಿ ಸಂಚರಿಸುತ್ತಿವೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.ಕಾರಣ ಸಂಬಂಧಿಸಿದಂತೆ ಪಟ್ಟಣ ಪಂಚಾಯ್ತಿ ಹಾಗೂ ಪೊಲೀಸ್ ಇಲಾಖೆಯವರು ಭಾರೀ ವಾಹನಗಳ ಹಾವಳಿ ನಿಯಂತ್ರಿಸಬೇಕಿದೆ,ನಿರ್ಲಕ್ಷ್ಯ ತೋರಿದಲ್ಲಿ ಸಂಬಂಧಿಸಿದ ಜಿಲ್ಲಾಮಟ್ಟದ ಅಧಿಕಾರಿಗಳಲ್ಲಿ ಹಾಗೂ ಜಿಲ್ಲಾಧಿಕಾರಿಗಳಲ್ಲಿ,ದೂರು ನೀಡಲಾಗುವುದೆಂದು ನಾಗರೀಕರು ಹಾಗೂ ಹಲವು ಸಂಘ ಸಂಸ್ಥೆಗಳ ಮುಖಂಡರು ಈ ಮೂಲಕ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ…

ವರದಿ. ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;