;

ಶ್ರೀ ರಾಮ ಮಂದಿರ ನಿರ್ಮಾಣ ಪ್ರತಿಯೊಬ್ಬ ಭಾರತೀಯನ ಕನಸು ಶ್ರೀ ಬಸವರಾಜ್.!

ಶ್ರೀ ರಾಮ ಮಂದಿರ ನಿರ್ಮಾಣ ಪ್ರತಿಯೊಬ್ಬ ಭಾರತೀಯನ ಕನಸು ಶ್ರೀ ಬಸವರಾಜ್.!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು: ವಿಶ್ವ ಹಿಂದೂ ಪರಿಷತ್ ಶ್ರೀರಾಮ ಸೇವಾ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಮೊಳಕಾಲ್ಮುರಿನ ಮಾರುತಿ ಬಡಾವಣೆಯಲ್ಲಿ ಪ್ರಭು ಶ್ರೀರಾಮನ ಭವ್ಯ ಮಂದಿರ ನಿರ್ಮಾಣದ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿದರು.  ಈ ಸಂದರ್ಭದಲ್ಲಿ ಶ್ರೀ ಬಸವರಾಜ್ ಕಾರ್ಯದರ್ಶಿಗಳು ವಿಶ್ವ ಹಿಂದೂ ಪರಿಷತ್ (ದಕ್ಷಿಣ ಪ್ರಾಂತ )ಬೆಂಗಳೂರು  ಮಾತನಾಡಿ ಶ್ರೀರಾಮ ಮಂದಿರ ರಾಷ್ಟ್ರಪುರುಷ.  ಮರಿಯಾದೆ ಪುರುಷೋತ್ತಮ. ಪ್ರಭು ಶ್ರೀರಾಮಚಂದ್ರನ ಜನ್ಮಸ್ಥಾನದಲ್ಲಿ ಅಯೋಧ್ಯೆಯ ಮಂದಿರ ನಿರ್ಮಾಣದ ಕನಸು ಭಾರತೀಯನೆಂದು ಅದಕ್ಕಾಗಿ 90ರ ದಶಕದಲ್ಲಿ ಜರುಗಿದ ಕರಸೇವೆ. ಶಿಲಾ.ಹಿಟ್ಟಿಗೆ, ಪೂಜೆ ಕಾರ್ಯಗಳಲ್ಲಿ ಮೊಳಕಾಲ್ಮುರಿನ ಅನೇಕ ಸ್ವಯಂಸೇವಕರು ಭಾಗಿಯಾಗಿರುವುದು  ಇತಿಹಾಸ ನಮ್ಮ ಊರಿಗೂ ಎಮ್ಮೆ. ಅದೇ ರೀತಿ ಮೊಳಕಾಲ್ಮೂರು ನಲ್ಲಿ ಕೂಡ ಭವ್ಯ ಮಂದಿರಕ್ಕೆ ಈ ದಿನ ಪೂಜೆ ಮಾಡಿರುವುದು ನಮಗೆ ಸಂತೋಷದ ವಿಷಯ ಹಾಗೂ ಹೆಮ್ಮೆಪಡುವ ವಿಷಯ ಕೂಡ ಹೌದು ಕೋಟಿ ಕೋಟಿ ಮನಸುಗಳು ಒಂದೇ ಕನಸು ಅಯೋಧ್ಯೆಯಲ್ಲಿ ರಾಮಮಂದಿರ ನನಸಾಗಿಸಿ 2020 ಆಗಸ್ಟ್ 5ರಂದು ನಮ್ಮ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಜಿ ಅವರು ಮಂದಿರಕ್ಕೆ ಅಡಿಗಲ್ಲು ಹಾಕುವುದರ ಮೂಲಕ ಚಾಲನೆ ನೀಡಿದರು. ಅದೇ ಸಂಕಲ್ಪದೊಂದಿಗೆ ನಮ್ಮೂರಿನಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವುದು ಸಂತೋಷದ ವಿಷಯ ಸಂತರು ಮತ್ತು ಹಿಂದೂ  ಬಾಂಧವರು ಮತ್ತು ನೀವು ಎಲ್ಲರೂ ತನು ಮನ ಕಾಣಿಕೆ ಮೂಲಕ ನಮ್ಮೂರಿನಲ್ಲಿ ಕಟ್ಟಡ ನಿರ್ಮಾಣ ಮಾಡೋದಕ್ಕೆ ಕೈಲಾದಷ್ಟು ಸಹಾಯ ಮಾಡಬೇಕು ಎಂದು ಕೋರಿದರು. ಈ ಸಂದರ್ಭದಲ್ಲಿ ಶ್ರೀರಾಮ ಟ್ರಸ್ಟ್ ಅಧ್ಯಕ್ಷರಾದ ಡಿ.ಎಂ ಈಶ್ವರಪ್ಪ.ಮತ್ತು ಕಾರ್ಯದರ್ಶಿಗಳಾದ ಡಾ |ಪಿ.ಎಂ ಮಂಜುನಾಥ್, ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಲಕ್ಷ್ಮಣ್, ಗೋಪಾಲ ,ರಾಮಾಂಜನಿ, ಶಿವು, ಇನ್ನು ಮುಂತಾದವರು ಉಪಸ್ಥಿತರಿದ್ದರು….

 

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;