ಸರ್ಕಾರಿ ಪ್ರೌಢಶಾಲೆ ಪೂಜಾರಹಳ್ಳಿಯಲ್ಲಿ 66ನೇ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮವನ್ನು ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಮಹೇಂದ್ರ ಚಾರ್ಯರ ಧ್ವಜಾರೋಹಣದ ಕಾರ್ಯಕ್ರಮದ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.ನಂತರ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ಶಿಕ್ಷಕರು ಕರ್ನಾಟಕ ರಾಜ್ಯದ ಉಗಮ ಅಭಿವೃದ್ಧಿ ನಾಡು-ನುಡಿಯ ಬಗ್ಗೆ ಹಾಗೂ ಏಕೀಕರಣದ ವಿಷಯವಾಗಿ ಕನ್ನಡ ಶಿಕ್ಷಕರಾದ ಸಿದ್ದಾರಾಧ್ಯ ಇವರುತಿಳಿಸಿದರು. ಶಾಲೆಯ ಶಿಕ್ಷಕರಾದ ಸುವರ್ಣ,ನಾಗಭೂಷಣ, ನವೀನ್,ಜಯ್ಯಣ್ಣ,ವಿಜಯಕುಮಾರ ಮಾತನಾಡಿ ದರು,ವಿದ್ಯಾರ್ಥಿಗಳು ಮಾತನಾಡಿ ದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶಾಲೆಯ ಮುಖ್ಯಗುರುಗಳಾದ ಶ್ರೀ ಕೆ ಬಸಯ್ಯ ಅವರು ವಹಿಸಿದ್ದರು ಕಾರ್ಯಕ್ರಮವನ್ನು 9ನೇ ತರಗತಿ ವಿದ್ಯಾರ್ಥಿನಿಯರಾದ ಕೆಎಂ ಆಶಾ ನಿರೂಪಿಸಿದರು ಶಾಂತಲಾ ಸ್ವಾಗತ ಬಯಸಿದರು ತೇಜು ವಂದನಾರ್ಪಣೆ ಸಲ್ಲಿಸಿದರು ಈ ಕಾರ್ಯಕ್ರಮದಲ್ಲಿ ಕನ್ನಡನಾಡಿನ ಬಗ್ಗೆ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು….
ವರದಿ, ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
