;

ಮೊಳಕಾಲ್ಮುರು: ನಮ್ಮ ತಾಲೂಕು ಅಭಿವೃದ್ಧಿ ಹೊಂದುವುದೇ ನನ್ನ ಗುರಿ: ಸಚಿವ ಶ್ರೀರಾಮುಲು.!

ಮೊಳಕಾಲ್ಮುರು: ನಮ್ಮ ತಾಲೂಕು ಅಭಿವೃದ್ಧಿ ಹೊಂದುವುದೇ ನನ್ನ ಗುರಿ: ಸಚಿವ ಶ್ರೀರಾಮುಲು.!

ಚಿತ್ರದುರ್ಗ: (ನ,8) ಇಂದು ಮೊಳಕಾಲ್ಮೂರು ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸಚಿವ ಶ್ರೀರಾಮುಲು ಉದ್ಘಾಟನೆ ಮಾಡಿ ಸುಮಾರು 100 ವಾಹನಗಳನ್ನು ಫಲಾನುಭವಿಗಳಿಗೆ ನೀಡಿ ಅವರು ಮಾತನಾಡಿದರು. ಇದು ಒಂದು ದೊಡ್ಡ ಯೋಜನೆ, ಇದು ಸಂಭ್ರಮಾಚರಣೆ ಮಾಡಿಕೊಳ್ಳುವ ಯೋಜನೆ, ನನ್ನ ಅವಧಿಯಲ್ಲಿ ರಾಜ್ಯದಲ್ಲೇ ಪ್ರಥಮವಾಗಿ ನನ್ನ ಕ್ಷೇತ್ರ ದಲ್ಲಿ ಚಿತ್ರದುರ್ಗ ಜಿಲ್ಲೆ ಸುಮಾರು 600 ದ್ವಿಚಕ್ರವಾಹನಗಳನ್ನು ನೀಡುವ ಯೋಜನೆಗೆ  ಚಾಲನೆಗೊಂಡ ಹಿನ್ನೆಲೆಯಲ್ಲಿ ಮೊಳಕಾಲ್ಮೂರು ತಾಲ್ಲೂಕು 100 ದ್ವಿಚಕ್ರ ವಾಹನಗಳನ್ನು ಕೊಟ್ಟು ನನ್ನ ಕೈಲಾದ ಸಹಾಯ ಮಾಡುತ್ತೇನೆ. ಅದೇ ರೀತಿ ನಮ್ಮ ಸರ್ಕಾರ ಮೋದಿಜಿ ಅವರ ಮಹತ್ವಾಕಾಂಕ್ಷಿ ಯೋಜನೆ 100 ಕೋಟಿಗೂ ಅಧಿಕ ಲಸಿಕೆ ನೀಡಿದ ಎಮ್ಮೆ ನಮ್ಮ ಸರ್ಕಾರದ್ದು. ಲಸಿಕೆಯಿಂದ ಮುಂಬರುವ ಯಾವುದೇ ಮಾರಿಯಿಂದ ಮುಕ್ತಿ ಪಡೆಯಬಹುದು ನಮ್ಮ ತಾಲೂಕು ಅಭಿವೃದ್ಧಿ ಹೊಂದುವುದೇ ನನ್ನ ಗುರಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಗಳನ್ನು ತರುವ ಪ್ರಯತ್ನ ಮಾಡುತ್ತೇನೆ ವಿಕಲಚೇತನರು ಯಾರ ಮೇಲೂ ಅವಲಂಬಿತರಾಗಿ ಬರದು. ಅವರ ಸ್ವಂತ ಉದ್ಯೋಗದಲ್ಲಿ ತೊಡಗಿ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಬೇಕು. ನಮ್ಮ ಸರ್ಕಾರ ಮಾಸಾಶನ ಕೂಡ ಹೆಚ್ಚಳ ಮಾಡಿದೆ  ಹಾಗೂ ಸಂಧ್ಯಾಸುರಕ್ಷ ಅದು ಕೂಡ ಹೆಚ್ಚಳ ಮಾಡಿದೆ ಇದೇ ತರ ನನ್ನ ಅವಧಿಯಲ್ಲಿ ದ್ವಿಚಕ್ರ ವಾಹನಗಳನ್ನು ಸುಮಾರು 35 ಸಾವಿರ ವಿಕಲಚೇತನರಿಗೆ ನೀಡುವ ಉದ್ದೇಶ ನನ್ನದಾಗಿದೆ ಎಂದು ತಿಳಿಸಿದರು. ಮಾತನಾಡಿ ಶ್ರೀರಾಮುಲು ನಮ್ಮ ಜಿಲ್ಲೆಗೆ ಸಿಕ್ಕಿರುವುದು ನಮ್ಮ ಅದೃಷ್ಟವೇ ಸರಿ ಶ್ರೀರಾಮುಲು ಅವರಿಂದ ಮುಂದಿನ ದಿನಗಳಲ್ಲಿ ಉತ್ತಮ ಕೆಲಸ ಮಾಡುತ್ತಾರೆ.

ಅದೇ ರೀತಿ ಮಂಡಲ ಅಧ್ಯಕ್ಷರಾದ ಡಾ ಪಿ ಎಂ ಮಂಜುನಾಥ್ ಮಾತನಾಡಿ ನರೇಂದ್ರ ಮೋದಿ ಅವರು ಆಲೋಚನೆಗಳಿಂದ ನಮ್ಮ ದೇಶ ಉತ್ತುಂಗಕ್ಕೇರುತ್ತದೆ. ಕರೋನ ಮಹಾಮಾರಿಯನ್ನು ಓಡಿಸಲು ಇಡೀ ದೇಶದಲ್ಲಿ ಸುಮಾರು 100 ಕೋಟಿ ವ್ಯಾಕ್ಸಿನ್ ಪೂರ್ಣಗೊಂಡಿದೆ ಇದು ಹೆಮ್ಮೆಯ ವಿಷಯ ಅದೇ ರೀತಿ ನಮಗೆ ಶ್ರೀರಾಮುಲು ಸಿಕ್ಕಿರುವುದು ಬರಡು ಭೂಮಿಯಲ್ಲಿ ನೀರು ಸಿಕ್ಕಂತಾಗಿದೆ ಇದರಿಂದ ನಮ್ಮ ತಾಲೂಕು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಪಿ ಲಕ್ಷ್ಮಣ, ತಾಸಿಲ್ದಾರ್ ಟಿ ಸುರೇಶ್ ಕುಮಾರ್, ಜಾನಕಿರಾಮ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿರುವ ಡಾ ನಂದಿನಿ ದೇವಿ, ಡಿಎಚ್ಒ ಡಾ ರಂಗನಾಥ್, ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಶ್ರೀಮತಿ ವೈಶಾಲಿ, ಸಿಡಿಪಿಓ ಸವಿತಾ, ಪಾಪೇಶ್ ಮತ್ತು ಅಖಿಲ ಕರ್ನಾಟಕ ಶ್ರೀರಾಮುಲು ಸೈನ್ಯ ಸಂಸ್ಥಾಪಕ ಬಿ ವಿಜಯ್, ಮುಖಂಡರುಗಳಾದ ಮಂಜುನಾಥ್ ಆಡಳಿತ ವೈದ್ಯಾಧಿಕಾರಿ ಯಾಗಿರುವ ಅಭಿನವ್ ಮತ್ತು ಆಶಾ ಕಾರ್ಯಕರ್ತರು ಹಾಗೂ ಹಾಸ್ಯ ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು…

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;