;

ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಯೋಜನೆ” ಸಸಿಗೆ ನೀರೆರಿಯುವ ಮೂಲಕ ಚಾಲನೆ…!!!

ಸಿಂಧನೂರು : ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಯೋಜನೆಯ ಮುಖ್ಯ ಉದ್ದೇಶ ‌ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಆರೋಗ್ಯ ನೀಡುವುದಾಗಿದೆ. ಈ ಕಿಟ್ ಗಳಿಂದ ಅಸ್ಪತ್ರೆಗೆ ಬಾರದ ವ್ಯಕ್ತಿಗೆ ಉಪಯೋಗಿಸಲು ಅನುಕೂಲವಿದೆ. ಯೋಜನೆಯ ಯಶಸ್ಸಿಗೆ ಎಲ್ಲ‌ರ ಸಹಕಾರ ಅಗತ್ಯ ಇದರ ಬಗ್ಗೆ ಅಧಿಕಾರಿಗಳು ತರಬೇತಿ ನೀಡುವವರು, ಪಂಚಾಯತ ಕಾರ್ಯಪಡೆಯ ಆಶಾಕಾರ್ಯಕರ್ತರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಜನರ ಆರೋಗ್ಯ ತಪಾಸಣೆ ಮಾಡಿ ಕಿಟ್ ಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪವನ್ ಕುಮಾರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಕೆಎಚ್. ಪಿ. ಟಿ ಸಂಸ್ಥೆ ಸಹಯೋಗದಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ “ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಯೋಜನೆ” ಸಸಿಗೆ ನೀರೆರಿಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.ಬಸಾಪುರು,ಗುಂಜಳ್ಳಿ, ಭೂತಲದಿನ್ನಿ, ದಡೇಸುಗೂರು, ದೇವರಗುಡಿ, ಬಾದರ್ಲಿ, ಗೊರೆಬಾಳ, ಅಲಬನೂರು,ಚನ್ನಳ್ಳಿ, ಜಾಲಿಹಾಳ, ಗಾಂಧಿನಗರ, ಹೆಡಗಿನಾಳ ಹೀಗೆ ಕೆಲವು ಗ್ರಾಮಪಂಚಾಯತಿಗಳ ಕಾರ್ಯಪಡೆ ಗಳಿಗೆ ಕೋವಿಡ್ ನಿರ್ವಹಣ ಕೀಟಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಅಮರಗುಂಡಪ್ಪ ಪಂಚಾಯತ್ ರಾಜ್ ಇಲಾಖೆ, ಮನೋಹರ ಮಂಜುನಾಥ ಕೆ.ಎಚ್.ಪಿ.ಟಿ.ಜಿಲ್ಲಾ ಸಂಯೋಜಕರು, ಡಾ. ಜೀವನೇಶ್ವರಯ್ಯ ತಾಲೂಕು ಕೊವಿಡ್ ನಿರ್ವಹಣೆ ನೊಡಲ್ ಅಧಿಕಾರಿ, ಆಶಾ ಮೆಂಚರ್ ಆರೋಗ್ಯಮ್ಮ, ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು,ಆಶಾ ಕಾರ್ಯಕರ್ತರು ಇನ್ನು ಮುಂತಾದವರು ಭಾಗವಹಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;