ಮೊಳಕಾಲ್ಮೂರು: ರೇಷ್ಮೆ ಬೆಳೆಗಾರರು ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕು; ಡಾ.ಅರುಣ್ ಕುಮಾರ್.!

ಮೊಳಕಾಲ್ಮೂರು: ರೇಷ್ಮೆ ಬೆಳೆಗಾರರು ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕು; ಡಾ.ಅರುಣ್ ಕುಮಾರ್.!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಕೊಂಡ್ಲಹಳ್ಳಿ ಗ್ರಾಮದ ಬಿಳಿನೀರು ಚಿಲುಮೆ ದೇವಸ್ಥಾನದ ಸಮೀಪದ
ಬಿ.ಟಿ. ಹನುಮರೆಡ್ಡಿ ತೋಟದಲ್ಲಿ ರೇಷ್ಮೆ ಇಲಾಖೆ ತಾಂತ್ರಿಕ ಸೇವಾ ಕೇಂದ್ರ ಮೊಳಕಾಲ್ಲೂರು ಹಾಗೂ ಕೃಷಿ ಇಲಾಖೆಯ ಆತ್ಮಯೋಜನೆಯ ಸಂಯುಕ್ತಾಶ್ರಯದಲ್ಲಿ ಇಂದು ರೈತರಿಗೆ ಆಯೋಜಿಸಿದ್ದ, ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರೇಷ್ಮೆ ಬೆಳೆಗಾರರಿಗೆ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಮೈಸೂರಿನ ಸಿ.ಎಸ್.ಆರ್.ಟಿ.ಐ ವಿಜ್ಞಾನಿ ಡಾ. ಅರುಣ್ ಕುಮಾರ್ ಹೇಳಿದರು. ಫಲವತ್ತತೆ ಇಲ್ಲದ ಭೂಮಿಯಲ್ಲಿ ರೇಷ್ಮೆಬೆಳೆಯಲ್ಲಿ ಬೇರು ಕೊಳೆ ರೋಗ ಬರುವುದು. ಮಣ್ಣಿನಲ್ಲಿ ಸೂಕ್ಷ್ಮಾಣುಜೀವಿಗಳು ಇದ್ದಾಗ ಫಲವತ್ತಾಗಿರುತ್ತದೆ. ಮಣ್ಣಿನ ಫಲವತ್ತತೆ ಬಗ್ಗೆ ರೇಷ್ಮೆ ಬೆಳೆಗಾರರು ಹೆಚ್ಚು ನಿಗಾವಹಿಸಬೇಕು. ಮಣ್ಣಿನ ಫಲವತ್ತತೆ ಹೆಚ್ಚಿಸುವಲ್ಲಿ ಮಣ್ಣಿಗೆ ಲಘು ಪೋಷಕಾಂಶಗಳು ಅತಿ ಮುಖ್ಯ ಪಾತ್ರ ವಹಿಸುತ್ತವೆ ಎಂದರು. ತೋಳಹುಣಸೆ ರೇಷ್ಮೆತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಹರಿಕೃಷ್ಣ ಎಲೆ ತುಕ್ರ ರೋಗದ ಬಗ್ಗೆ ಮಾಹಿತಿ ನೀಡಿದರು. ರೇಷ್ಮೆ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಬಿ.ಎಲ್. ಕೃಷ್ಣಪ್ಪ, ಸಹಾಯಕ ನಿರ್ದೇಶಕ ಕೆಂಜೋಜಿ ರಾವ್, ಚಿತ್ರದುರ್ಗದ ವಿಜ್ಞಾನಿ ವೈ ಶ್ರೀನಿವಾಸುಲು, ಗ್ರಾಮ ಪಂಚಾಯಿತಿ ಸದಸ್ಯ ಎಸ್.ಕೆ.ನಿಂಗರಾಜ್, ಮೊಳಕಾಲೂರು ತಾಲೂಕು ರೇಷ್ಮೆ ಸಹಾಯಕ ನಿರ್ದೇಶಕ ಎಸ್.ಕೆ.ಪರಮೇಶ್, ಇಲಾಖೆ ಸಿಬ್ಬಂದಿ ಮಹೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು…

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend