ಹುಗಲೂರು ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸಾರ್ಥಕ ಸಾಧನೆ!!
ಮಹಿಳೆಯರು ಮನಸ್ಸು ಮಾಡಿದರೆ ಏನನ್ನ ಬೇಕಾದರೂ ಸಾಧಿಸಬಹುದು.ಪ್ರಗತಿ ಹೊಂದ ಬಹುದು ಎಂಬುದಕ್ಕೆ.. ಸಾಕ್ಷಿ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಹುಗಲೂರು ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಒಂದು ಜ್ವಲಂತ ಉದಾಹರಣೆ!!
10 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸುಸಜ್ಜಿತ ವಾಗಿ ನಿರ್ಮಾಣ ವಾಗಿರುವ ನೂತನ ಹಾಲಿನ ಡೈರಿ ಅಭಿವೃದ್ಧಿಯ ಸಂಕೇತ. ಈ ಯೋಜನೆಯ ಗಟ್ಟಿ ನಿರ್ಧಾರಕ್ಕೆ ಬೆಂಬಲವಾಗಿ ಕರ್ನಾಟಕ ಹಾಲು ಮಹಾಮಂಡಳಿ ನಿಗಮ ಬೆಂಗಳೂರು ಇವರು 3.5 ಲಕ್ಷ ರೂಪಾಯಿಗಳ ಅನುದಾನ ನೀಡಿದ್ದಾರೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಧರ್ಮಸ್ಥಳ ಇವರಿಂದ ಅರ್ಥಿಕ ಸಹಾಯವಾಗಿ 1 ಲಕ್ಷ ರೂಪಾಯಿ ನೀಡಿರುತ್ತಾರೆ. ಅರುವರೆ ಲಕ್ಷ ರೂಪಾಯಿ ಗಳ ಉಳಿತಾಯದ ಹಣದಲ್ಲಿ ಕಟ್ಟಡ ನಿರ್ಮಾಣ ಅರಂಭಿಸಿ ಅತ್ಯಂತ ತಗ್ಗು ಪ್ರದೇಶವನ್ನ ಮಣ್ಣು ತುಂಬಿಸುವಷ್ಟರಲ್ಲಿ ಲಕ್ಷ ಕ್ಕೂ ಅಧಿಕ ಹಣ ವ್ಯಯವಾಗಿತ್ತು ನಂತರ ಹರಿದು ಬಂದ ಹಣದಿಂದ ಈಗ ಸುಸಜ್ಜಿತ ನೂತನ ಹಾಲಿನ ಡೈರಿ ನಿರ್ಮಾಣವಾಗಿರುವುದು ಶ್ಲಾಘನೀಯ!! ಈಗೀನ ಭ್ರಷ್ಟ ವ್ಯವಸ್ಥೆಯಲ್ಲಿ ಎಷ್ಟೇ ನೆರವು ಬಂದರೂ, ಸೋರುವ ಕೈಗಳಿಂದ ಕೈಗಳಿಗೆ ಹಣ ಬದಲಾಗಿ, ಅಳೆದು ತೂಗಿ ಸೋರಿಸಿ ಕಾಮಗಾರಿ ನಡೆಸಲು ವರ್ಷಗಟ್ಟಲೆ ಹಿಡಿಯುವ ಕಾಲದಲ್ಲಿ ಅತೀ ಬೇಗವಾಗಿ ಇಡೀ ಕಟ್ಟಡ ಮುಗಿಸಿದ್ದು ನಿಜಕ್ಕೂ ಸಾಧನೆ . ಅತೀ ಶೀಘ್ರದಲ್ಲೇ ನೂತನ ಹಾಲಿನ ಡೈರಿ ಉದ್ಘಾಟನೆ ನಡೆಯಲಿದೆ!!

ವರದಿ : ಅಜಯ.ಚ
ಹೂವಿನ ಹಡಗಲಿ
(ಹುಗಲೂರು)
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
