ಹಂದಿಗುಂದ ಗ್ರಾಮ “”ಸಾರಾಯಿ ಮುಕ್ತ ಗ್ರಾಮ “”ಮಾಡಲು ಜೈ ಹೋ ಜನತಾ ವೇದಿಕೆ ಜಿಲ್ಲಾ ಅಬಕಾರಿ ಕಮಿಷನರ್ ಅವರಿಗೆ ಮನವಿ ನೀಡಲಾಯಿತು.
ಬೆಳಗಾವಿ ಜಿಲ್ಲೆಯ ಚಿಕೋಡಿ ಜಿಲ್ಲಾ ಅಬಕಾರಿ ಕಮಿಷನರ್ ವಿಭಾಗ ಚಿಕೋಡಿ ಇಂದು ದಿನಾಂಕ 19,11,2021ರಂದು ಹಂದಿಗುಂದ ಗ್ರಾಮದ ಜೈ ಹೋ ಜನತಾ ವೇದಿಕೆ ವತಿಯಿಂದ ಜಿಲ್ಲಾ ಅಬಕಾರಿ ಕಮಿಷನರವರನ್ನು ಚಿಕ್ಕೋಡಿ ಕಚೇರಿಯಲ್ಲಿ ಖುದ್ದಾಗಿ ಸಂಘಟನೆಯವರು ಮತ್ತು ಗ್ರಾಮದ ಮುಖಂಡರು ಬೆಟ್ಟಿ ಮಾಡಿ ಗ್ರಾಮದ ಬಗ್ಗೆ ಕಮಿಷನರ್ ರವರಿಗೆ ಮನವರಿಕೆ ಮಾಡಿದರು.
ಹಂದಿಗುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಹದ್ದಿನಲ್ಲಿ ಅಬಕಾರಿ ಇಲಾಖೆಯಿಂದ ಎಂ ಎಸ್ ಐ ಎಲ್ ಹಾಗೂ ಅಂದರೆ (ಬಾರ್ ಮತ್ತು ವೈನ್ ಶಾಪ್ )ಇನ್ನಿತರ ಅಂಗಡಿಗಳ ಪರವಾನಗಿ ನೀಡಬಾರದು ಎಂದು ನಮ್ಮ ವೇದಿಕೆ ಮತ್ತು ಗ್ರಾಮದ ಸಾರ್ವಜನಿಕರಿಂದ ಮನವಿ ಮಾಡಿಕೊಳ್ಳುತ್ತಾ, ಒಂದುವೇಳೆ ತಾವು ಪರವಾನಿಗೆ ನೀಡಿದ್ದೆ ಆದಲ್ಲಿ ನಮ್ಮ ವೇದಿಕೆಯಿಂದ ಉಗ್ರ ಹೋರಾಟ ಮಾಡಲಾಗುವುದು “”ಸಾರಾಯಿ ಮುಕ್ತ ಗ್ರಾಮ “”ವೇದಿಕೆಯ ಉದ್ದೇಶವಾಗಿರುತ್ತದೆ.ಈ ಸಮಯದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ವಸಂತ ಅಂದಾನಿ, ಮಂಜು ಪಾಟೀಲ್, ದಾನಪ್ಪ ಚಿಂಚಲಿ, ಚಿನ್ನಪ್ಪ ಗಗ್ಗರಿ ಇನ್ನೂ ಅನೇಕ ಮುಖಂಡರು ಪಾಲ್ಗೊಂಡಿದ್ದರು.

ವರದಿ :-ಮಹಾಲಿಂಗ ಹ ಗಗ್ಗರಿ ಜಿಲ್ಲಾ ವರದಿಗಾರರು ಬೆಳಗಾವಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
