ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ
ಉಪ ತಾಶೀಲ್ದಾರ್ ಚಂದ್ರಮೋಹನ್ ಇವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿ ಕನ್ನಡ ಭಾಷೆಯನ್ನು ಉಳಿಸಿ ಕನ್ನಡ ಭಾಷೆಯನ್ನು ಬೆಳೆಸುವ ಕೆಲಸ ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಕನ್ನಡದ ನೆಲ ಜಲ ಭಾಷೆಯನ್ನು ರಕ್ಷಿಸುವಂತಹ ಆಗಬೇಕಾಗಿದೆ ಎಂದರು.
ನಂತರ ಗ್ರಾಮ ಪಂಚಾಯಿತಿ ಸದಸ್ಯರಾದ
ಹೊನ್ನೂರಪ್ಪ ಎಂ ಮಾತನಾಡಿ ಕನ್ನಡದ ಯುವ ಸಾಹಿತಿಗಳಿಗೆ ಮತ್ತು ಯುವ ಬರಹಗಾರರಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕು ಎಂದರು. ಯುವ ಪೀಳಿಗೆಯು ಸದಾ ಮೊಬೈಲ್ ಗಿಳಿ ನಲ್ಲಿ ಮುಳುಗದೆ ಸಂಪತ್ಭರಿತವಾದ ಕನ್ನಡ ಸಾಹಿತ್ಯವನ್ನು ಓದುವ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲ ಗೊಳಿಸಬೇಕು. ಈ ಮೂಲಕ ಕನ್ನಡ ಸಾಹಿತ್ಯ ಉಳಿಸಲು ಶರಣಸಾಹಿತ್ಯ ಉಳಿಸಲು ಸಾಧ್ಯ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದಿಂದ ವಿಶೇಷ ಆಸಕ್ತಿ ಹೊಂದಿರುವ ಗ್ರಾಮಲೆಕ್ಕಾಧಿಕಾರಿಗಳ ಆದ ಮುರುಗೇಶ್ ಕುಂಬಾರ್ ಇವರಿಗೆ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮಲೆಕ್ಕಾಧಿಕಾರಿಗಳ ಆದ ಮರುಳಸಿದ್ದಪ್ಪ ಶ್ರೀನಿವಾಸ್ ಕೊಂಡಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಶಿಕ್ಷಕರಾದ ಮಹದೇವಪ್ಪ ಹೇಮಂತ್ ಫೋಟೋ ನಾಗರಾಜ್ ಬಸವರಾಜ್ ಸೇರಿ ಗ್ರಾಮದ ಮುಖಂಡರು ಇತರರು ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
