ಸಮಾಜದ ಅಭಿವೃದ್ಧಿ ಸರ್ವರೂ ಶ್ರಮಿಸಬೇಕು…!!!

*ಸಮಾಜದ ಅಭಿವೃದ್ಧಿ ಸರ್ವರೂ ಶ್ರಮಿಸಬೇಕು*. ಕೂಡ್ಲಿಗಿ : ಒಗ್ಗಟ್ಟಿನಿಂದ ಸಮಾಜದ ಏಳಿಗೆಗೆ ಸರ್ವರೂ ಶ್ರಮಿಸಿದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು, ವಿಶ್ವಕರ್ಮ ಸಮಾಜದ ಮುಖಂಡ ಮೊರಬ ವೆಂಕಟೇಶ್ ಆಚಾರ್ ನುಡಿದರು. ಅವರು ನ1ರಂದು ಕೂಡ್ಲಿಗಿ ಶ್ರೀಚಿದಂಬರೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿದ. ತಾಲೂಕು ವಿಶ್ವಕರ್ಮ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಂತರ ಸಮಾಜದ ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. *ಪದಾಧಿಕಾರಿಗಳು*- ವಿಶ್ವ ಕರ್ಮ ಸಮಾಜದ ಕೂಡ್ಲಿಗಿ ತಾಲೂಕು ಅಧ್ಯಕ್ಷರಾಗಿ ವಕೀಲರಾದ ಮೊರಬದ ಬಿ.ವೀರಣ್ಣ ಆಚಾರ್, ಉಪಾಧ್ಯಕ್ಷರಾಗಿ ಹೂಡೆಮ್ ಶ್ರೀಧರಚಾರ್, ಪ್ರಧಾನಕಾರ್ಯದರ್ಶಿ ಮೊರಬ ಶರಣಪ್ಪಚಾರಿ, ಸಹ ಕಾರ್ಯದರ್ಶಿ ಕೂಡ್ಲಿಗಿ ಶ್ರೀಧರಚಾರ್, ಖಜಾಂಚಿ ಕೂಡ್ಲಿಗಿ ನಾಗರಾಜ್, ನೇಮಿಸಲಾಯಿತು. ಪ್ರಕಾಶ್ ಆಚಾರ್, ಎಂ.ಬಿ.ಅಯ್ಯನಹಳ್ಳಿ ಎಂ.ಬಿ.ಮಲ್ಲಿಕಾರ್ಜುನಚಾರ್,ಸಾಸಲವಾಡ ವೀರಭದ್ರಚಾರ್, ವಿರುಪಾಪುರ ಚಂದ್ರಚಾರಿ ಸೇರಿದಂತೆ ಇತರರನ್ನು ಸಮಿತಿಯ ಸದಸ್ಯರನ್ನಾಗಿ ಸಭೆಯಲ್ಲಿ ನೇಮಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಕೂಡ್ಲಿಗಿ ಮೌನೇಶ್ ಆಚಾರ್, ಕರಿಯಪ್ಪಚಾರ್, ಮಹದೇವಪುರ ಸಿದ್ದೇಶ್ ಆಚಾರ್, ಭೀಮಚಾರ್, ಮೊರಬ ಚಿನ್ನಾಪುರಚಾರಿ ಸೇರಿದಂತೆ ತಾಲೂಕಿನ ಮುಖಂಡರು ಉಪಸ್ಥಿತರಿದ್ದರು.

✍️ವರದಿ. ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend